ವಿಶ್ವ ಉಗ್ರ ಪಟ್ಟಿಗೆ ಉಗ್ರ ಅಜರ್‌: 23ರ ಗಡುವಿಲ್ಲ ಎಂದ ಚೀನ

Team Udayavani, Apr 18, 2019, 6:00 AM IST

ಬೀಜಿಂಗ್‌: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಎ.23ರ ಒಳಗಾಗಿ ಅಂತಿಮ ನಿರ್ಧಾರ ತಿಳಿಸಬೇಕು ಎಂಬ ಗಡುವು ವಿಧಿಸಲಾಗಿಲ್ಲ ಎಂದು ಚೀನ ಹೇಳಿದೆ. ಅಮೆರಿಕ, ಯು.ಕೆ. ಮತ್ತು ಫ್ರಾನ್ಸ್‌ ಸರಕಾರಗಳಿಂದ ಅಂಥ ಸೂಚನೆಯೇ ಬಂದಿಲ್ಲ ಮತ್ತು ಈ ವಿವಾದವನ್ನು ಸೂಕ್ತವಾಗಿ ಪರಿಹರಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿ¤ದೆ ಎಂದು ಚೀನ ವಿದೇಶಾಂಗ ಇಲಾಖೆ ವಕ್ತಾರ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು 1267 ಅಲ್‌-ಖೈದಾ ನಿಷೇಧ ಸಮಿತಿಗೆ ತನ್ನದೇ ಆಗಿರುವ ನಿಯಮಗಳು ಇರುತ್ತವೆ. ಅದರ ಅನುಸಾರವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಕ್ತಾರ ತಿಳಿಸಿದ್ದಾರೆ. ಚೀನಕ್ಕೆ ವಿಧಿಸಲಾಗಿರುವ ಗಡುವಿನ ಬಗ್ಗೆ ಮಾಹಿತಿ ನೀಡಿದ ಮೂಲಗಳಿಂದಲೇ ನೀವು ಸ್ಪಷ್ಟೀಕರಣ ಕೇಳಬೇಕಾಗುತ್ತದೆ ಎಂದು ವಕ್ತಾರ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ