ಕೋವಿಡ್‌ ಮುಂಚೂಣಿ ವೈದ್ಯ ಸಾವು : ಚೀನದಲ್ಲಿ ಭುಗಿಲೆದ್ದಿತು ಆಕ್ರೋಶ


Team Udayavani, Jun 4, 2020, 3:45 PM IST

ಕೋವಿಡ್‌ ಮುಂಚೂಣಿ ವೈದ್ಯ ಸಾವು : ಚೀನದಲ್ಲಿ ಭುಗಿಲೆದ್ದಿತು ಆಕ್ರೋಶ

ಬೀಜಿಂಗ್‌: ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದ್ದ ಹಾಗೂ ಸ್ವತಃ ಕೋವಿಡ್‌ ಸೋಂಕಿತರಾಗಿ ಮೈಬಣ್ಣ ಕಪ್ಪಾಗಿ ಸುದ್ದಿಯಾಗಿದ್ದ ವೈದ್ಯ ಡಾ| ಹು ವೀಫೆಂಗ್‌ ಮಂಗಳವಾರ ಚಿಕಿತ್ಸೆ ಫ‌ಲಿಸದೆ ಸಾವಿಗೀಡಾಗಿದ್ದಾರೆ. ಅವರ ಸಾವು ಚೀನದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರದ ವಿರುದ್ಧ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ.

ಮಾರ್ಚ್‌ನಲ್ಲಿ ಡಾ| ಹು ಹಾಗೂ ಇನ್ನೋರ್ವ ವೈದ್ಯರ ಚರ್ಮ ಕಪ್ಪಗಾಗಿತ್ತು. ಇದು “ಜಠರದ ದೋಷದಿಂದ ಆದದ್ದು’ ಎಂದು ಸಮಜಾಯಿಷಿ ನೀಡಲಾಗಿತ್ತು. ಡಾ| ಹು ಸಾವಿನ ನಿಖರ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಯಾರು ಡಾ| ಹು ?
ಕೋವಿಡ್‌ನ‌ ಉಗಮ ಸ್ಥಾನವಾಗಿರುವ ವುಹಾನ್‌ನ ಸೆಂಟ್ರಲ್‌ ಆಸ್ಪತ್ರೆಯಲ್ಲಿ ಮೂತ್ರಪಿಂಡ ತಜ್ಞರಾಗಿದ್ದರು ಡಾ|ಹು. ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಅವರಿಗೇ ಜ.19ರಂದು ಸೋಂಕು ತಗಲಿದ್ದು ದೃಢವಾಗಿತ್ತು. ನಂತರದ ಎರಡು ತಿಂಗಳಲ್ಲಿ ಅವರನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿತ್ತು. ತುಸು ಚೇತರಿಸಿಕೊಂಡರೂ ಬಳಿಕ ಅವರಿಗೆ ಮಿದುಳಿನ ರಕ್ತಸ್ರಾವವಾಯಿತು.

ಡಾ|ಹು ಮತ್ತು ಹೃದ್ರೋಗ ತಜ್ಞ ಡಾ| ಯೀ ಫ್ಯಾನ್‌ ಅವರ ಚರ್ಮ ಕಪ್ಪಾದದ್ದು ಅಂತಾರಾಷ್ಟ್ರೀಯ ಸುದ್ದಿಯಾಗಿತ್ತು. ಇದು ಕೋವಿಡ್‌ ವೈರಸ್‌ ವಿರುದ್ಧ ವೈದ್ಯರು ನಡೆಸುತ್ತಿರುವ ಅತಿ ಕಠಿನ ಹೋರಾಟಕ್ಕೆ ಭಾಷ್ಯ ಬರೆದಂತಿತ್ತು. “ಸಿನ ವೈಬೊ’ ಎಂಬ ಟ್ವಿಟ್ಟರ್‌ ಮಾದರಿಯ ಸೋಷಿಯಲ್‌ ಮೀಡಿಯಾದಲ್ಲಿ ಈ ಇಬ್ಬರು ವೈದ್ಯರು ಭಾರೀ ವೈರಲ್‌ ಆಗಿದ್ದರು. ಕಪ್ಪು ಮುಖದ ಇಬ್ಬರು ವುಹಾನ್‌ ವೈದ್ಯರು ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅವರನ್ನು ಕೊರೋನಾ ವಿರುದ್ಧ ಹೋರಾಡುತ್ತಿರುವ ಯೋಧರು ಎಂದು ಬಿಂಬಿಸಲಾಗಿತ್ತು. ಸಾವಿನ ಜತೆಗೆ ಹೋರಾಡಿದ ದೇವದೂತರು ಎಂಬಿತ್ಯಾದಿಯಾಗಿ ಅವರನ್ನು ಹೊಗಳಲಾಗಿತ್ತು. ಅವರ ಸ್ಥಿತಿ ಕೋವಿಡ್‌ ವಿರುದ್ಧ ಹೋರಾಡುವ ವೈದ್ಯರ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿತ್ತು. ಈ ಪೈಕಿ ಡಾ| ಯೀ ಮೇ 6ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ ಡಾ| ಹು ಚೇತರಿಸಿಕೊಳ್ಳಲೇ ಇಲ್ಲ.

ವಿಸಲ್‌ ಬೌಲರ್‌ ಜತೆಗೆ ಕೆಲಸ
ಡಾ|ಲೀ ವೆನ್‌ಲಿಯಂಗ್‌ ಕೋವಿಡ್‌ ವೈರಸ್‌ ಬಗ್ಗೆ ಮೊದಲ ಬಾರಿಗೆ ಎಚ್ಚರಿಸಿದ ವೈದ್ಯ. ಡಿಸೆಂಬರ್‌ನಲ್ಲಿಯೇ ಅವರು ಕೋವಿಡ್‌ ಅಪಾಯಕಾರಿ ವೈರಸ್‌ ಎಂದು ಸಾರಿದ್ದರು. ಡಾ| ಹು ಮತ್ತು ಡಾ| ಯೀ ಅವರ ಜತೆಗೆ ವುಹಾನ್‌ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಡಾ| ಹು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ 68 ಸಿಬಂದಿಗಳು ಕೋವಿಡ್‌ಗೆ ತುತ್ತಾಗಿದ್ದರು. ಡಾ| ಲೀ ವೆನ್‌ಲಿಯಂಗ್‌ ಅವರೂ ಸೋಂಕಿತರಾಗಿ ಮೃತಪಟ್ಟಿದ್ದಾರೆ. ಆಗಲೂ ಇದೇ ರೀತಿಯ ಆಕ್ರೋಶ ವ್ಯಕ್ತವಾಗಿ ಬಳಿಕ ತಣ್ಣಗಾಗಿತ್ತು. ಅವರ ಸಾವಿನ ಕಾರಣವನ್ನೂ ಚೀನದ ಕಮ್ಯುನಿಷ್ಟ್ ಸರಕಾರ ಬಹಿರಂಗಪಡಿಸಿಲ್ಲ. ವುಹಾನ್‌ ಆಸ್ಪತ್ರೆಯಲ್ಲಿ ಒಟ್ಟು ಐವರು ವೈದ್ಯಕೀಯ ಸಿಬಂದಿಗಳು ಕೋವಿಡ್‌ಗೆ ಬಲಿಯಾಗಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.