ಜಾಮೀನು ಕೊಟ್ಟರೆ ಗೈರು!

Team Udayavani, Jun 13, 2019, 5:44 AM IST

ಲಂಡನ್‌: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿದ ಉದ್ಯಮಿ ನೀರವ್‌ ಮೋದಿ ಜಾಮೀನು ಅರ್ಜಿಯನ್ನು ಇಂಗ್ಲೆಂಡ್‌ ಮತ್ತು ವೇಲ್ಸ್ನ ಹೈಕೋರ್ಟ್‌ ಬುಧವಾರ ತಿರಸ್ಕರಿಸಿದೆ. ಜಾಮೀನು ನೀಡಿದರೆ ಮತ್ತೆ ವಿಚಾರಣೆಗೆ ಹಾಜರಾಗಲಾರ ಮತ್ತು ಸಾಕ್ಷ್ಯಗಳ ಮೇಲೆ ಹಿಂದಿನ ಸಂದರ್ಭದಲ್ಲಿ ನೀರವ್‌ ಮೋದಿ ಪ್ರಭಾವ ಬೀರಿದ್ದು ಖಚಿತ ಎಂದು ನ್ಯಾಯಮೂರ್ತಿ ಇಂಗ್ರಿಡ್‌ ಸಿಮೆಲರ್‌ ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ಸಾಮಾನ್ಯ ವಿಚಾರಣೆ ಲಂಡನ್‌ನ ವೆಸ್ಟ್‌ ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ನಲ್ಲಿ ನಡೆಯಲಿದೆ.

ಜಾಮೀನು ಕೋರಿ ಕೋರ್ಟ್‌ಗೆ ನೀರವ್‌ ಮೋದಿ ಮೊರೆ ಇಡುತ್ತಿರುವುದು ನಾಲ್ಕನೇ ಬಾರಿಯಾಗಿದೆ. ಮಂಗಳವಾರವಷ್ಟೇ ಆತನ ಪರ ವಕೀಲರು ಜಾಮೀನು ನೀಡಲೇಬೇಕು ಎಂದು ವಾದಿಸಿದ್ದರು.

ತೀರ್ಪು ಪ್ರಕಟಿಸಿದ ನ್ಯಾ| ಇಂಗ್ರಿಡ್‌ ಸಿಮೆಲರ್‌ ನೀರವ್‌ ಮೋದಿ ವಿರುದ್ಧ, ವಂಚನೆ ನಡೆಸಲು ಮತ್ತು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ ಬಗ್ಗೆ ಪುರಾವೆಗಳು ಇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಂಚನೆ ಪ್ರಮಾಣ ತಡೆಯಲು ಭಾರತ ಸರಕಾರ ಪ್ರಾಮಾಣಿಕ ಯತ್ನ ನಡೆಸಿದೆ. ಹಿಂದಿನ ಸಂದರ್ಭಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ವೇಳೆ ದೊಡ್ಡ ಪ್ರಮಾಣದ ಬಾಂಡ್‌ ಮೊತ್ತ ನೀಡುವ ಬಗ್ಗೆ ಅರ್ಜಿದಾರ ಅರಿಕೆ ಮಾಡಿಕೊಂಡಿದ್ದರು’ ಎಂದಿದ್ದಾರೆ. ಭಾರತದ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಹಲವು ಸ್ಥಳಗಳು ಇವೆ ಎಂದೂ ನ್ಯಾಯಮೂರ್ತಿ ಆದೇಶದಲ್ಲಿ ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಲಂಡನ್‌: ಹೈದರಾಬಾದ್‌ನ ನಿಜಾಮರ ಸುಮಾರು 35 ದಶಲಕ್ಷ ಪೌಂಡ್‌(308.20 ಕೋಟಿ ರೂ.) ಹಣವು ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ...

  • ಲಂಡನ್‌: ಭಾರತ ಮತ್ತು ಬ್ರಿಟನ್‌ನ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸಿರುವ, ಎರಡೂ ದೇಶಗಳಿಗೆ ಸೇರಿದ 'ಅಗ್ರ 100 ಪ್ರಭಾವಿ...

  • ಟೆಹ್ರಾನ್‌: ಅಣ್ವಸ್ತ್ರ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಸಂಧಾನ ಮಾತುಕತೆಯ ಮಾತನಾಡಿದ್ದ ಅಮೆರಿಕ ಹೊಸತಾಗಿ ದಿಗ್ಬಂಧನ ವಿಧಿಸುವ ಮೂಲಕ ಸುಳ್ಳು ಹೇಳಿರುವುದು...

  • ವಾಷಿಂಗ್ಟನ್‌: ಡ್ರೋನ್‌ ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ವಿರುದ್ಧ ಅಮೆರಿಕ ಸೈಬರ್‌ ದಾಳಿ ನಡೆಸಿದೆ. ಕಳೆದ ವಾರ ಅಮೆರಿಕದ ಡ್ರೋನ್‌ ಒಂದನ್ನು...

  • ದುಬಾೖ: ಗಲ್ಫ್ ವಲಯದಲ್ಲಿ ಯಾವುದೇ ಸಂಘರ್ಷ ಉಂಟಾದರೆ ಅದರ ಪರಿಣಾಮ ಅಮೆರಿಕದ ಸೇನೆಯ ಮೇಲೆ ಬೀರಬಹುದು ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಇರಾನ್‌ ವಿರುದ್ಧ ಇನ್ನಷ್ಟು...

ಹೊಸ ಸೇರ್ಪಡೆ