ಚೀನದ ನಡೆಗೆ ‘ಆಸಿಯಾನ್’ ಆಕ್ಷೇಪ
Team Udayavani, Jun 27, 2020, 6:26 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹನೋಯ್: ದಕ್ಷಿಣ ಚೀನ ಸಮುದ್ರ ಮೇಲೆ ಹಕ್ಕು ಸ್ಥಾಪಿಸಲು ಹೊರಟಿರುವ ಚೀನದ ದುರ್ವರ್ತನೆ ಬಗ್ಗೆ ಆಸಿಯಾನ್ ರಾಷ್ಟ್ರಗಳು ಗಂಭೀರವಾಗಿ ಚರ್ಚಿಸಿವೆ.
ವಿಯೆಟ್ನಾಂನ ಹನೋಯ್‌ನಲ್ಲಿ ನಡೆದ 36ನೇ ಆಸಿಯಾನ್ ವರ್ಚುವಲ್ ಶೃಂಗಸಭೆಯಲ್ಲಿ ಚೀನದ ಇತ್ತೀಚಿನ ದ್ವೇಷಪೂರಿತ ನಡೆಗಳ ಬಗ್ಗೆ ಸದಸ್ಯ ರಾಷ್ಟ್ರಗಳಿಂದ ಆಕ್ಷೇಪಗಳು ಕೇಳಿಬಂದಿವೆ.
ಚೀನದ ದುರಾಕ್ರಮಣ ನೀತಿಯ ಕುರಿತು ಸಭೆಯಲ್ಲಿ ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಷ್ಯಾ, ಬ್ರುನೈ ರಾಷ್ಟ್ರಗಳು ಪ್ರಸ್ತಾಪಿಸಿವೆ. ‘ಚೀನ ನಡೆಯಿಂದಾಗಿ ದಕ್ಷಿಣ ಚೀನ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ’ ಎಂದು ದೂರಿವೆ.
ನಿಧಿ ಸ್ಥಾಪನೆ: ಕೋವಿಡ್ 19 ಸೋಂಕು ಬಿಕ್ಕಟ್ಟನ್ನು ಒಗ್ಗಟ್ಟಿನಿಂದ ಎದುರಿಸಲು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘವು (ಆಸಿಯಾನ್) ಕೋವಿಡ್ 19 ಪರಿಹಾರ ನಿಧಿ ಸ್ಥಾಪಿಸಲು ನಿರ್ಣಯ ಕೈಗೊಂಡಿದೆ. ಸದಸ್ಯ ರಾಷ್ಟ್ರಗಳಿಗೆ ವೈದ್ಯಕೀಯ ಮೂಲಸೌಕರ್ಯ, ಕೋವಿಡ್ 19 ಸೋಂಕು ಬಿಕ್ಕಟ್ಟಿನ ಇನ್ನಿತರೆ ಪರಿಹಾರ ಒದಗಿಸಲು ಈ ನಿಧಿ ಬಳಕೆಯಾಗಲಿದೆ.