‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆ ನಿರ್ಮಿಸಲು ಸಿದ್ಧ: ಬಾಂಗ್ಲಾ ಜತೆಗೆ ಚೀನ ಸ್ನೇಹದ ನಾಟಕ
Team Udayavani, Oct 5, 2020, 7:38 AM IST
ಬೀಜಿಂಗ್: ಕುತಂತ್ರಿ ಚೀನ ಈಗ ಭಾರತದ ನೆರೆಯ ರಾಷ್ಟ್ರಗಳ ಜತೆಗೆ ಸ್ನೇಹದ ನಾಟಕ ಆರಂಭಿಸಿದೆ. ಬಾಂಗ್ಲಾದೇಶದಲ್ಲೂ ಬಹು ಬಿಲಿಯನ್ ಡಾಲರ್ ವೆಚ್ಚದ “ಬೆಲ್ಟ್ ಆ್ಯಂಡ್ ರೋಡ್’ ಯೋಜನೆ (ಬಿಆರ್ಐ) ನಿರ್ಮಿಸಲು ತಾನು ಸಿದ್ಧ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಘೋಷಿಸಿದ್ದಾರೆ.
ಚೀನ- ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧದ 45 ವಾರ್ಷಿಕೋತ್ಸವ ಸಭೆಯಲ್ಲಿ ಜಿನ್ಪಿಂಗ್ ಹೀಗೆ ಹೇಳಿದ್ದಾರೆ. ಬಿಆರ್ಐ ಮೂಲಕ ಬಾಂಗ್ಲಾ- ಚೀನಾ ನಡುವಿನ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಾಗಿ ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ:ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್ ರೋಶ್’ಗೆ ಬೆಚ್ಚಿ ಬೀಳುವ ಉಗ್ರರು
ಏನಿದು ಬಿಆರ್ಐ?: 2013ರಲ್ಲಿ ಚೀನಾ ಜಾರಿ ತಂದ ಮಹತ್ವದ ಯೋಜನೆ ಇದು. ವಾಣಿಜ್ಯ ಉದ್ದೇಶದಿಂದ ಏಷ್ಯಾ- ಯುರೋಪ್ ನಿಂದ ಆಫ್ರಿಕದವರೆಗೆ ಒಂದೇ ರಸ್ತೆ ನಿರ್ಮಿಸುವ ಯೋಜನೆ ಇದಾಗಿದೆ. ಸರಿಸುಮಾರು 70 ರಾಷ್ಟ್ರಗಳಿಗೆ ಈ ರಸ್ತೆ ಮೂಲಕ ಸಂಪರ್ಕ ಸಾಧಿಸುವುದು ಚೀನಾದ ಗುರಿ. ಈಗಾಗಲೇ ಪಾಕಿಸ್ಥಾನದಲ್ಲಿ ಬಿಆರ್ಐ ಭಾಗವಾಗಿ “ಸಿಪಿಇಸಿ’ ಕಾಮಗಾರಿ ನಿರ್ಣಾಯಕ ಹಂತ ತಲುಪಿದೆ. ಭಾರತವನ್ನು ಸುತ್ತುವರಿದು ಈ ರಸ್ತೆಗಳನ್ನು ನಿರ್ಮಿಸು ವುದು ಚೀನಾದ ಒಳತಂತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು