ಅಮೆರಿಕದ ಡ್ರೋನ್‌ ಹೊಡೆದುರುಳಿಸಿದ ಇರಾನ್‌

Team Udayavani, Jun 21, 2019, 5:36 AM IST

ಟೆಹ್ರಾನ್‌: ಅಣ್ವಸ್ತ್ರ ಒಪ್ಪಂದ ಕುರಿತು ಇರಾನ್‌ ಮತ್ತು ಅಮೆರಿಕದ ಮಧ್ಯೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆಯೇ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಹೊಡೆದುರುಳಿಸಿದೆ. ತನ್ನ ದೇಶದ ಗಡಿ ಅತಿಕ್ರಮಿಸಿದ್ದಕ್ಕೆ ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದು ಇರಾನ್‌ ಹೇಳಿದ್ದರೆ, ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಡ್ರೋನ್‌ ಹೊಡೆದುರುಳಿ ಸಲಾಗಿದೆ ಎಂದು ಅಮೆರಿಕ ವಾದಿಸಿದೆ.

ಕಳೆದ ವಾರವಷ್ಟೇ ಡ್ರೋನ್‌ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿತ್ತು ಎಂದು ಅಮೆರಿಕ ಆಕ್ಷೇಪಿಸಿತ್ತು. ಅಷ್ಟೇ ಅಲ್ಲ, ಓಮನ್‌ನ ಬಳಿ ತೈಲ ಪೈಪ್‌ಲೈನ್‌ ಮೇಲೆ ದಾಳಿ ನಡೆಸಿದ್ದರಿಂದ ಜಾಗತಿಕ ತೈಲ ವಹಿವಾಟಿನ ಮೇಲೆ ಭಾರೀ ಪರಿಣಾಮ ಉಂಟಾಗಿತ್ತು. ಈ ದಾಳಿಗೆ ಇರಾನ್‌ ಕಾರಣ ಎಂದು ಅಮೆರಿಕ ಆರೋಪಿಸಿದ್ದರೆ, ಇರಾನ್‌ ತಿರಸ್ಕರಿಸಿತ್ತು. ಅಮೆರಿಕ ಮತ್ತು ಇರಾನ್‌ ಮಧ್ಯದ ತಿಕ್ಕಾಟ ಡ್ರೋನ್‌ ಹೊಡೆದುರುಳಿಸಿದ ಅನಂತರ ಇನ್ನಷ್ಟು ತಾರಕಕ್ಕೇರುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ಇರಾನ್‌ ಡ್ರೋನ್‌ ಹೊಡೆದುರುಳಿಸಿದ್ದನ್ನು ಇರಾನ್‌ ಒಪ್ಪಿಕೊಂಡಿದೆ. ಹೀಗಾಗಿ ಅಮೆರಿಕ ಇದಕ್ಕೆ ಪ್ರತೀಕಾರ ತೀರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ