ಬಾಂಗ್ಲಾ ಹಿಂದುಗೆ ಬಹುಪತ್ನಿತ್ವ; ವಿಚ್ಛೇದಿತನಿಗೆ ಪುನರ್ ವಿವಾಹ ಇಲ್ಲ
Team Udayavani, Aug 16, 2017, 3:24 PM IST
ನ್ಯೂಯಾರ್ಕ್ : ಬಾಂಗ್ಲಾದೇಶದಲ್ಲಿ ಚಾಲ್ತಿಯಲ್ಲಿರುವ ಹಿಂದೂ ವಿವಾಹ ಪದ್ದತಿಗಳಲ್ಲಿನ ಕೆಲವು ಅಂಶಗಳು ಭಾರತದಲ್ಲಿನ ಮುಸ್ಲಿಂ ವಿವಾಹ ಪದ್ಧತಿಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅಮೆರಿಕ ಸರಕಾರದ ವರದಿಯೊಂದು ಹೇಳಿದೆ.
ಬಾಂಗ್ಲಾದೇಶದಲ್ಲಿನ ಹಿಂದೂ ಪುರುಷರಿಗೆ ಬಹುಪತ್ನಿತ್ವಕ್ಕೆ ಅವಕಾಶವಿದೆ; ಆದರೆ ವಿಚ್ಛೇದಿತರು ಮರು ಮದುವೆಯಾಗುವುದಕ್ಕೆ ಅವಕಾಶ ಇರುವುದಿಲ್ಲ ಎಂದು ವಾಷಿಂಗ್ಟನ್ನಲ್ಲಿಂದು ಬಿಡುಗಡೆ ಮಾಡಲಾದ 2016ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯ ಹೇಳಿದೆ. ವಿವಿಧ ದೇಶಗಳಲ್ಲಿನ ಧಾರ್ಮಿಕ ಸಮೂಹಗಳಲ್ಲಿ ಚಾಲ್ತಿಯಲ್ಲಿರುವ ವಿವಾಹ ಕಾನೂನುಗಳನ್ನು ಈ ವರದಿಯು ವಿಶ್ಲೇಷಿಸಿದೆ.
“ಹಿಂದೂ ಪೌರ ಕಾನೂನಿನ ಪ್ರಕಾರ ಹಿಂದೂ ಪುರುಷರು ಹಲವು ಪತ್ನಿಯರನ್ನು ಹೊಂದಬಹುದಾಗಿದೆ; ಆದರೆ ವಿಚ್ಛೇದನಕ್ಕೆ ಅವಕಾಶವಿಲ್ಲ’ ಎಂದು ವರದಿ ಹೇಳಿದೆ.
ಬೌದ್ಧ ಧರ್ಮೀಯರಿಗೆ ಹಿಂದೂ ಕಾನೂನು ಅನ್ವಯವಾಗುತ್ತದೆ ಹಾಗೂ ಹಿಂದೂ ಮತ್ತು ಬೌದ್ಧ ಧರ್ಮೀಯ ವಿಚ್ಛೇದಿತರು ಕಾನೂನುಬದ್ಧವಾಗಿ ಪುನರ್ ವಿವಾಹವಾಗುವಂತಿಲ್ಲ. ಹಿಂದೂ ಪೌರ ಕಾನೂನಿನ ಪ್ರಕಾರ ಮಹಿಳೆಯರಿಗೆ ಆಸ್ತಿಪಾಸ್ತಿಗಳ ಉತ್ತರಾಧಿಕಾರತ್ವ ಇರುವುದಿಲ್ಲ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್