ರೋಬೋ ಮ್ಯಾಲೆ ರೋಷ!
Team Udayavani, Oct 30, 2017, 11:00 AM IST
ರಿಯಾದ್: ಮಹಿಳೆಯರಿಗೆ ಹಲವಾರು ನಿಬಂಧನೆಗಳಿರುವ ಸೌದಿ ಅರೇಬಿಯಾ, ಇತ್ತೀಚೆಗೆ ಸೋಫಿಯಾ ಎಂಬ ಮಹಿಳಾ ರೊಬೋಟ್ಗೆ ಪೌರತ್ವ ನೀಡಿರುವುದು ಆ ದೇಶದ ಮಹಿಳೆಯರ ಕೆಂಗಣ್ಣಿಗೆ ಕಾರಣವಾಗಿದೆ. ಇತರ ಹಲವಾರು ದೇಶಗಳಲ್ಲಿರುವಂಥ ಸ್ವಾತಂತ್ರ್ಯ ಸೌದಿ ಮಹಿಳೆಯರಿಗೆ ಇಲ್ಲ. ಉದಾಹರಣೆಗೆ ಅವರು, ಬುರ್ಖಾ ಧರಿಸಿಯೇ ಮನೆಯಿಂದ ಆಚೆ ಹೊರಡಬೇಕು. ಹೊರಗೆ ಬಂದರೆ, ತನ್ನ ಬೆಂಗಾವಲಿಗಾಗಿ ಆಕೆಯ ಸಂಬಂಧಿಕರಲ್ಲೊಬ್ಟಾತ ಜತೆಯಲ್ಲಿರಲೇ ಬೇಕು. ಆಕೆಯ ಗಂಡ, ತಂದೆ ಅಥವಾ ಯಾವುದೇ ಸಂಬಂಧಿಕನೊಬ್ಬ ಆಕೆಯ ಕಾನೂನು ಸಲಹೆಗಾರರಾಗಿರಲೇಬೇಕು. ಕಾನೂನು ಸಲಹೆಗಾರರಿಲ್ಲದೆ ಆಕೆ ಮದುವೆಯಾಗುವುದು, ಪಾಸ್ಪೋರ್ಟ್ ಪಡೆಯುವುದು, ಪ್ರಯಾಣ ಮಾಡುವುದು ಅಸಾಧ್ಯ ಎಂಬ ಪರಿಸ್ಥಿತಿ ಅಲ್ಲಿದೆ. ಇತ್ತೀಚೆಗಷ್ಟೇ, ಅವರಿಗೆ ಕಾರು ಚಲಾಯಿಸುವ ಅವಕಾಶ ನೀಡಲಾಗಿದ್ದು ಇದು ಸೌದಿ ಮಹಿಳೆಯರಿಗೆ ಸಿಕ್ಕಿರುವ ದೊಡ್ಡ ಕೊಡುಗೆ ಎಂದು ಬಣ್ಣಿಸಲಾಗಿದೆ.
ಹೀಗಿರು ವಾಗ, ಇದ್ಯಾವ ನಿಬಂಧನೆ ಯಿಲ್ಲದ ಸೋಫಿಯಾ ವಿರುದ್ಧ ಸಹಜವಾಗಿ ಅಲ್ಲಿನ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ. ಅಂದಹಾಗೆ, ಸೌದಿ ಮಹಾರಾಜ ನಿರ್ಮಿಸುತ್ತಿರುವ “ನಿಯಾಮ್’ ಎಂಬ 500 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮಹಾ ಕೈಗಾರಿಕಾ ವಲಯದ ಯೋಜನೆ ಯಲ್ಲಿ ಸೋಫಿಯಾ ತೊಡಗಿಸಿಕೊಳ್ಳುತ್ತಿದ್ದಾಳೆ. ಇದನ್ನು ಹಾಂಕಾಂಗ್ ಮೂಲದ ಹ್ಯಾನ್ಸನ್ ರೋಬೋಟಿಕ್ಸ್ ಕಂಪೆನಿ ತಯಾರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ