ಇಮ್ರಾನ್‌ ಭಾಷಣಕ್ಕೆ ಬಲೂಚಿಗಳ ಅಡ್ಡಿ

Team Udayavani, Jul 23, 2019, 5:17 AM IST

ವಾಷಿಂಗ್ಟನ್‌: ಅಮೆರಿಕದಲ್ಲಿ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಆಗುತ್ತಿರುವ ಅವಮಾನ ಮುಂದುವರಿದಿದೆ. ವಾಷಿಂಗ್ಟನ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಪಾಕಿಸ್ಥಾನ- ಅಮೆರಿಕ ಸಮುದಾಯದವರನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಬಲೂಚಿ ಸ್ಥಾನಕ್ಕೆ ಸ್ವಾತಂತ್ರ್ಯ ನೀಡುವಂತೆ ಯುವಕರ ಗುಂಪು ಒತ್ತಾಯಿಸಿ, ಘೋಷಣೆ ಕೂಗಿದೆ. ಇಮ್ರಾನ್‌ ಭಾಷಣ ಮಾಡುತ್ತಿರು ವಂ ತೆಯೇ ಕ್ರೀಡಾಂಗಣದ ಆಸನ ಗಳಲ್ಲಿ ಕುಳಿತಿದ್ದ ಯುವಕರ ಗುಂಪು ಏಕಾಏಕಿ ಎದ್ದುನಿಂತು ಘೋಷಣೆ ಕೂಗಲಾರಂಭಿಸಿತು. ಮೂವರು ಯುವಕರು ಈ ಘೋಷಣೆ ಹಾಕಿ ಪಾಕ್‌ ಪಿಎಂಗೆ ತಬ್ಬಿಬ್ಟಾಗು ವಂತೆ ಮಾಡಿದ್ದಾರೆ. ಈ ಸಂದರ್ಭ ಇಮ್ರಾನ್‌ ಖಾನ್‌ ಬೆಂಬಲಿಗರು ಅವರನ್ನು ಸ್ಥಳ ದಿಂದ ಹೊರ ತಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.

ಎರಡು ದಿನಗಳ ಅವಧಿಯಿಂದ ಬಲೂಚಿ ಸ್ಥಾನದಲ್ಲಿ ಪಾಕಿಸ್ಥಾನ ನಡೆಸಿರುವ ಮಾನವ ಹಕ್ಕುಗಳ ಉಲ್ಲಂಘನೆ, ಸೇನಾ ಪಡೆಯ ಕ್ರೌರ್ಯದ ಬಗ್ಗೆ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ದೇಶದಲ್ಲಿ ಆಂತರಿಕ ತೆರಿಗೆ ವ್ಯವಸ್ಥೆ ಸುಧಾರಿಸುವಂತೆ ಐಎಂಎಫ್
ಪಾಕ್‌ಗೆ ಮನವಿ ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ