ಚೀನಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ 12 ಸಾವು, ಹಲವರಿಗೆ ಗಾಯ

Team Udayavani, Jun 18, 2019, 10:41 AM IST

ಯಿಬಿನ್‌:ನೈರುತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚೀನಾದ ಭೂಕಂಪ ಸಂಪರ್ಕ ಕೇಂದ್ರದ ವರದಿಯ ಪ್ರಕಾರ ರಾತ್ರಿ 10.55 ರ ವೇಳೆ ಭೂಕಂಪ ಸಂಭವಿಸಿದ್ದು,ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿತ್ತು.

ಭೂಕಂಪದಿಂಗಾಗಿ ಹಲವು ಮನೆಗಳು, ಕಟ್ಟಡಗಳು ಕುಸಿದಿವೆ. ರಸ್ತೆಗಳು ಹಾನಿಗೀಡಾಗಿದ್ದು ಸಂಚಾರ ಸಾಧ್ಯವಾಗುತ್ತಿಲ್ಲ. ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲಾಗಿದೆ.

ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು, ಹಲವರನ್ನು ರಕ್ಷಿಸಲಾಗಿದೆ.

ಈ ಪ್ರಾಂತ್ಯ ನಿರಂತರ ಭೂಕಂಪದಿಂದಲಾಗಿ ನಲುಗಿ ಹೋಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ