ಸಿಕ್ಕಿಂ ಗಡಿ ಜಟಾಪಟಿ; ಟಿಬೆಟ್ ನಲ್ಲಿ ಚೀನಾ ಸೇನೆಯ ಯುದ್ಧದ ತಾಲೀಮು!
Team Udayavani, Jul 17, 2017, 4:45 PM IST
ನವದೆಹಲಿ:ಭೂತಾನ್-ಟಿಬೆಟ್ ಗಡಿಯ ಡೋಕ್ಲಾಂ ಪ್ರದೇಶದಲ್ಲಿ ದೀರ್ಘಕಾಲ ನೆಲೆಯೂರಲು ಭಾರತೀಯ ಸೇನೆ ಸಿದ್ಧತೆ ನಡೆಸಿದ ಬೆನ್ನಲ್ಲೇ ಚೀನಾ ಟಿಬೆಟ್ ನಲ್ಲಿ ಶಸ್ತ್ರಾಸ್ತ್ರಗಳ ತಾಲೀಮು, ಸೇನಾ ಕವಾಯತು ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಟಿಬೆಟ್ ನ ಕುಗ್ರಾಮ ಪ್ರದೇಶದಲ್ಲಿ ಚೀನಾ ಸೇನೆ ಸುಮಾರು 11 ಗಂಟೆಗಳ ಕಾಲ ಗುಂಡಿನ ದಾಳಿಯ ಶಸ್ತ್ರಾಭ್ಯಾಸ ನಡೆಸಿರುವುದಾಗಿ ಚೀನಾ ಸರ್ಕಾರಿ ಪ್ರಾಯೋಜಿತ ಚೀನಾ ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.
ಆದರೆ ಚೀನಾ ಸೇನಾಪಡೆ ಶಸ್ತ್ರಾಭ್ಯಾಸ ನಡೆಸಿರುವ ಸ್ಥಳದ ನಿಖರ ಹೆಸರನ್ನು ಬಹಿರಂಗಗೊಳಿಸಿಲ್ಲ. ಜಂಟಿ ಸೇನಾದಾಳಿಯ ಕ್ಷಿಪ್ರ ಮಿಲಿಟರಿ ಪಡೆಯ ಯೋಧರು ಯುದ್ಧ ತಾಲೀಮಿನಲ್ಲಿ ಭಾಗವಹಿಸಿದ್ದರು ಎಂದು ವರದಿ ಹೇಳಿದೆ.
ವಿಡಿಯೋದಲ್ಲಿ ಚೀನಾ ಯೋಧರು ಗ್ರೆನೇಡ್ ದಾಳಿ ಹಾಗೂ ಬಂಕರ್ ಅನ್ನು ಹೊಡೆದುರುಳಿಸುವ ಮಿಸೈಲ್ ಪ್ರಯೋಗ ಹಾಗೂ ಹೊವಿಟ್ಜರ್ ಅನ್ನು ಬಳಸಿರುವುದು ಸೆರೆಯಾಗಿದೆ. ಅಷ್ಟೇ ಅಲ್ಲ ಶತ್ರು ದೇಶದ ಯುದ್ಧ ವಿಮಾನಗಳನ್ನು ಪತ್ತೆ ಹಚ್ಚಬಲ್ಲ ರಾಡಾರ್ ದೃಶ್ಯ ಕೂಡಾ ವಿಡಿಯೋದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ