ಆ್ಯಪ್‌ ಸಾಲದ ಆಪತ್ತು


Team Udayavani, Dec 29, 2020, 6:25 AM IST

ಆ್ಯಪ್‌ ಸಾಲದ ಆಪತ್ತು

ಆನ್‌ಲೈನ್‌ ಮೂಲಕ ಸಾಲ ಕೊಡುವ ಆ್ಯಪ್‌ಗಳು ಕಳೆದೆರಡು ವರ್ಷಗಳಿಂದ ಚಾಲನೆಯಲ್ಲಿದ್ದರೂ ಅವು ಡಿಮ್ಯಾಂಡ್‌ ಪಡೆದುಕೊಂಡಿದ್ದು ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ. ಈ ಸಮಯದಲ್ಲಿ ಅಸಂಖ್ಯಾತ ಜನರ ಕೆಲಸ ಹೋಯಿತು. ಸಂಬಳ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ, ಬಾಡಿಗೆ ಕಟ್ಟುವುದರಿಂದ ಹಿಡಿದು ಯಾವ ಖರ್ಚುಗಳಿಗೂ ಲಾಕ್‌ಡೌನ್‌ ಇರಲಿಲ್ಲ. ಬಹುತೇಕ ಎಲ್ಲ ಬಿಸಿನೆಸ್‌ಗಳು ಸ್ಥಗಿತ ಗೊಂಡಿದ್ದವು. ಜನರ ಕೈಲಿ ಹಣವೇ ಇಲ್ಲದಿದ್ದಾಗ, ಅವರಿಗೆಲ್ಲ ಸುಲಭವಾಗಿ, ಕ್ಷಿಪ್ರಗತಿಯಲ್ಲಿ ಸಿಗುವ ಈ ಆನ್‌ಲೈನ್‌ ಸಾಲದ ಆ್ಯಪ್‌ಗಳು ಆಪತ್ಭಾಂಧವರಂತೆ ಕಂಡದ್ದು ಸುಳ್ಳಲ್ಲ.

ಸಾಲ ಪಡೆಯೋದು ಸುಲಭ!: ಈ ಆನ್‌ಲೈನ್‌ ಲೋನ್‌ ಆ್ಯಪ್‌ಗ್ಳಲ್ಲಿ ಸಾಲ ತೊಗೊಳ್ಳೋದು ಬಹಳ ಸುಲಭ. ನಿಮ್ಮ ಮೊಬೈಲ್‌ನಲ್ಲಿ ಅವರ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡುವುದು, ಆ ಸಮಯದಲ್ಲಿ ಅವರು ನಮ್ಮ ಮೊಬೈಲಿನ ಕಾಂಟಾಕ್ಟ್ ಲಿಸ್ಟ್ ಮತ್ತು SMS ಮೆಸೇಜ್‌ಗಳನ್ನು ಓದಲು ನಮ್ಮ ಅನುಮತಿ ಕೋರುತ್ತಾರೆ. ನಾವು ಆ ಕಂಡೀಷನ್‌ಗೆ ಒಪ್ಪಿದರಷ್ಟೆ ಆ್ಯಪ್‌ ಉಪಯೋಗಿಸಲು ಸಾಧ್ಯವಾಗುವುದು. ನೀವು ಸರಿ ಎಂದು ಒಪ್ಪಿದೊಡನೆಯೇ, ಮುಂದಿನ ಹಂತ, ನಿಮ್ಮ ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ ಕಾಪಿಗಳನ್ನು ಅಲ್ಲಿ ಲಗತ್ತಿಸುವುದು, ಜತೆಗೆ ನಿಮ್ಮ ಬ್ಯಾಂಕ್‌ ಅಕೌಂಟ್‌ನ ಮಾಹಿತಿ ನೀಡುವುದು. ಇಷ್ಟು ಮಾಹಿತಿಗಳನ್ನು ನೀವು ಕೊಟ್ಟ ಅರ್ಧ ಗಂಟೆಯಲ್ಲಿ ನಿಮಗೆ ಸಾಲ ಮಂಜೂರಾಗಿ, ನಿಮ್ಮ ಅಕೌಂಟ್‌ಗೆ ಹಣ ಬಂದುಬಿಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ, ನಿಮ್ಮ ತಿಂಗಳ ಸಂಬಳದಷ್ಟು ಮಾತ್ರ ಸಾಲ ಮಂಜೂರಾಗುತ್ತದೆ.

ಬಡ್ಡಿಯನ್ನು ಕಟ್‌ ಮಾಡಿಕೊಳ್ತಾರೆ!: ಅರೇ, ಸಾಲ ಪಡೆಯು ವುದು ಇಷ್ಟು ಸುಲಭವಾ? ಕ್ಯೂ ನಿಲ್ಲುವಂತಿಲ್ಲ. ಕಾಗದ ಪಾತ್ರಗಳಿಗೆ ಸಹಿ ಹಾಕುವಂತಿಲ್ಲ. ದಾಖಲೆಗಳನ್ನು ತೋರುವಂತೆಯೂ ಇಲ್ಲ ಅಂದಮೇಲೆ ಹೀಗೆ ಸಾಲ ಪಡೆಯುವುದೇ ಅನುಕೂಲಕರ ಅಲ್ಲವೆ ಎಂದು ನೀವೀಗ ಯೋಚಿಸುತ್ತಿದ್ದರೆ, ಅಲ್ಲೇ ನೀವು ಎಡವುತ್ತಿರುವುದು. ನಿಮ್ಮ ತಿಂಗಳ ಸಂಬಳ ಹತ್ತು ಸಾವಿರ ಎಂದರೆ, ಈ ಆ್ಯಪ್‌ನವರು ನಿಮಗೆ ಹತ್ತು ಸಾವಿರ ಸಾಲ ಕೊಡಲು ಒಪ್ಪುತ್ತಾರೆ. ಬಡ್ಡಿಯೂ ಜಾಸ್ತಿ ಇಲ್ಲ. ಕೇವಲ 1%. ಆದರೆ ಅವರ ಪ್ರಾಸೆಸಿಂಗ್‌ ಫೀಸ್‌ ಬಹಳ ದುಬಾರಿ.

ಹತ್ತು ಸಾವಿರ ಸಾಲ ಕೊಡಲು ಪ್ರಾಸೆಸಿಂಗ್‌ ಫೀಸ್‌ ಕನಿಷ್ಠವೆಂದರೂ 3,000 ತೆಗೆದುಕೊಳ್ಳುತ್ತಾರೆ. ಎಖಖ ಎಂದು ತೆಗೆದುಕೊಳ್ಳುವ ಮೊತ್ತವನ್ನು ಸರಕಾರಕ್ಕೆ ಪಾವತಿ ಮಾಡುತ್ತಾರೋ ಗೊತ್ತಿಲ್ಲ. ಸುಮಾರು 500 ರೂ. ಅನ್ನು ಕಟ್‌ ಮಾಡಿಕೊಂಡೇ ಸಾಲ ಮಂಜೂರು ಮಾಡುತ್ತಾರೆ. ಅಂದರೆ, ನೀವು 10,000 ರೂಪಾಯಿ ಸಾಲ ಕೇಳಿದರೆ, ಅಷ್ಟು ಹಣ ಮಂಜೂರಾದರೂ, ಕೈಗೆ ಸಿಗುವುದು ಬರೀ ರೂ 6,500/- ಮಾತ್ರ. ಹೀಗೆ ಪಡೆದ ಸಾಲವನ್ನು ನೀವು ಹತ್ತು ದಿವಸಗಳಲ್ಲಿಯೇ, ಶೇ. 1 ಬಡ್ಡಿಯ ಹಣ ಸೇರಿಸಿ 10,100 ರೂ. ಗಳನ್ನು ವಾಪಸ್‌ ಮಾಡಬೇಕು. ಅಕಸ್ಮಾತ್‌ ಹಣ ಮರಳಿಸಲು ಹತ್ತು ನಿಮಿಷ ತಡವಾದರೂ ಶೇ. 100ರಂತೆ ಪೆನಾಲ್ಟಿ ಬೀಳುತ್ತದೆ.

ಅರ್ಧ ಗಂಟೆ ತಡವಾದರೆ ನಿಮ್ಮ ಕಾಂಟಾಕಕ್ಟ್ ಲಿಸ್ಟ್ ನಲ್ಲಿರುವವರನ್ನೆಲ್ಲ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ, ನಿಮ್ಮ ಫೋಟೋ ಹಾಕಿ, ನೀವು ಫ್ರಾಡ್‌/ ಮೋಸಗಾರರು ಅಂತ ಹೇಳಿ, ಮರ್ಯಾದೆ ಕಳೀತಾರೆ. ಅಷ್ಟೇ ಅಲ್ಲದೆ, ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಪ್ರತಿಯೊಬ್ಬರಿಗೂ- “ಅವರು ನಿಮ್ಮ ಸಾಲಕ್ಕೆ ಶ್ಯೂರಿಟಿಯಾಗಿದ್ದರು. ನೀವು ಸಾಲ ಕಟxದಿರುವ ಕಾರಣ, ಅವರ ಮನೆಬಾಗಿಲಿಗೆ ಸಾಲ ವಸೂಲಿ ಮಾಡಲು ಜನರನ್ನು ಕಳಿಸುತ್ತೇವೆ’ ಎಂಬಂತೆ ಬೆದರಿಸುತ್ತಾರೆ. ಜತೆಗೆ ಅವರೆಲ್ಲರಿಗೂ ಕಾಲ್‌ ಮಾಡಿ, ಸಾಲ ಮರಳಿಸಲು ನಿಮ್ಮ ಗೆಳೆಯರಿಗೆ ಹೇಳಿ ಎಂದೂ ಸಲಹೆ ನೀಡುತ್ತಾರೆ!

ಅದು ಚಕ್ರವ್ಯೂಹ: ನಿಮಗೆ ಸಂಬಳ ಬರಲು ಇನ್ನೂ ಇಪ್ಪತ್ತು ದಿವಸಗಳ ಸಮಯವಿದೆ! ಸಂಬಳವೇ ಬರದೆ, ನೀವು ಹೇಗೆ ಹಣ ವಾಪಸ್‌ ಮಾಡಲು ಸಾಧ್ಯ? ಇಂಥ ಸಂದರ್ಭದಲ್ಲಿ ಮತ್ತದೇ ಆ್ಯಪ್‌ಗ್ಳು ನಿಮ್ಮ ಸಹಾಯಕ್ಕೆ ಬರುತ್ತವೆ. ನೀವು ಇನ್ನೆರಡು ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ, ಅವುಗಳಿಂದ ಸಾಲ ಪಡೆಯಿರಿ, ಮೊದಲನೆಯದನ್ನು ತುಂಬಿ ಎಂಬ ಸಲಹೆ ಬರುತ್ತದೆ! ಹೀಗೆ ನಡೆಯುತ್ತದೆ ಈ ಆನ್‌ಲೈನ್‌ ಮೂಲಕ ಸಾಲ ಕೊಡುವ ಆ್ಯಪ್‌ಗ್ಳ ಹಗಲು ದರೋಡೆ ಕೆಲಸ. ತಿಂಗಳ ಶುರುವಿನಲ್ಲಿ ನೀವು ಪಡೆದ ಹತ್ತು ಸಾವಿರ ಸಾಲ, ತಿಂಗಳ ಕೊನೆಯಾಗುವ ಹೊತ್ತಿಗೆ ಕಡಿಮೆಯೆಂದರೂ ನಲವತ್ತು ಸಾವಿರವಾಗಿರುತ್ತದೆ! ಹಾಗೂ, ಮೊದಲ ಹತ್ತು ಸಾವಿರವನ್ನು ಹೊರತು ಪಡಿಸಿ, ಉಳಿದ ಹಣವನ್ನೆಲ್ಲ, ನೀವು ಈ ಸಾಲ ತೀರಿಸಲೆಂದೇ ಪಡೆದಿರುತ್ತೀರಿ! ಇದೆಲ್ಲವೂ ಪೂರ್ತಿ ಅರ್ಥವಾಗುವ ಹೊತ್ತಿಗೆ ಲೋನ್‌ ಆ್ಯಪ್‌ಗ್ಳ ಚಕ್ರವ್ಯೂಹಕ್ಕೆ ಸಿಲುಕಿರುತ್ತೀರಿ!

ಆಮಿಷಕ್ಕೆ ಮರುಳಾಗಬೇಡಿ: RBI ಮತ್ತು ಕರ್ನಾಟಕ Money Lenders Rules ಪ್ರಕಾರ ವರ್ಷಕ್ಕೆ 16% ಗಿಂತ ಜಾಸ್ತಿ ಬಡ್ಡಿಯನ್ನು ಯಾರಾದರೂ ತೆಗೆದುಕೊಂಡರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸಿಸಿಬಿಯವರಿದ್ದಾರೆ. ಯಾರಾದರೂ ಇಂತಹ ಲೋನ್‌ ಆ್ಯಪ್‌ಗ್ಳಲ್ಲಿ ಸಿಲುಕಿಬಿದ್ದಿದ್ದರೆ ಸಿಸಿಬಿಯವರನ್ನು ಸಂಪರ್ಕಿಸಿ. ಈ ಆ್ಯಪ್‌ಗ್ಳ ಆಮಿಷಕ್ಕೆ ಮರುಳಾಗಿ ಪೂರ್ತಿ ವಿವರ ತಿಳಿಯದೆ ಸಾಲ ಮಾಡಿ, ಅನಂತರ ಆ ಸಾಲ ತೀರಿಸಲು ಮತ್ತಷ್ಟು ಸಾಲ ಮಾಡಿ ನೆಮ್ಮದಿ, ಜೀವನ, ಜೀವ ಕಳೆದುಕೊಳ್ಳದಿರಿ.

ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
ನಾನೀಗ ಕಟ್ಟುತ್ತಾ ಇರುವ ಬಡ್ಡಿಯ ಮೊತ್ತವೇ ಜಾಸ್ತಿ ಆಗಿದೆ. ಆ ಕಾರಣಕ್ಕೆ ಇನ್ನು ಮುಂದೆ ನಾನು ಹಣ ಕೊಡುವುದಿಲ್ಲ ಎಂದು ಸಾಲ ಪಡೆದವರು ಹೇಳಲು ಸಾಧ್ಯವಾಗುವುದಿಲ್ಲ. ಕಾರಣ, ಇದು ಆನ್‌ಲೈನ್‌ ಸಾಲ ಆಗಿರುವುದರಿಂದ, ಈ ಬಗ್ಗೆ ಯಾರ ಬಳಿಯೂ ಮಾತಾಡಲು ಆಗುವುದಿಲ್ಲ. ಎಲ್ಲವೂ ಆ್ಯಪ್‌ಗ್ಳ ನಿಯಂತ್ರಣದಲ್ಲಿ ಇರುತ್ತದೆ. ನಾವು ಸಾಲ ವಾಪಸ್‌ ಕೊಡದೇ ಹೋದರೆ, ಅದೇ ಸಂದೇಶ ನಮ್ಮ ಫ್ರೆಂಡ್‌ ಲಿಸ್ಟ್ ನಲ್ಲಿ ಇರುವ ಎಲ್ಲರ ಮೊಬೈಲ್‌ಗ‌ೂ ಹೋಗಿಬಿಡುತ್ತದೆ! ಆನ್‌ಲೈನ್‌ ಆ್ಯಪ್‌ಗ್ಳ ಮೂಲಕ ಸಾಲ ಪಡೆದು, ಸಕಾಲದಲ್ಲಿ ತೀರಿಸಲು ಆಗದೆ, ಫ್ರೆಂಡ್‌ಗಳ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಹೆದರಿ ಹೈದರಾಬಾದ್‌ ಮತ್ತು ತೆಲಂಗಾಣದಲ್ಲಿ ಐದಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಅಂದಮೇಲೆ, ಈ ಆ್ಯಪ್‌ಗಳ  ಮೂಲಕ ಸಾಲ ಕೊಟ್ಟವರ ಕಿರಿಕಿರಿ ಹೇಗಿರಬಹುದೋ ಅಂದಾಜು ಮಾಡಿಕೊಳ್ಳಿ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.