
ಇರಾನ್ ಹಿಂಸಾಚಾರಕ್ಕೆ ಅಮೆರಿಕ ಕಾರಣ; ಮೂರು ವಾರಗಳ ಹಿಂಸೆಯಲ್ಲಿ 92ಕ್ಕೂ ಅಧಿಕ ಸಾವು
ಅತ್ಯುನ್ನತ ಧಾರ್ಮಿಕ ನಾಯಕ ಖಮೇನಿ ಆಕ್ರೋಶ
Team Udayavani, Oct 3, 2022, 8:00 PM IST

ದುಬೈ/ತೆಹ್ರಾನ್:ದೇಶದಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಹಿಂಸಾಘಟನೆಗಳಿಗೆ ಅಮೆರಿಕದ ಕುಮ್ಮಕ್ಕು ಕಾರಣ ಎಂದು ಇರಾನ್‌ನ ಅತ್ಯುನ್ನತ ಧಾರ್ಮಿಕ ನಾಯಕ ಆಯತೊಲ್ಲ ಅಲಿ ಖಮೇನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಅನ್ನು ಸರಿಯಾಗಿ ಧರಿಸದೇ ಇದ್ದ ಕಾರಣಕ್ಕಾಗಿ ಪೊಲೀಸರ ಬಂಧನದಲ್ಲಿ ಇದ್ದ ಮಸಾ ಅಮಿನಿ ಅಸುನೀಗಿದ್ದು ದುರದೃಷ್ಟಕರ ಸಂಗತಿ. ಈ ಘಟನೆಯಿಂದ ನೋವು ಉಂಟಾಗಿದೆ. ಇರಾನ್‌ನ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಯೋಜಿತವಾದ ರೀತಿಯಲ್ಲಿ ಪ್ರತಿಭಟನೆಗಳಿಗೆ ಬೆಂಬಲ ನೀಡಲಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ಅಮೆರಿಕ ಎಂದು ಅವರು ಆರೋಪಿಸಿದ್ದಾರೆ.
ಈ ನಡುವೆ ಹಿಂಸಾಚಾರ ಮುಂದುವರಿದ್ದು, ಬರೋಬ್ಬರಿ 92ಕ್ಕಿಂತಲೂ ಅಧಿಕ ಮಂದಿ ಅಸುನೀದಿದ್ದಾರೆ. ಈ ಅಂಶವನ್ನು ನಾರ್ವೆ ಮೂಲದ ಮಾನವ ಹಕ್ಕುಗಳ ಸಂಘಟನೆ- ಇರಾನ್ ಹ್ಯೂಮನ್ ರೈಟ್ಸ್ ದೃಢಪಡಿಸಿದೆ.
ತೆಹ್ರಾನ್ ವಿವಿ ಕ್ಯಾಂಪಸ್‌ಗೆ ಲಗ್ಗೆ:
ಈ ನಡುವೆ, ಇರಾನ್‌ನ ಸೇನೆ ತೆಹ್ರಾನ್ ವಿವಿಯ ಕ್ಯಾಂಪಸ್‌ಗೆ ನುಗ್ಗಿದೆ. ಅಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಯೋಧರು ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ವಿಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
