ಮಿಲಿಟರಿ ಶಸ್ತ್ರಾಸ್ತ್ರಮಾರಾಟದಲ್ಲಿ ಹೆಚ್ಚಳ; ವ್ಯವಹಾರದಲ್ಲಿ ಯು.ಎಸ್. ಕಂಪೆನಿಗಳದ್ದೇ ಪಾರಮ್ಯ

Team Udayavani, Dec 9, 2019, 10:12 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸ್ಟಾಕ್‌ಹೋಮ್: 2018ರಲ್ಲಿ ವಿಶ್ವಾದ್ಯಂತ ಮಿಲಿಟರಿ ಯುದ್ಧೋಪಕರಣಗಳ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ. ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ಹೊರಹಾಕಿದೆ. ಈ ಕುರಿತಾದ ವರದಿ ಸೋಮವಾರದಂದು ಬಿಡುಗಡೆಗೊಂಡಿದೆ.

ಜಗತ್ತಿನ ನೂರು ಹೆಸರಾಂತ ಯುದ್ಧೋಪಕರಣ ತಯಾರಿ ಕಂಪೆನಿಗಳ ಒಟ್ಟು ವ್ಯವಹಾರವೇ 420 ಬಿಲಿಯನ್ ಡಾಲರ್ ನಷ್ಟಾಗಿತ್ತು ಮತ್ತು ಇವುಗಳಲ್ಲಿ ಅಮೆರಿಕಾ ದೇಶದ ಕಂಪೆನಿಗಳದ್ದೇ ಸಿಂಹಪಾಲು ಎಂಬುದು ಇನ್ನೊಂದು ಗಮನಾರ್ಹ ಅಂಶವಾಗಿದೆ.

ಒಟ್ಟು ಜಾಗತಿಕ ಮಾರುಕಟ್ಟೆಯ 59 ಪ್ರತಿಶತ ವ್ಯವಹಾರವನ್ನು ಅಮೆರಿಕಾದ ಶಸ್ತ್ರಾಸ್ತ್ರ ಕಂಪೆನಿಗಳೇ ದಾಖಲಿಸಿರುವುದು ಈ ಕ್ಷೇತ್ರದಲ್ಲಿ ಅಮೆರಿಕಾ ಹೊಂದಿರುವ ಪಾರಮ್ಯಕ್ಕೆ ಸಾಕ್ಷಿಯಾಗಿದೆ. ಈ ಕಂಪೆನಿಗಳು ಒಟ್ಟಾರೆ 246 ಬಿಲಿಯನ್ ಡಾಲರ್ ವ್ಯವಹಾರವನ್ನು ದಾಖಲಿಸಿದ್ದು ಇದು 2017ರ ವಹಿವಾಟಿಗಿಂತ 7.2 ಪ್ರತಿಶತ ಅಧಿಕವಾಗಿದೆ.

ಚೀನಾ ಮತ್ತು ರಷ್ಯಾ ದೇಶಗಳಿಗೆ ಪ್ರತಿಸ್ಪರ್ಧಿಯಾಗಿ ಮೂಡಿಬರಲು ಟ್ರಂಪ್ ಆಡಳಿತವು ತನ್ನ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸಲು ನಿರ್ಧರಿಸಿದ್ದೇ ಅಮೆರಿಕಾ ಶಸ್ತ್ರಾಸ್ತ್ರ ಮಾರಾಟ ಕಂಪೆನಿಗಳಿಗೆ ವರದಾನವಾಗಿ ಪರಿಣಮಿಸಿತ್ತು.

ಇನ್ನು ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರಗಳಲ್ಲಿ ರಷ್ಯಾ ದ್ವಿತೀಯ ಸ್ಥಾನದಲ್ಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ 8.6 ಪ್ರತಿಶತ ಪಾಲನ್ನು ಹೊಂದುವ ಮೂಲಕ ಈ ಸಾಧನೆಯನ್ನು ದಾಖಲಿಸಿದೆ. ನಂತರದ ಎರಡು ಸ್ಥಾನಗಳಲ್ಲಿ ಇಂಗ್ಲಂಡ್ ಮತ್ತು ಫ್ರಾನ್ಸ್ ದೇಶಗಳಿದ್ದು ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಇವುಗಳ ಪಾಲು ಕ್ರಮವಾಗಿ 8.4 ಮತ್ತು 5.5 ಪ್ರತಿಶತಗಳಾಗಿವೆ.

ಸೂಕ್ತ ಮಾಹಿತಿ ಅಲಭ್ಯತೆಯಿಂದಾಗಿ ಈ ಸಮೀಕ್ಷೆಯಲ್ಲಿ ಚೀನಾ ದೇಶವನ್ನು ಪರಿಗಣಿಸಿಲ್ಲವಾದರೂ ಒಂದು ಅಂದಾಜಿನ ಪ್ರಕಾರ ಚೀನಾದ ಮೂರರಿಂದ ಏಳು ಕಂಪೆನಿಗಳು ಜಗತ್ತಿನ ನೂರು ಪ್ರಮುಖ ಶಸ್ತ್ರಾಸ್ತ್ರ ತಯಾರಿ ಕಂಪೆನಿಗಳಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ಅಂದಾಜಿಸಲಾಗುತ್ತಿದೆ.

ಅಮೆರಿಕಾ ಮೂಲದ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯಾಗಿರುವ ಲಾಕ್ ಹೀಡ್ ಮಾರ್ಟಿನ್ 2009ರಿಂದಲೇ ವಿಶ್ವದ ಅತೀದೊಡ್ಡ ಶಸ್ತ್ರಾಸ್ತ್ರ ತಯಾರಿ ಕಂಪೆನಿ ಪಟ್ಟದಲ್ಲಿದೆ ಮತ್ತು ಕಳೆದ ವರ್ಷ ಈ ಕಂಪೆನಿಯು 47.3 ಬಿಲಿಯನ್ ಡಾಲರ್ ವ್ಯವಹಾರವನ್ನು ದಾಖಲಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

  • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

  • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...