ರಹಸ್ಯವಾಗಿಯೇ ಜವಾಹಿರಿ ಫಿನಿಶ್‌: ಕಾರ್ಯಾಚರಣೆ ಹೇಗಾಯಿತು?


Team Udayavani, Aug 3, 2022, 6:35 AM IST

thumb-6

ಅಯ್‌ಮಾನ್‌ ಅಲ್‌ ಜವಾಹಿರಿ, ಜಗತ್ತಿನ ಪ್ರಮುಖ ಉಗ್ರ ಸಂಘಟನೆಗಳಲ್ಲಿ ಒಂದಾಗಿರುವ ಅಲ್‌-ಖೈದಾದ ಸದ್ಯದ ಮುಖ್ಯಸ್ಥನನ್ನು ಕೊಲ್ಲಲಾಗಿದೆ. ಆತನನ್ನು ಮುಗಿಸಲು ಅಮೆರಿಕ ಸರಕಾರ ಕೈಗೊಂಡಿದ್ದ ಕಾರ್ಯಾಚರಣೆಯೇ ಕುತೂಹಲಕ್ಕೆ ಕಾರಣವಾಗಿದೆ. ಜು.30ರಂದು ಆತನನ್ನು ಕರಾರುವಾಕ್ಕಾಗಿ ಕಾರ್ಯಾಚರಣೆ ನಡೆಸಿ ಕೊಲ್ಲಲಾಗಿದ್ದರೂ ಅಮೆರಿಕ ಸರಕಾರಅದನ್ನು ಪ್ರಕಟಿಸಿದ್ದು ಮಾತ್ರ ಮಂಗಳವಾರ. ಅಂದ ಹಾಗೆ ಅಲ್‌-ಖೈದಾ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ನೂ° ಇದೇ ಮಾದರಿಯಲ್ಲಿ ಕೊಲ್ಲಲಾಗಿತ್ತು.

ಕಾರ್ಯಾಚರಣೆ ಹೇಗಾಯಿತು?
ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವರ್ಲ್ಡ್ ಟ್ರೇಡ್‌ ಸೆಂಟರ್‌ನ ಅವಳಿ ಕಟ್ಟಡದ ಮೇಲೆ 2001 ಸೆಪ್ಟಂಬರ್‌ 11ರಂದು ನಡೆದಿದ್ದ ದಾಳಿಯ ಸಂಚುಕೋರರಲ್ಲಿ ಅಯ್‌ಮಾನ್‌ ಅಲ್‌ ಜವಾಹಿರಿ ಕೂಡ ಒಬ್ಬ. ಆತನಿಗಾಗಿ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿàಸ್‌ (ಸಿಐಎ) ಅಧಿಕಾರಿಗಳು 21 ವರ್ಷಗಳಿಂದ ನಿರಂತರ ಶೋಧ ನಡೆಸುತ್ತಿದ್ದರು. ಆತ ಬೇರೆ ಬೇರೆ ದೇಶಗಳಿಗೆ ತೆರಳಿ ಅಲ್ಲಿ ಅಡಗಿಕೊಂಡು ಇದ್ದುದರಿಂದ ಸಿಐಎ ಮತ್ತು ಅಮೆರಿಕದ ಸೇನೆ ಶೋಧ ನಡೆಸುತ್ತಿದ್ದರೂ, ಯಶಸ್ಸು ಸಿಕ್ಕಿರಲಿಲ್ಲ.

ಅಫ್ಘಾನಿಸ್ಥಾನದತ್ತ ಕಣ್ಣು
2021ರ ಆಗಸ್ಟ್‌ನಲ್ಲಿ ಅಫ್ಘಾನಿಸ್ಥಾನದಲ್ಲಿ ಆಡಳಿತದ ನೇತೃತ್ವವನ್ನು ತಾಲಿಬಾನ್‌ ಉಗ್ರ ಸಂಘಟನೆ ವಹಿಸಿಕೊಂಡ ಬಳಿಕ ಅಮೆರಿಕ ಆಡಳಿತ ಚುರುಕಾಯಿತು. ಜವಾಹಿರಿ ಎಲ್ಲಿ ಇರಬಹುದು ಎಂಬ ಬಗ್ಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶೋಧಕಾರ್ಯ ನಡೆಸಿದರು. ಅಂತಿಮವಾಗಿ ಜವಾಹಿರಿಯ ಪತ್ನಿ, ಮಕ್ಕಳು ಮತ್ತು ಕುಟುಂಬ ಸದಸ್ಯರು ಕಾಬೂಲ್‌ನಲ್ಲಿ ನೆಲೆಸಿದ್ದಾರೆ ಎಂದು ಖಚಿತಪಡಿಸಿ ಕೊಳ್ಳಲಾಯಿತು. ಜತೆಗೆ ಎಪ್ರಿಲ್‌ನಲ್ಲಿ ಜವಾಹಿರಿ ಕೂಡ ಅಲ್ಲಿಯೇ ನೆಲೆಸಿದ್ದ ಎಂಬ ಅಂಶವನ್ನೂ ಅಮೆರಿಕ ಸೇನಾಪಡೆ ಖಚಿತಪಡಿಸಿಕೊಂಡಿತು.

ಜೂನ್‌ನಲ್ಲಿ ಪ್ಲ್ಯಾನ್
ಜವಾಹಿರಿ ಅಲ್ಲಿಯೇ ಇರುವುದು ಖಚಿತ ಎಂದಾದ ಮೇಲೆ ಜೂನ್‌ನಲ್ಲಿ ಅಮೆರಿ ಕದ ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಸಭೆ ನಡೆಯಿತು. ಕಾಬೂಲ್‌ ನಗರದ ನಿವಾಸದಲ್ಲಿ ಇರುವುದು ಜವಾಹಿರಿಯೇ ಎಂಬುದನ್ನು ಮತ್ತೂಮ್ಮೆ ಖಚಿತಪಡಿಸಲಾಯಿತು. ಆ ಮನೆಯ ನಿರ್ಮಾಣ ವಿನ್ಯಾಸ, ಸುತ್ತಮುತ್ತಲಿನ ಸ್ಥಳಗಳು, ಜನರಿಗೆ ಕನಿಷ್ಠ ಹಾನಿಯ ಬಗ್ಗೆ ಅಧ್ಯಯನ ನಡೆಸಲಾಯಿತು. ಎಲ್ಲ ಅಂಶಗಳನ್ನು ಅಂತಿಮಗೊಳಿಸಿ ಜು.1ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕಾರ್ಯಾಚರಣೆಯ ನೀಲ ನಕ್ಷೆ ಸಲ್ಲಿಸಲಾಯಿತು.

ಜು.25ಕ್ಕೆ ಕೊನೆಯ ಚರ್ಚೆ
ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್‌ನಲ್ಲಿ ಕಾರ್ಯಾಚರಣೆ ನಡೆಸುವ ಬಗ್ಗೆ ಕೊನೆಯ ಹಂತವಾಗಿ ಅಮೆರಿಕ ಉಪಾ ಧ್ಯಕ್ಷೆ ಕಮಲಾ ಹ್ಯಾರಿಸ್‌ ಸೇರಿದಂತೆ ಮತ್ತೂಮ್ಮೆ ಹಿರಿಯ ಅಧಿಕಾರಿಗಳ ಜತೆಗೆ ಪರಾಮರ್ಶೆ ನಡೆಸಲಾಯಿತು.

ಜು.30ಕ್ಕೆ ಫಿನಿಶ್‌
ಕಾಬೂಲ್‌ನಲ್ಲಿ ಇರುವ ಮನೆಯ ಬಾಲ್ಕನಿಯಲ್ಲಿದ್ದಾಗ ಉಗ್ರ ಜವಾಹರಿಯನ್ನು ಗುರಿಯಾಗಿ ಇರಿಸಿಕೊಂಡು ಡ್ರೋನ್‌ ಮೂಲಕ ಹೆಲ್‌ಫೈರ್‌ ಕ್ಷಿಪಣಿ ಉಡಾಯಿಸಿ ಆತನನ್ನು ಕೊಲ್ಲಲಾಯಿತು.

ಹೆಲ್‌ಫೈರ್‌ ಆರ್‌9ಎಕ್ಸ್‌ ಮಿಸೈಲ್‌ ಆಲಿಯಾಸ್‌ ನಿಂಜಾ ಬಾಂಬ್‌!
ಅಂದ ಹಾಗೆ ಅಲ್‌ ಖೈದಾ ಉಗ್ರನನ್ನು ಹತ್ಯೆ ಮಾಡಿದ್ದು ಹೆಲ್‌ಫೈರ್‌ ಆರ್‌9ಎಕ್ಸ್‌ ಎಂಬ ವಿಶೇಷ ರೀತಿಯ ಮಿಸೈಲ್‌ನಿಂದ. ಆತ ಕಾಬೂಲ್‌ನ ಜನನಿಬಿಡ ಕಟ್ಟಡದಲ್ಲಿ ವಾಸಿಸುತ್ತಿದ್ದ. ಹೀಗಾಗಿ ಜನರಿಗೆ ಅಪಾಯ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಹೆಲ್‌ಫೈರ್‌ ಆರ್‌9 ಎಕ್ಸ್‌ ಎಂಬ ಎರಡು ಮಿಸೈಲ್‌ ಅನ್ನು ಬಳಕೆ ಮಾಡಲಾಗಿದೆ. ಅದು ಹಲವು ವಿಶೇಷತೆಗಳನ್ನು ಹೊಂದಿದೆ.

-ಅದು ಲೇಸರ್‌ ಆಧಾರಿತ, ಸಿಡಿತಲೆ ರಹಿತ ಕ್ಷಿಪಣಿಯಾಗಿದೆ. ಅದರಲ್ಲಿ 6 ಉದ್ದನೆಯ ಬ್ಲೇಡ್‌ಗಳಿವೆ.
-ಅದಕ್ಕೆ ಯುದ್ಧ ಟ್ಯಾಂಕ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಇದೆ.
-ಅದನ್ನು ಹೆಲಿಕಾಪ್ಟರ್‌ ಅಥವಾ ವಿಮಾನದಿಂದ ಉಡಾಯಿಸಲಾಗುತ್ತದೆ.
-ಅದರಲ್ಲಿ ಯುದ್ಧದ ಅಗತ್ಯಕ್ಕೆ ತಕ್ಕಂತೆ ಹಲವು ರೀತಿಯ ಆವೃತ್ತಿಗಳು ಇವೆ.
-ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದ ವೇಳೆ ಅದನ್ನು ಅಭಿವೃದ್ಧಿಪಡಿಸಲಾಗಿತ್ತು.
-ನಿರಂತರವಾಗಿ 27 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
-500 ಮೀಟರ್‌ಗಳಿಂದ 11 ಕಿ.ಮೀ. ವರೆಗೆ ಇರುವ ಗುರಿ ಛೇದಿಸುವ ತಾಕತ್ತು.
-ಅದನ್ನು ನಿಂಜಾ ಬಾಂಬ್‌ ಎಂದೂ ಕರೆಯಲಾಗುತ್ತದೆ. 45 ಕೆಜಿ ತೂಕ ಇದೆ
-2017ರ ಮಾರ್ಚ್‌ನಲ್ಲಿ ಅಲ್‌-ಖೈದಾ ನಾಯಕ ಅಬು ಅಲ್‌-ಖಾಯರ್‌ ಅಲ್‌ ಮಸ್ರಿಯನ್ನೂ ಇದೇ ಮಿಸೈಲ್‌ ಮೂಲಕ ಕೊಲ್ಲಲಾಗಿತ್ತು.

ಭಾರತಕ್ಕೂ ಬೆದರಿಕೆ ಒಡ್ಡಿದ್ದ
2001ರ ಬಳಿಕದ ವಿಡಿಯೋಗಳಲ್ಲಿ ಭಾರತದ ಬಗ್ಗೆ ಪ್ರಸ್ತಾವ‌ ಮಾಡಿದ್ದ. ಆದರೆ 2011ರಲ್ಲಿ ಒಸಾಮ ಬಿನ್‌ ಲಾಡೆನ್‌ ಅಸುನೀಗಿದ ಬಳಿಕ ಭಾರತದ ವಿರುದ್ಧ ಹೆಚ್ಚು ನೇರವಾಗಿ ಬೆದರಿಕೆಯ ಮಾತುಗಳನ್ನಾಡಿದ್ದ. 2014ರ ಸೆಪ್ಟೆಂಬರ್‌ನಲ್ಲಿ ಅಫ್ಘಾನಿಸ್ತಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶವನ್ನು ಒಳಗೊಂಡ ಭಾರತೀಯ ಉಪ ಖಂಡಕ್ಕಾಗಿಯೇ ಪ್ರತ್ಯೇಕವಾಗಿ ಇರುವ ಸಂಘಟನೆ (ಅಲ್‌-ಖೈದಾ ಇನ್‌ ದ ಇಂಡಿಯನ್‌ ಸಬ್‌ ಕಾಂಟಿನೆಂಟ್‌) ಸ್ಥಾಪಿಸುವ ಘೋಷಣೆ ಮಾಡಿದ್ದ.

ಮಂಡ್ಯದ ವಿದ್ಯಾರ್ಥಿನಿ ಬಗ್ಗೆ ಶ್ಲಾಘನೆ
ಎಪ್ರಿಲ್‌ನಲ್ಲಿ ರಾಜ್ಯದಲ್ಲಿ ಹಿಜಾಬ್‌ ವಿವಾದ ಉಂಟಾಗಿದ್ದಾಗ 9 ನಿಮಿಷಗಳ ವೀಡಿಯೋ ಬಿಡುಗಡೆ ಮಾಡಿದ್ದ. ಜತೆಗೆ ಮಂಡ್ಯದ ವಿದ್ಯಾರ್ಥಿನಿ ಬಗ್ಗೆ ಕವನ ಬರೆದು ಶ್ಲಾಘನೆ ಮಾಡಿದ್ದ. “ಹಿಂದೂಗಳ ಭಾರತದಲ್ಲಿ ಇರುವ ನೈಜ ಅಂಶವನ್ನು ಬಯಲು ಮಾಡಿದ್ದಕ್ಕೆ ಅಲ್ಲಾಹ್‌ ಅವಳಿಗೆ ಒಳ್ಳೆಯದನ್ನು ಮಾಡಲಿ. ಇದರ ಜತೆಗೆ ಪ್ರಜಾಪ್ರಭುತ್ವ ಅಂದರೆ ಏನು ಎನ್ನುವುದನ್ನೂ ತೋರಿಸಿಕೊಟ್ಟಿದ್ದಾಳೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದ . ವಿದ್ಯಾರ್ಥಿನಿ ತಕಿºàರನ ಕೂಗು ಹಾಕಿದ್ದರಿಂದ ಪ್ರಭಾವಿತನಾಗಿದ್ದೇನೆ ಎಂದು ಜವಾಹಿರಿ ಹೇಳಿಕೊಂಡಿದ್ದ.

ಕಾಶ್ಮೀರ ವಿಚಾರ
2019ರ ಜೂನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ದಲ್ಲಿ ಭಾರತದ ಸೇನೆಯ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದ್ದ. ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ವಿಚಾರವನ್ನು ಖಂಡಿಸಿದ್ದ. “ಕೇಂದ್ರ ಸರಕಾರದ ಕ್ರಮ ಮುಸ್ಲಿಮರ ಮುಖಕ್ಕೆ ನೀಡಿದ ಏಟು’ ಎಂದು ಹೇಳಿದ್ದ. ಜತೆಗೆ ಕಾಶ್ಮೀರ ಮತ್ತು ಪ್ಯಾಲೆಸ್ತೀನ್‌ ಅನ್ನು ಹೋಲಿಕೆ ಮಾಡಿದ್ದ.

ಸಮಾನ ಹೋಲಿಕೆ
ಅಲ್‌ ಖೈದಾ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ ಮತ್ತು ಜವಾಹಿರಿಯನ್ನು ಒಂದೇ ರೀತಿಯ ಕಾರ್ಯಾಚರಣೆಯಲ್ಲಿ ಅಮೆರಿಕ ಕೊಂದು ಹಾಕಿದೆ.
ಲಾಡೆನ್‌: ಪಾಕ್‌ನಲ್ಲಿ ಅವಿತಿದ್ದ ಬಗ್ಗೆ ಅಮೆರಿಕಕ್ಕೆ ಸುಳಿವು
ಜವಾಹಿರಿ: ಸಿಐಎ ನೇತೃತ್ವದ ಕಾರ್ಯಾಚರಣೆ
ಲಾಡೆನ್‌: ಆಪರೇಷನ್‌ ನೆಪೂcನ್‌ ಸ್ಪೇರ್‌ ಜವಾಹಿರಿ: ಹೆಸರು ನೀಡಲಾಗಿಲ್ಲ
ಲಾಡೆನ್‌: ಅಮೆರಿಕದ ಸೀಲ್‌ ಪಡೆಗಳ ಕಾರ್ಯಾಚರಣೆ
ಜವಾಹಿರಿ: ಸಿಐಎ ನಡೆಸಿದ ಡ್ರೋನ್‌ ದಾಳಿ
ಲಾಡೆನ್‌: ಬೆಡ್‌ರೂಂನಲ್ಲಿ ಮಲಗಿದ್ದಾಗ ನುಗ್ಗಿ ಕೊಲ್ಲಲಾಗಿದೆ
ಜವಾಹಿರಿ: ಬಾಲ್ಕನಿಯಲ್ಲಿ ನಿಂತಿದ್ದಾಗ ಡ್ರೋನ್‌ ದಾಳಿ

ಅಲ್‌ ಜವಾಹಿರಿ ಯಾರು?
-ಅಯ್‌ಮಾನ್‌ ಅಲ್‌ ಜವಾಹಿರಿ ಮೂಲತಃ ಈಜಿಪ್ಟ್ನ ಕೈರೋದವನು. ಆತ ವೈದ್ಯಕೀಯ ಪದವಿ ಕಲಿದ್ದಾನೆ ಮತ್ತು ಸರ್ಜರಿ ವಿಚಾರದಲ್ಲಿ ಪರಿಣಿತನೂ ಆಗಿದ್ದಾನೆ. 2011ರಲ್ಲಿ ಅಮೆರಿಕದ ಪಡೆಗಳಿಂದ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಉಗ್ರ ಲಾಡೆನ್‌ ಹತ್ಯೆಯಾದ ಬಳಿಕ ಅಲ್‌ಖೈದಾದ ನೇತೃತ್ವದ ವಹಿಸಿದ್ದ.
-ಒಸಾಮಾ ಬಿನ್‌ ಲಾಡೆನ್‌ ಜೀವಂತ ಇದ್ದಾಗ ಆತನ ಬಲಗೈ ಬಂಟನಾಗಿದ್ದ. ಜವಾಹಿರಿ ಎಂಬ ವ್ಯಕ್ತಿಯ ಬಗ್ಗೆ ಮೊದಲು ಪ್ರಪಂಚಕ್ಕೆ ಗೊತ್ತಾದದ್ದೇ 1981ರಲ್ಲಿ. ಆ ವರ್ಷ ಈಜಿಪ್ಟ್ನ ಅಧ್ಯಕ್ಷರಾಗಿದ್ದ ಅನ್ವರ್‌ ಅಲ್‌ ಸದತ್‌ ಅವರ ಹತ್ಯೆಯವಲ್ಲಿ ಆತ ಭಾಗಿಯಾಗಿದ್ದ. ಅಕ್ರಮ ಶಸ್ತ್ರಾÕಸ್ತ್ರ ಸಾಗಣೆ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.
-ಬಿಡುಗಡೆಯಾದ ಬಳಿಕ ಆತ ಪಾಕಿಸ್ತಾನಕ್ಕೆ ತೆರಳಿದ್ದ. ನಂತರ ಬಿನ್‌ ಲಾಡೆನ್‌ ಜತೆಗೆ ಪರಿಚಯ ಉಂಟಾಯಿತು. ಅಲ್ಲಿ ರೆಡ್‌ ಕ್ರೆಸೆಂಟ್‌ ಎಂಬ ತೀವ್ರವಾದಿ ಸಂಘಟನೆಯ ಜತೆಗೆ ಪರಿಚಯ ಮಾಡಿಕೊಂಡ.
-ಕೀನ್ಯಾ ಮತ್ತು ತಾಂಜೇನಿಯಾದಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ 1998ರಲ್ಲಿ ಬಾಂಬ್‌ ದಾಳಿ ಘಟನೆಯಲ್ಲಿ ಆತನೇ ಸೂತ್ರಧಾರ. 2001ರ 9/11 ಘಟನೆಯ ಪ್ರಧಾನ ಸೂತ್ರಧಾರನಾಗಿಯೂ ಜವಾಹಿರಿ ಇದ್ದಾನೆ. ಆತನ ಮೇಲೆ ಅಮೆರಿಕ ಸರಕಾರ 25 ಮಿಲಿಯನ್‌ ಡಾಲರ್‌ ಮೊತ್ತ ಬಹುಮಾನ ಪ್ರಕಟಿಸಿತ್ತು.
-1951ರಲ್ಲಿ ಕೈರೋದ ಅತ್ಯುನ್ನತ ಕುಟುಂಬದಲ್ಲಿ ಆತನ ಜನನ. ಆತನ ತಂದೆಯವರು ಔಷಧಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 15ನೇ ವರ್ಷದಲ್ಲಿಯೇ ಆತ ಇಸ್ಲಾಮಿಕ್‌ ಮೂಲಭೂತವಾದದ ಸೆಳೆತಕ್ಕೆ ತುತ್ತಾದ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.