ಮತ್ತೆ ಚರ್ಚ್‌ ನಿರ್ಮಾಣ

Team Udayavani, Apr 17, 2019, 6:00 AM IST

ಪ್ಯಾರಿಸ್‌: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಬೆಂಕಿಗೆ ಆಹುತಿಯಾಗಿರುವ 850 ವರ್ಷಗಳ ಹಿಂದಿನ ಕೆಥೆಡ್ರಲ್‌ ಅನ್ನು ಮತ್ತೆ ಪುನರ್‌ ನಿರ್ಮಿಸುವುದಾಗಿ ಅಧ್ಯಕ್ಷ ಇಮಾನ್ಯೂವೆಲ್‌ ಮ್ಯಾಕ್ರನ್‌ ಹೇಳಿದ್ದಾರೆ. ಇದೇ ವೇಳೆ ಪೋಪ್‌ ಕೂಡ ಅದನ್ನು ಪುನರ್‌ ನಿರ್ಮಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. 400ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಶಮನಗೊಳಿಸಿದ್ದಾರೆ. ಛಾವಣಿಯ ಬಹುತೇಕ ಭಾಗ ನಾಶವಾಗಿದ್ದು, ಕಲಾಕೃತಿಗಳು ಮತ್ತು ಪೇಂಟಿಂಗ್‌ಗಳು ಅಗ್ನಿಗಾಹುತಿಯಾಗಿದೆ. ಗಡಿಯಾರವನ್ನು ಹೊಂದಿರುವ ಟವರ್‌ಗಳು ಮತ್ತು ಜನಪ್ರಿಯವಾದ ಗ್ಲಾಸ್‌ ವಿಂಡೋಗಳಿಗೆ ಯಾವುದೇ ಹಾನಿಯಾಗಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ