ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕವೇ ಅಚ್ಚುಮೆಚ್ಚು

Team Udayavani, Nov 19, 2019, 6:44 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ಅಮೆರಿಕ ವೀಸಾ ಮತ್ತು ವಲಸೆ ನೀತಿಗಳು ಬದಲಾದ ಬಳಿಕವೂ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ನೆಚ್ಚಿನ ದೇಶವಾಗಿ ಈ ವರ್ಷವೂ ಮುಂದುವರಿದಿದೆ. 2018-19ರ ಸಾಲಿನಲ್ಲಿ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ. 2.9ರಷ್ಟು ಹೆಚ್ಚಳವಾಗಿದೆ.

ಹೊಸದಾಗಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ. ಆದರೆ ಈ ಪ್ರವೃತ್ತಿ ಅಮೆರಿಕದಲ್ಲಿ ವ್ಯಾಸಂಗ ಮಾಡುವ ಎಲ್ಲ ದೇಶದ ವಿದ್ಯಾರ್ಥಿಗಳಲ್ಲೂ ಕಂಡುಬಂದಿದೆ. ಅಮೆರಿಕಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಚೀನ ಕಳುಹಿಸುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ