ಉ.ಕೊರಿಯಾ ವಿರುದ್ಧ ಚೀನಾ ಕ್ರಮ
Team Udayavani, Sep 29, 2017, 6:50 AM IST
ಬೀಜಿಂಗ್: ಪರಮಾಣು, ಹೈಡ್ರೋಜನ್ ಬಾಂಬ್ ಪರೀಕ್ಷಿಸಿ ವಿಶ್ವಕ್ಕೆ ಖಳನಾಯಕನಾಗಿರುವ ಉತ್ತರ ಕೊರಿಯಾ ವಿರುದ್ಧ ಅದರ ಪರಮಾಪ್ತ ರಾಷ್ಟ್ರ ಚೀನಾವೇ ಕಠಿಣ ಕ್ರಮಕ್ಕೆ ಮುಂದಾಗಿದೆ.
ಮುಂದಿನ ಜನವರಿ ಒಳಗಾಗಿ ದೇಶದಲ್ಲಿರುವ ಉತ್ತರ ಕೊರಿಯಾದ ಕಂಪನಿಗಳು ಮುಚ್ಚಬೇಕೆಂದು ಚೀನಾ ಆದೇಶಿಸಿದೆ. ಚೀನಾ ಕಂಪನಿಗಳ ಜತೆ ಪಾಲುದಾರಿಕೆ ಇರುವ ಉ.ಕೊರಿಯಾ ಕಂಪನಿಗಳಿಗೂ ವಿನಾಯಿತಿ ನೀಡಲಾಗಿಲ್ಲ. ಸೆ.11ರಂದು ವಿಶ್ವ ಸಂಸ್ಥೆ ಉತ್ತರ ಕೊರಿಯಾ ವಿರುದ್ಧ ದಿಗ್ಬಂಧನ ವಿಧಿಸಿ 120 ದಿನಗಳು ಪೂರ್ಣಗೊಳ್ಳುತ್ತಲೇ ನಿಯಮ ಜಾರಿಗೆ ಬರುತ್ತದೆ ಎಂದು ಚೀನಾ ವಾಣಿಜ್ಯ ಸಚಿವಾ ಲಯ ತಾಕೀತು ಮಾಡಿದೆ.
ರಷ್ಯಾ ಸೇನೆ ರವಾನೆ: ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚೀನಾ, ಉತ್ತರ ಕೊರಿಯಾ ಗಡಿಗೆ ಸೇನೆ ಕಳುಹಿಸಿಕೊಡಲು ಆದೇಶಿಸಿದ್ದಾರೆ. ರಷ್ಯಾದ ಆಗ್ನೇಯ ಭಾಗದ ಖಸನ್ ಎಂಬಲ್ಲಿರುವ ಝಯೋರ್ನಾಯಾ ಪರ್ವತ ಪ್ರದೇಶದ ಬಳಿಗೆ ಸೇನೆ ರವಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ