ಅಮೆರಿಕಾದಲ್ಲಿ ಮರಣಮೃದಂಗ: ಒಂದೇ ದಿನ 3,100 ಮಂದಿ ಬಲಿ, ಸಾವಿನ ಸಂಖ್ಯೆ 50 ಸಾವಿರಕ್ಕೆ ಏರಿಕೆ
Team Udayavani, Apr 24, 2020, 8:00 AM IST
ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ -19 ಮರಣ ಮೃದಂಗ ಮುಂದುವರಿದಿದ್ದು ಗುರುವಾರ ಒಂದೇ ದಿನ 3,100 ಮಂದಿ ಮೃತಪಟ್ಟಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಮೆರಿಕಾದಲ್ಲಿ ಒಟ್ಟಾರೆಯಾಗಿ ಈ ಮಹಾಮಾರಿಗೆ 49, 845 ಜನರು ಪ್ರಾಣ ತ್ಯೆಜಿಸಿದ್ದು 50 ಸಾವಿರದ ಗಡಿ ತಲುಪಿದೆ. ಸೋಂಕಿತರ ಪ್ರಮಾಣದಲ್ಲೂ ಏರಿಕೆಯಾಗಿದ್ದು ಈಗಾಗಲೇ 8,80,204 ಜನರು ವೈರಾಣುವಿನಿಂದ ಬಳಲುತ್ತಿದ್ದಾರೆ. ಆದರೇ ಈ ದೇಶದಲ್ಲಿ ಗುಣಮುಖರಾಗುವರ ಸಂಖ್ಯೆ ಕಡಿಮೆಯಿದ್ದು ಕೇವಲ 85 ಸಾವಿರ ಜನರು ಸೋಂಕಿನಿಂದ ಮುಕ್ತರಾಗಿದ್ದಾರೆಂದು ವರದಿ ತಿಳಿಸಿದೆ.
ಮತ್ತೊಂದೆಡೆ ಇಟಲಿಯನ್ನು ಮೀರಿಸಿ ಸ್ಪೇನ್ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು 2 ಲಕ್ಷಕ್ಕಿಂತ ಹೆಚ್ಚು ಮಂದಿ ಬಳಲುತ್ತಿದ್ದಾರೆ. ಇಲ್ಲಿ ಸಾವಿನ ಪ್ರಮಾಣ 22, 157 ಎಂದು ವರದಿಯಾಗಿದೆ. ಇಟಲಿಯಲ್ಲೂ ಸಾವಿನ ಸಂಖ್ಯೆ 25 ಸಾವಿರ ಗಡಿ ದಾಟಿದ್ದು, ಸೋಂಕಿತರ ಪ್ರಮಾಣ 1,87,973ಕ್ಕೆ ತಲುಪಿದೆ ಎಂದು ಮಾಧ್ಯಮ ಸಂಸ್ಥೆ ತಿಳಿಸಿದೆ.
ಫ್ರಾನ್ಸ್, ಜರ್ಮನಿ, ಇಂಗ್ಲೇಂಡ್ ನಲ್ಲೂ ಈ ವೈರಸ್ ಅಟ್ಟಾಹಾಸ ಮೆರೆಯುತ್ತಿದ್ದು, ಜಗತ್ತಿನಾದ್ಯಂತ 27 ಲಕ್ಷಕ್ಕಿಂತ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮಾತ್ರವಲ್ಲದೆ 1.90 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಮಾರಕ ವೈರಸ್ ನಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ