ಹೌಡಿ ಮೋದಿ ಆಯ್ತು ಈಗ “ಸ್ವಸ್ಡೀ ಪಿಎಂ ಮೋದಿ’

Team Udayavani, Nov 2, 2019, 3:30 PM IST

ಬ್ಯಾಂಕಾಕ್‌ (ಥೈಲೆಂಡ್‌): ಬರೋಬ್ಬರಿ 50 ಸಾವಿರ ಮಂದಿ ಅನಿವಾಸಿ ಭಾರತೀಯರು ನೆರೆದಿದ್ದ ಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಹ್ಯೂಸ್ಟನ್‌ನಲ್ಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾತನಾಡಿದ್ದರು. ಈಗ ಇದೇ ರೀತಿಯ ಸಭೆಯೊಂದರಲ್ಲಿ ಭಾಷಣವನ್ನು ಬ್ಯಾಂಕಾಕ್‌ನಲ್ಲೂ ಮಾಡಲಿದ್ದಾರೆ.

ಹ್ಯೂಸ್ಟನ್‌ ಕಾರ್ಯಕ್ರಮಕ್ಕೆ “ಹೌಡಿ ಮೋದಿ’ (ಹೌ ಡೂ ಯೂ ಡೂ ಮೋದಿ) ಎಂದಿದ್ದರೆ ಬ್ಯಾಂಕಾಕ್‌ ಸಭೆಗೆ ಸ್ವಸ್ಡೀ (ಹಲೋ ಪಿಎಂ ಮೋದಿ) ಎಂಬ ಹೆಸರನ್ನು ಇಡಲಾಗಿದೆ. ಸ್ವಸ್ಡೀ ಎಂದರೆ ಸಂಸ್ಕೃತದಲ್ಲಿ “ಸ್ವಸ್ತಿ’ ಎಂಬ ಅರ್ಥ. ಒಳ್ಳೆಯದಾಗಲಿ ಶುಭವಾಗಲಿ ಎಂಬರ್ಥದಲ್ಲಿ ಈ ಪದವನ್ನು ಥಾಯ್‌ ಭಾಷೆಯಲ್ಲಿ ಬಳಸುತ್ತಾರೆ.

ಶನಿವಾರ ಬೆಳಗ್ಗೆ ಆಸಿಯಾನ್‌ ರಾಷ್ಟ್ರಗಳ ಶೃಂಗ ಮತ್ತು ಆರ್‌ಸಿಇಪಿ ಸಭೆಗಾಗಿ ಪ್ರಧಾನಿ ಮೋದಿ ಥೈಲೆಂಡ್‌ಗೆ ತೆರಳಿದ್ದು, 3 ದಿನ ಅಲ್ಲಿರಲಿದ್ದಾರೆ. ಶನಿವಾರ ಭಾರತೀಯ ಕಾಲಮಾನ 6 ಗಂಟೆಗೆ ಮೋದಿ ಅಲ್ಲಿನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಗುರುನಾನಕರ 550 ಹುಟ್ಟಿದ ವರ್ಷಾಚರಣೆ ಅಂಗವಾಗಿ ನಾಣ್ಯವೊಂದನ್ನೂ ಬಿಡುಗಡೆ ಮಾಡಲಿದ್ದಾರೆ. ನ.3ರಂದು ಪ್ರಧಾನಿ ಮೋದಿ ಅವರು ಥಾಯ್‌ ಪ್ರಧಾನಿ ಪ್ರಯುತ್‌ ಚಾನ್‌ ಒ ಚಾ ಅವರೊಂದಿಗೆ ಆಸಿಯಾನ್‌ ಶೃಂಗದಲ್ಲಿ ಭಾಗಿಯಾಗಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ