ದಕ್ಷಿಣ ಆಫ್ರಿಕಾದಲ್ಲಿ ಹಿಂದೂಗಳ ಪಕ್ಷ ಶುರು
Team Udayavani, Dec 17, 2019, 11:06 PM IST
ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಧ್ವನಿಯಾಗಲು ಮತ್ತು ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವ ನಿಟ್ಟಿನಲ್ಲಿ ಹಿಂದೂ ಯುನಿಟಿ ಮೂವ್‌ಮೆಂಟ್ (ಎಚ್‌ಯುಎಂ) ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆಗೊಂಡಿದೆ. ಡರ್ಬಾನ್ ನಿವಾಸಿಯಾಗಿರುವ ಜಯರಾಜ್ ಬಾಚು ಎಂಬುವರು ಹೊಸ ಪಕ್ಷದ ಪ್ರಮುಖರು.
ಅವರಿಗೆ ನೆರವಾಗುವ ದೃಷ್ಟಿಯಿಂದ ದಕ್ಷಿಣ ಆಫ್ರಿಕಾದ ಹಿಂದೂ ಧರ್ಮ ಸಭೆಯ ಅಧ್ಯಕ್ಷ ರಾಮ್ ಮಹಾರಾಜ್ ಅವರನ್ನು ಹೊಸ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದಕ್ಷಿಣ ಆಫ್ರಿಕಾದ ಸ್ಥಳೀಯ, ಪ್ರಾಂತೀಯ, ರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳಿಗೆ ಹೆಚ್ಚಿನ ರಾಜಕೀಯ ಬಲಿಷ್ಠತೆ ತಂದುಕೊಳ್ಳುವ ನಿಟ್ಟಿನಲ್ಲಿ ಪಕ್ಷ ಸ್ಥಾಪನೆಗೆ ನಿರ್ಧಿಸಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯ ಪ್ರತಿನಿಧಿಸುವ ಪಕ್ಷಗಳು ಈಗಾಗಲೇ ಇವೆ.