ನ್ಯೂಜೆರ್ಸಿಯಲ್ಲಿ ಗುಂಡಿನ ಚಕಮಕಿ: ಪೊಲೀಸ್ ಅಧಿಕಾರಿ, ಬಂದೂಕುಧಾರಿ ಸೇರಿದಂತೆ ಆರು ಮಂದಿ ಬಲಿ

Team Udayavani, Dec 11, 2019, 8:12 AM IST

ನ್ಯೂಯಾರ್ಕ್: ನ್ಯೂಜೆರ್ಸಿಯಲ್ಲಿ ಪೊಲೀಸ್ ಮತ್ತು ಆಗಂತುಕ ವ್ಯಕ್ತಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್, ಇಬ್ಬರು ಶಂಕಿತ ಬಂದೂಕುಧಾರಿಗಳು ಸೇರಿದಂತೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮ್ಯಾನ್ ಹಟ್ಟನ್ ಬಳಿಯಿರುವ ಹಡ್ಸನ್ ನದಿಯ ಸಮೀಪದ ಕಿರಾಣಿ ಅಂಗಡಿಯೊಂದರಲ್ಲಿ ಈ ಗುಂಡಿನ ಚಕಮಕಿ ನಡೆದಿದ್ದು ಮೂವರು ನಾಗರಿಕರು ಸೇರಿದಂತೆ ಮತ್ತು ಇಬ್ಬರು ಶಂಕಿತರು ಅಂಗಡಿಯೊಳಗೆ ಬಲಿಯಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಮೈಕೆಲ್ ಕೆಲ್ಲಿ ಹೇಳಿದ್ದಾರೆ.

ಶಂಕಿತ ವ್ಯಕ್ತಿಗಳ ಟ್ರಕ್ ಒಂದರಲ್ಲಿ ಬಂದು ಸತತ ನಾಲ್ಕು ಗಂಟೆಗಳ ಕಾಲ ಏಕಾಏಕಿ ಗುಂಡು ಹಾರಿಸಿದ್ದಾರೆ. ಆದರೇ ಇದು ಭಯೋತ್ಪಾದಕರ ಕೃತ್ಯವೇ ಎಂಬುದು ಇದು ಖಚಿತವಾಗಿಲ್ಲ, ಗುಂಡಿನ ದಾಳಿಯಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒರ್ವ ನಾಗರಿಕ ತೀವ್ರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಲೆಗಳನ್ನು ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದೆ ಎಂದು ಇದೆ ವೇಳೆ ತಿಳಿಸಿದರು.

ಘಟನೆ ಬಗ್ಗೆ ಟ್ವೀಟ್ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೊಂದು ಭಯಾನಕ ಕೃತ್ಯವಾಗಿದ್ದು ಶಂಕಿತರನ್ನು ಶೀಘ್ರವಾಗಿ ಬಂಧಿಸಿ ಪ್ರಕರಣದ ಮೇಲ್ವಿಚಾರಣೆ ಮಾಡಲಾಗುವುದು ಎಂದಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ