‘ಇಮ್ರಾನ್ ಒಬ್ಬ ಬ್ಯಾಕ್ ಸೀಟ್ ಡ್ರೈವರ್’-ಪಾಕ್ ಮಾಜಿ ಅಧ್ಯಕ್ಷ ಜರ್ದಾರಿ
Team Udayavani, Feb 21, 2019, 4:19 AM IST
ಇಸ್ಲಮಾಬಾದ್: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಗೆ ಯಾವುದೇ ಅಂತಾರಾಷ್ಟ್ರೀಯ ರಾಜಕಾರಣದ ಯಾವುದೇ ಅನುಭವವಿಲ್ಲ. ಪುಲ್ವಾಮಾ ದಾಳಿಯ ನಂತರ ಪಾಕ್ ಮೇಲೆ ಭಾರತ ನಡೆಸಿದ ಆರೋಪಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಾಕಿಸ್ಥಾನ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಮಾಜಿ ಅಧ್ಯಕ್ಷ, ಇಮ್ರಾನ್ ಖಾನ್ ರಾಜಕೀಯದಲ್ಲಿ ಇನ್ನೂ ಪಕ್ವವಾಗಿಲ್ಲ. ಅವರಿಗೆ ದೇಶ ನಡೆಸಲು ಗೊತ್ತಿಲ್ಲ. ‘ಇಮ್ರಾನ್ ಒಬ್ಬ ಬ್ಯಾಕ್ ಸೀಟ್ ಡ್ರೈವರ್ ’ ಎಂದು ಜರಿದರು.
ಮುಂದುವರಿದು ಮಾತನಾಡಿದ ಜರ್ದಾರಿ, ನನ್ನ ಆಡಳಿತಾವಧಿಯಲ್ಲಿ ಮುಂಬೈ ದಾಳಿ ನಡೆದಿತ್ತು. ಆ ಸಮಯದಲ್ಲಿ ಕೂಡಾ ಭಾರತ ಪಾಕಿಸ್ಥಾನದ ಮೇಲೆ ಆರೋಪ ಮಾಡಿತ್ತು. ಆದರೆ ಆಗ ಪಾಕಿಸ್ಥಾನ ರಾಜತಾಂತ್ರಿಕವಾಗಿ ಈ ಘಟನೆಯನ್ನು ನಿಭಾಯಿಸುವಲ್ಲಿ ಸಫಲವಾಗಿತ್ತು. ಆದರೆ ಈಗ ಇಮ್ರಾನ್ ಖಾನ್ ಬೇರೆಯವರ ಆಜ್ಞೆಯಂತೆ ಅಧಿಕಾರ ನಡೆಸುತ್ತಿದ್ದಾರೆ. ಅದಕ್ಕೆ ಅವರನ್ನು ಹಿಂದಿನ ಸೀಟಿನ ಚಾಲಕ ಎನ್ನುತ್ತೇನೆ ಎಂದು ಪ್ರಧಾನಿ ಮೇಲೆ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು