ಬಸ್ ಮೇಲೆ ಬಂದೂಕುಧಾರಿಗಳ ದಾಳಿ: 34 ಮಂದಿ ದಾರುಣ ಸಾವು
Team Udayavani, Nov 16, 2020, 10:21 AM IST
ಇಥಿಯೋಪಿಯಾ: ಪಶ್ಚಿಮ ಇಥಿಯೋಪಿಯಾದಲ್ಲಿ ಬಂದೂಕುಧಾರಿಗಳು ಶನಿವಾರ ರಾತ್ರಿ ಬಸ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಉತ್ತರ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆಯ ಮಧ್ಯೆ ಇಥಿಯೋಪಿಯಾ ದೇಶದಲ್ಲಿ ಭದ್ರತಾ ನಿರ್ವಾತದ ಭೀತಿ ಹೆಚ್ಚುತ್ತಿದೆ.
ಬೆನಿಶಾಂಗುಲ್-ಗುಮುಜ್ ಪ್ರದೇಶದಲ್ಲಿ ನಡೆದ ಭೀಕರ ದಾಳಿಯಲ್ಲಿ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಈ ಭಾಗದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ದಾಳಿಗಳು ನಡೆದ ವರದಿಯಾಗಿದ್ದು, ಜನರಲ್ಲಿ ತೀವ್ರ ಭಯ ಉಂಟಾಗಿದೆ ಎಂದು ಆಯೋಗ ಹೇಳಿದೆ.
ಬೆನಿಶಂಗುಲ್-ಗುಮುಜ್ ಪ್ರಾಂತ್ಯದಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶ ಮತ್ತು ಫೆಡರಲ್ ಆಡಳಿತವು ಇಲ್ಲಿ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಡೇನಿಯಲ್ ಬೆಕೆಲೆ ಒತ್ತಾಯಿಸಿದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ಇದೇ ಜಾಗದಲ್ಲಿ ನಡೆದಿದ್ದ ಸಶಸ್ತ್ರ ಭಯೋತ್ಪಾದಕರು ನಡೆಸಿದ ದಾಳಿಗೆ ಕನಿಷ್ಠ 45 ಮಂದಿ ಬಲಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ