ಶವ ಸಂಭೋಗ ನಡೆಸಿದ ಯುವಕನಿಗೆ ಆರು ವರ್ಷ ಜೈಲು ಶಿಕ್ಷೆ: ಹೀನ ಕೃತ್ಯ

Team Udayavani, Feb 2, 2019, 9:25 AM IST

ಲಂಡನ್: ಮಾದಕದ್ರವ್ಯ ಸೇವನೆ ಮಾಡಿ ಮನೆಯೊಳಗೆ ನುಗ್ಗಿ ಶವ ಸಂಭೋಗ ನಡೆಸಿದ ಆರೋಪದಡಿಯಲ್ಲಿ ಯುವಕನೊಬ್ಬನಿಗೆ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ.

ಕಳೆದ ನವೆಂಬರ್ 11ರಂದು ಬರ್ಮಿಂಗ್ ಹ್ಯಾಮ್ ನ ಗ್ರೇಟ್ ಬಾರ್ರ್ ವಾಸ್ ಸಾಲ್ ರಸ್ತೆ ಸಮೀಪದ ಕೋ ಆಪರೇಟಿವ್ ಫ್ಯೂನರಲ್ ಪಾರ್ಲರ್ ನಲ್ಲಿ ಇರಿಸಿದ್ದ ಮಹಿಳೆಯ ಶವದ ಜೊತೆ ಕಾಸಿಂ ಖುರ್ರಮ್(23) ಎಂಬ ಯುವಕ ಸಂಭೋಗ ನಡೆಸಿದ್ದ ಘಟನೆ ನಡೆದಿತ್ತು.

ಪ್ರಕರಣದ ವಾದ, ಪ್ರತಿವಾದ ಆಲಿಸಿದ್ದ ಬರ್ಮಿಂಗ್ ಹ್ಯಾಮ್ ಕ್ರೌನ್ ಕೋರ್ಟ್ ಜಡ್ಜ್ ಮೆಲ್ಬೊರ್ನ್ ಐಮನ್, ಇದೊಂದು ಎಲ್ಲಾ ಮನುಷ್ಯತ್ವವನ್ನು ಮೀರಿದ ಅಪರಾಧವಾಗಿದೆ. ನಾನು ಇಂತಹ ಪ್ರಕರಣವನ್ನು ಕಂಡಿಲ್ಲ. ಶವದ ಜೊತೆಯೂ ಇಷ್ಟು ಅಮಾನವೀಯವಾಗಿ ನಡೆದುಕೊಂಡಿರುವುದನ್ನುಊಹಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿರುವುದಾಗಿ ವರದಿ ಹೇಳಿದೆ.

ವಿಪರೀತವಾಗಿ ಅಮಲು ಪದಾರ್ಥ ಸೇವಿಸಿ ಕೋ ಆಪರೇಟಿವ್ ಫ್ಯೂನರಲ್ ಪಾರ್ಲರ್ ನಲ್ಲಿ ಇರಿಸಿದ್ದ ಶವ ಪೆಟ್ಟಿಗೆಯೊಳಗೆ ಕೃತ್ಯ ಎಸಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಸಿಂನನ್ನು ಬಂಧಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ