ಕೆನಡಾ ಚುನಾವಣೆ: ತ್ರುದೌಗೆ ಪ್ರಯಾಸದ ಜಯ
Team Udayavani, Oct 23, 2019, 1:29 AM IST
ಒಟ್ಟಾವಾ: ಕೆನಡಾ ಸಂಸತ್ನಲ್ಲಿ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪ್ರಧಾನಿ ಜಸ್ಟಿನ್ ತ್ರುದೌ ನೇತೃತ್ವದ ಲಿಬರಲ್ ಪಾರ್ಟಿ 338 ಸ್ಥಾನಗಳ ಪೈಕಿ 157 ಸ್ಥಾನಗಳನ್ನು ಗೆದ್ದಿದೆ. ಚುನಾವಣೆಯಲ್ಲಿ ಜಯ ಗಳಿಸಲು ತ್ರುದೌ ಸಫಲರಾಗಿದ್ದರೂ, ಬಹುಮತ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪ್ರತಿಪಕ್ಷವಾಗಿರುವ ಕನ್ಸರ್ವೇಟಿವ್ ಪಕ್ಷ 121 ಸ್ಥಾನಗಳನ್ನು ಗಳಿಸಿದೆ. ಬ್ಲಾಕ್ ಕ್ಯುಬೆಕೋಯಿಸ್ 32, ಭಾರತೀಯ ಮೂಲದ ನ್ಯಾಯವಾದಿ-ರಾಜಕಾರಣಿ ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಾಟಿಕ್ ಪಕ್ಷ 24, ಗ್ರೀನ್ ಪಾರ್ಟಿ 3, ಸ್ವತಂತ್ರರು 1 ಸ್ಥಾನದಲ್ಲಿ ಜಯ ಗಳಿಸಿದ್ದಾರೆ.
ಕಿಂಗ್ಮೇಕರ್?: ಭಾರತೀಯ ಮೂಲದ ಜಗ್ಮೀತ್ ಸಿಂಗ್ರ ನ್ಯೂ ಡೆಮಾಕ್ರಾಟಿಕ್ ಪಾರ್ಟಿ 24 ಸ್ಥಾನಗಳನ್ನು ಗಳಿಸಿದೆ. ಹೀಗಾಗಿ, ಅವರು ಸರಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸುವ ನಿರೀಕ್ಷೆ ಇದೆ. ತ್ರುದೌ ಪಕ್ಷಕ್ಕೆ ಬಹುಮತಕ್ಕೆ ಇನ್ನು 13 ಸ್ಥಾನಗಳು ಬೇಕಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ