ಮುಖ ಮುಚ್ಚಿ ವಾರ್ತೆ ಓದಿ: ತಾಲಿಬಾನ್ ಆಡಳಿತ ಹೊಸ ಫರ್ಮಾನು
Team Udayavani, May 20, 2022, 7:01 AM IST
ಕಾಬೂಲ್: “ಟಿವಿ ವಾಹಿನಿಗಳಲ್ಲಿನ ವಾಹಿನಿಗಳಲ್ಲಿ ವಾರ್ತಾ ವಾಚಕಿಯರು ಮುಖ ಮುಚ್ಚಿಕೊಳ್ಳಬೇಕು’ ಹೀಗೆಂದು ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಆಡಳಿತ ಹೊಸ ಫರ್ಮಾನು ಹೊರಡಿಸಿದೆ.
ಇದರಿಂದಾಗಿ 20 ವರ್ಷಗಳ ಹಿಂದೆ ಇದ್ದ ಕಠಿಣ ನಿಲುವಿಗೇ ಉಗ್ರರ ಆಡಳಿತ ಅಂಟಿಕೊಂಡಂತಾಗಿದೆ. ಈ ಬಗ್ಗೆ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.
ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ರಿಯಾಯಿತಿ ನೀಡಲಾಗುವುದಿಲ್ಲ ಎಂದು ಸರ್ಕಾರ ಪ್ರಕಟಿಸಿದೆ.