ಅಬುಧಾಬಿಯ ಮೊದಲ ಹಿಂದು ದೇವಸ್ಥಾನಕ್ಕೆ ಶಿಲಾನ್ಯಾಸ; ಭಾರತೀಯರ ಸಂಭ್ರಮೋಲ್ಲಾಸ

Team Udayavani, Apr 20, 2019, 5:37 PM IST

ದುಬೈ : ಯುಎಇ ರಾಜಧಾನಿ ಅಬುಧಾಬಿಯ ಮೊತ್ತ ಮೊದಲ ಹಿಂದು ದೇವಸ್ಥಾನಕ್ಕೆ ಇಂದು ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಹಿಂದುಗಳ ಭಾಗಿಯಾಗಿ ಅವರ್ಣನೀಯ ಸಂಭ್ರಮೋಲ್ಲಾಸದಲ್ಲಿ ಮಿಂದೆದ್ದರು.

ಈ ದೇವಸ್ಥಾನವನ್ನು ನಿರ್ಮಿಸುತ್ತಿರುವ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್‌) ಇದರ ಆಧ್ಯಾತ್ಮಿಕ ಗುರುಗಳಾದ ಮಹಾಂತ ಸ್ವಾಮಿ ಮಹಾರಾಜ್‌ ಅವರು ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಮಾರು ನಾಲ್ಕು ತಾಸುಗಳ ಕಾಲ ವಿಧ್ಯುಕ್ತವಾಗಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪೂಜಿತ ಇಟ್ಟಿಗೆಗಳನ್ನು ಮುಖ್ಯ ಪೂಜಾ ಸ್ಥಳದಲ್ಲಿ ಸ್ಥಾಪಿಸಲಾಯಿತು.

ಯುಎಇ ಯಲ್ಲಿನ ಭಾರತೀಯ ರಾಯಭಾರಿ ನವದೀಪ್‌ ಸೂರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭಕ್ಕಾಗಿ ಕಳುಹಿಸಿದ ಸಂದೇಶವನ್ನು ಓದಿ ಹೇಳಿದರು. ಮೋದಿ ತಮ್ಮ ಸಂದೇಶದಲ್ಲಿ ಯುಎಇ ಯಲ್ಲಿ ಮೊದಲ ಹಿಂದು ದೇವಾಲಯ ಸ್ಥಾಪನೆ ವಿಷಯದಲ್ಲಿ ಗಲ್ಫ್ ರಾಷ್ಟ್ರ ತೋರಿರುವ ಆಸಕ್ತಿಯನ್ನು ಪ್ರಶಂಸಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ