ಸಾಜಿದ್ ಸುಳಿವು ನೀಡಿದರೆ 37 ಕೋ. ರೂ
ಅಮೆರಿಕ ಸರ್ಕಾರದಿಂದ ಬಹುಮಾನದ ಘೋಷಣೆ
Team Udayavani, Nov 29, 2020, 12:00 AM IST
ವಾಷಿಂಗ್ಟನ್: ಮುಂಬಯಿ ಮೇಲೆ 26/11 ಉಗ್ರರ ದಾಳಿ ನಡೆದ 12 ವರ್ಷಗಳ ಬಳಿಕ ಅಮೆರಿಕ ಸರಕಾರ, ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್ ಬಗ್ಗೆ ಸುಳಿವು ನೀಡಿದವರಿಗೆ 37 ಕೋಟಿ ರೂ. ಬಹುಮಾನ ಘೋಷಿಸಿದೆ.
ಯುಎಸ್ ರಿವಾರ್ಡ್ಸ್ ಫಾರ್ ಜಸ್ಟೀಸ್ ಪ್ರೋಗ್ರಾಂ ಈ ಕುರಿತಾಗಿ ಪ್ರಕಟನೆ ಹೊರಡಿಸಿದ್ದು, “ಪಾಕಿಸ್ಥಾನ ಮೂಲದ ಲಷ್ಕರ್- ಇ- ತಯ್ಯಬಾ (ಎಲ್‌ಇಟಿ) ಸಂಘಟನೆಯ ಉಗ್ರ ಸಾಜಿದ್ ಮಿರ್, ಭಾರತದ ಮುಂಬಯಿ ಮೇಲೆ 2008ರ ನವೆಂಬರ್‌ನಲ್ಲಿ ಘೋರ ದಾಳಿಗೆ ಪ್ರಮುಖ ಕಾರಣಕರ್ತ. ಈತನ ಬಗ್ಗೆ ಸುಳಿವು ಮತ್ತು ಯಾವುದೇ ದೇಶದಲ್ಲಿ ಈತ ನಡೆಸಿರುವ ದಾಳಿ ಕುರಿತು ನಿಖರ ಮಾಹಿತಿ ನೀಡಿದವರಿಗೆ 37 ಕೋಟಿ ರೂ. ಇನಾಮು ನೀಡಲಾಗುವುದು’ ಎಂದು ತಿಳಿಸಿದೆ.
ಮುಂಬಯಿನಲ್ಲಿನ ಉಗ್ರರ ದಾಳಿ ವೇಳೆ ಸಾವನ್ನಪ್ಪಿದ ಒಟ್ಟು 166 ಮಂದಿಯಲ್ಲಿ 6 ಅಮೆರಿಕನ್ನರೂ ಇದ್ದರು. ಅಲ್ಲದೆ, ವಿದೇಶಿ ಸರಕಾರಗಳ ಆಸ್ತಿಪಾಸ್ತಿ ಹಾನಿಗೊಳಿಸಿದ ಪ್ರಕರಣವೊಂದರಲ್ಲಿ ಸಾಜಿದ್ ವಿರುದ್ಧ ಅಮೆರಿಕದ ಇಲಿನಾಯ್ಸ ಜಿಲ್ಲಾ ನ್ಯಾಯಾಯಲದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444