ಮಗುವಿನ ನಿರೀಕ್ಷೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್, ಸೈಮಂಡ್ಸ್ ಜೋಡಿ
Team Udayavani, Mar 1, 2020, 10:14 PM IST
ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅವರ ಜತೆಗಾರ್ತಿ ಕ್ಯಾರಿ ಸೈಮಂಡ್ಸ್ ಮಗುವೊಂದರ ನಿರೀಕ್ಷೆಯಲ್ಲಿದ್ದಾರೆ. ಈ ಬೇಸಿಗೆ ವೇಳೆಗೆ ಮಗು ಅವರ ಮಡಿಲು ಸೇರಿವ ನಿರೀಕ್ಷೆಯಿದೆ ಎಂದು ಸ್ವತಃ ಕ್ಯಾರಿ ಸೈಮಂಡ್ಸ್ ಅವರೇ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸೈಮಂಡ್ಸ್, ಕಳೆದ ವರ್ಷಾಂತ್ಯದಲ್ಲಿ ನಾವು ಎಂಗೇಜ್ ಆಗಿದ್ದು, ಇದೀಗ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸೂಚ್ಯವಾಗಿ ಹೇಳಿದ್ದಾರೆ.
55 ವರ್ಷದ ಜಾನ್ಸನ್ ಹಾಗೂ 31 ವರ್ಷದ ಸೈಮಂಡ್ಸ್, ಪ್ರಧಾನಿ ನಿವಾಸವಿರುವ ಡೌನಿಂಗ್ ಸ್ಟ್ರೀಟ್ಗೆ ಪ್ರವೇಶ ಪಡೆದ ಮೊದಲ ಅವಿವಾಹಿತ ಜೋಡಿ ಎಂದೆನಿಸಿದ್ದರು. ಹಾಗೇ ಕ್ಯಾರಿ ಸೈಮಂಡ್ಸ್, 174 ವರ್ಷಗಳಲ್ಲಿ ಬ್ರಿಟನ್ ಪ್ರಧಾನಿ ಒಬ್ಬರಿಗೆ ಜತೆಯಾದ ಅತಿ ಕಿರಿ ವಯಸ್ಸಿನ ಸಂಗಾತಿ ಎಂದೆನಿಸಿದ್ದಾರೆ. ಬೋರಿಸ್ ಅವರಿಗೆ ಈ ಹಿಂದೆಯೇ ಎರಡು ಮದುವೆಯಾಗಿದ್ದು, ಐವರು ಮಕ್ಕಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ