ನಟ ಬ್ರೂಸ್ ಲೀ ಮೃತಪಟ್ಟಿದ್ದು ಹೇಗೆ ಗೊತ್ತಾ? ಹೇಳುತ್ತಿದೆ ಹೊಸ ಅಧ್ಯಯನ ವರದಿ!
Team Udayavani, Nov 24, 2022, 8:05 AM IST
ಲಂಡನ್: ಅಮೆರಿಕದ ಮಾರ್ಷಲ್ ಆರ್ಟ್ಸ್ ಲೆಜೆಂಡ್, ನಟ ಬ್ರೂಸ್ ಲೀ ಮೃತಪಟ್ಟಿದ್ದು ಹೇಗೆ ಗೊತ್ತಾ? ಅತಿಯಾದ ನೀರು ಸೇವನೆಯೇ ಬ್ರೂಸ್ ಲೀಗೆ ಮುಳುವಾಯ್ತು ಎಂದು ಹೇಳುತ್ತಿದೆ ಹೊಸ ಅಧ್ಯಯನ ವರದಿ!
ಸೆರೆಬ್ರಲ್ ಒಡೆಮಾ(ಮೆದುಳಿನ ಊತ) ಎಂಬ ಕಾಯಿಲೆಗೆ ತುತ್ತಾಗಿ 32 ವರ್ಷ ವಯಸ್ಸಲ್ಲೇ ಬ್ರೂಸ್ ಲೀ (1973 ಜುಲೈ) ಕೊನೆಯುಸಿರೆಳೆದಿದ್ದರು.
ನೋವಿನ ಮಾತ್ರೆ (ಪೈನ್ ಕಿಲ್ಲರ್) ಹೆಚ್ಚಾಗಿ ಸೇವಿಸಿದ್ದರಿಂದ ಮೆದುಳಿನಲ್ಲಿ ಊತ ಉಂಟಾಗಿದ್ದೇ ಸಾವಿಗೆ ಕಾರಣ ಎಂದು ಆಗ ವೈದ್ಯರು ಹೇಳಿದ್ದರು. ಆದರೆ, ಹೊಸ ಅಧ್ಯಯನದ ಪ್ರಕಾರ, ಹೈಪೋನ್ಯಾಟ್ರೇಮಿಯಾದಿಂದಾಗಿಯೇ ಬ್ರೂಸ್ ಲೀ ಅವರ ಮೆದುಳಿನಲ್ಲಿ ಊತ ಕಾಣಿಸಿತ್ತು. ಅವರು ಅತಿಯಾದ ನೀರು ಸೇವನೆ ಮಾಡುತ್ತಿದ್ದ ಕಾರಣ, ಹೆಚ್ಚುವರಿ ನೀರನ್ನು ಹೊರಬಿಡಲು ಮೂತ್ರಕೋಶಗಳಿಗೆ ಸಾಧ್ಯವಾಗಿರಲಿಲ್ಲ. ಇದುವೇ ಅವರ ಸಾವಿಗೆ ಕಾರಣವಾಯಿತು ಎಂದು ಹೇಳಲಾಗಿದೆ.