ಆರೇಳು ತಿಂಗಳ ಬಳಿಕ ಶಾಲೆಗಳತ್ತ ಮಕ್ಕಳ ಹೆಜ್ಜೆ; ಫ್ರಾನ್ಸ್, ರಷ್ಯಾ, ಬೆಲ್ಜಿಯಂನಲ್ಲಿ ಆರಂಭ
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯಲಾಗಿದೆ.
Team Udayavani, Sep 3, 2020, 9:29 AM IST
ವುಹಾನ್/ಪ್ಯಾರಿಸ್/ಮಾಸ್ಕೋ: ಕೋವಿಡ್ ಸೋಂಕಿನಿಂದ ಆರೇಳು ತಿಂಗಳು ಮನೆಯಲ್ಲೇ ಇದ್ದ ವಿದ್ಯಾರ್ಥಿಗಳು ಇದೀಗ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳತ್ತ ಮುಖ ಮಾಡಿದ್ದಾರೆ. ಚೀನಾದ ವುಹಾನ್, ರಷ್ಯಾ, ಫ್ರಾನ್ಸ್, ಬೆಲ್ಜಿಯಂ, ಇಂಗ್ಲೆಂಡ್ ಸೇರಿದಂತೆ ಐರೋಪ್ಯ ಒಕ್ಕೂಟದ ಹಲವು ರಾಷ್ಟ್ರಗಳಲ್ಲಿ ಈ ವಾರದಿಂದ ಶಾಲೆಗಳನ್ನು ಪುನಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಕೋವಿಡ್ ಭಯ ಭೀತಿಯ ನಡುವೆ ಪೋಷಕರು ಹೆಚ್ಚು ಕಾಳಜಿವಹಿಸಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.
ಚೀನಾ: ಕೊರೊನಾ ವೈರಸ್ ಹುಟ್ಟಿದ ಚೀನಾದ ವುಹಾನ್‌ನಲ್ಲಿ ಏಳು ತಿಂಗಳ ಬಳಿಕ ಸುಮಾರು 2,800 ಕಿಂಡರ್ ಗಾರ್ಡನ್ಸ್, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು ಪುನಾರಂಭವಾಗಿವೆ. ಸುಮಾರು 1.4 ಕೋಟಿ ವಿದ್ಯಾರ್ಥಿಗಳು ಮುಖಗವಸು ಧರಿಸಿ ಕ್ಲಾಸ್‌ಗಳಿಗೆ ಹಾಜರಾಗುತ್ತಿದ್ದಾರೆ. ಪ್ರೌಢಶಾಲೆಗಳನ್ನು ಮೇ ತಿಂಗಳಿನಲ್ಲೇ ತೆರೆಯಲಾಗಿತ್ತು.
ರಷ್ಯಾ: ಕೊರೊನಾ ಸಂಖ್ಯೆಯಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 1.7 ಕೋಟಿ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಫ್ರಾನ್ಸ್, ಬೆಲ್ಜಿಯಂ: ಫ್ರಾನ್ಸ್ ಹಾಗೂ ಬೆಲ್ಜಿಯಂನಲ್ಲಿ ಬೇಸಿಗೆ ರಜೆ ಬಳಿಕ ಮಂಗಳವಾರದಿಂದ (ಸೆ.1) ಶಾಲೆಗಳನ್ನು ಪುನಾರಂಭಿಸಲಾಗಿದ್ದು, ಫ್ರಾನ್ಸ್‌ನಲ್ಲಿ
1.24 ಕೋಟಿ ಮಕ್ಕಳು ಮಾಸ್ಕ್ ಧರಿಸಿಕೊಂಡು ತರಗತಿಗೆ ಹಾಜರಾಗುತ್ತಿದ್ದಾರೆ.
ಇಂಗ್ಲೆಂಡ್: ಇಂಗ್ಲೆಂಡ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೇರ ಸಂಪರ್ಕಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗುತ್ತಿದೆ. ಶಾಲೆಗಳ ಕಾರಿ ಡಾರ್, ಹೆಚ್ಚು ಜನ ಸೇರುವ ಜಾಗಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಸ್ಪೇನ್‌ನಲ್ಲಿ ಆರಂಭಿಸಲಾಗಿರುವ ಶಾಲೆಗ ಳಲ್ಲಿ 5 ಅಡಿ ಅಂತರದೊಂದಿಗೆ ಮಕ್ಕಳನ್ನು ಕೂರಿಸಲಾಗುತ್ತಿದೆ. ಗ್ರೀಸ್‌ನಲ್ಲಿ ಮುಂದಿನ ಸೋಮವಾರದಿಂದ ಶಾಲೆಗಳನ್ನು ಪುನಾರಂಭಿಸಲಾಗುತ್ತಿದೆ. ಜರ್ಮನಿಯಲ್ಲಿ ಕಳೆದ ತಿಂಗಳೇ ವಿದ್ಯಾಸಂಸ್ಥೆಗಳನ್ನು ಪುನಾರಂಭಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA