Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Team Udayavani, Sep 13, 2024, 12:51 PM IST
ಬೀಜಿಂಗ್: ಹಲ್ಲಿನ ಸಮಸ್ಯೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯ 23 ಹಲ್ಲುಗಳನ್ನು ಒಂದೇ ದಿನ ಕಿತ್ತು ಹಾಕಿದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ ಅಷ್ಟುಮಾತ್ರವಲ್ಲದೆ 23 ಹಲ್ಲುಗಳ ಬದಲಿಗೆ ಹನ್ನೆರಡು ಹೊಸ ಹಲ್ಲುಗಳನ್ನು ಅದೇ ದಿನ ಇರಿಸಿದ್ದು ಇದೀಗ ರೋಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಘಟನೆ ನಡೆದಿರುವುದು ಚೀನಾದ ಯೋಂಗ್‌ಕಾಂಗ್ ನಗರದಲ್ಲಿ. ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಗಳಿಂದ ವಿಚಾರ ಬಹಿರಂಗ:
ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ ಇದರಲ್ಲಿ ತನ್ನ ತಂದೆ ಧೀರ್ಘಕಾಲದಿಂದ ಹಲ್ಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಹಲ್ಲಿನಾಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ಬಳಿ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಸ್ಟ್ 14 ರಂದು ಯೋಂಗ್‌ಕಾಂಗ್ ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಹಲ್ಲುಗಳನ್ನು ತೆಗೆಯಬೇಕಾಗುತ್ತದೆ ಅದರ ಬದಲಿಗೆ ಹೊಸ ಹಲ್ಲುಗಳನ್ನು ಇಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಮಾಡಿದ್ದಾಳೆ.
ಒಂದೇ ದಿನದಲ್ಲಿ 23 ಹಲ್ಲುಗಳನ್ನು ತೆಗೆದ ವೈದ್ಯರು:
ಹಲ್ಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಎಲ್ಲಾ ಹಲ್ಲುಗಳನ್ನು ತೆಗೆಯಲು ವೈದ್ಯರು ಸಲಹೆ ನೀಡಿದ್ದಾರೆ ಅದರಂತೆ ವ್ಯಕ್ತಿ ಒಪ್ಪಿಗೆಯನ್ನೂ ನೀಡಿದ್ದಾರೆ ಅದರಂತೆ ಶಸ್ತಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರು ಒಂದಾದ ಮೇಲೆ ಒಂದರಂತೆ ಒಂದೇ ದಿನ ಒಟ್ಟು 23 ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ ಇದಾದ ಬಳಿಕ ಅದೇ ದಿನ ಹನ್ನೆರಡು ಹೊಸ ಹಲ್ಲುಗಳನ್ನು ಅಳವಡಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಮೊದಲು ಹಲ್ಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಈಗ ಹಲ್ಲು ತೆಗೆದ ನೋವಿನಿಂದ ಹೆಚ್ಚಿನ ನೋವು ಅನುಭವಿಸಬೇಕಾಯಿತು. ಆದರೆ ದಿನದಿಂದ ದಿನಕ್ಕೆ ಅವರ ನೋವು ಹೆಚ್ಚಾಗತೊಡಗಿತು ಚಿಕಿತ್ಸೆ ನಡೆದು ಹದಿಮೂರು ದಿನಕ್ಕೆ ಹೃದಯಾಘಾತಗೊಂಡು ವ್ಯಕ್ತಿ ಮೃತಪಟ್ಟಿದ್ದಾರೆ.
ವೈದ್ಯರ ಕಾರ್ಯಕ್ಕೆ ಆಕ್ರೋಶ
ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಒಂದೇ ದಿನ 23 ಹಲ್ಲುಗಳನ್ನು ಹೇಗೆ ತೆಗೆಯಲು ಸಾಧ್ಯ, ಪರಿಣತಿ ಹೊಂದಿದ ವೈದ್ಯರು ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ, ಇನ್ನೂ ಕೆಲವರು 23 ಹಲ್ಲುಗಳನ್ನು ಕಿತ್ತು ಹಾಕಿ ಅದೇ ದಿನ ಮತ್ತೆ ಹನ್ನೆರಡು ಹೊಸ ಹಲ್ಲು ಇಡುವ ವೈದ್ಯರನ್ನು ನಾನು ಇದುವರೆಗು ನೋಡಲಿಲ್ಲ ಇವರು ನಿಜವಾಗಿಯೂ ವೈದ್ಯರೇ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಪ್ಪು ಎಸಗಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚಿನ ಮಂದಿ ಆಗ್ರಹಿಸಿದ್ದಾರೆ.
ಮಗಳ ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ವೈದ್ಯರು ತಪ್ಪು ಎಸಗಿರುವುದು ಹೌದು ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಇದನ್ನೂ ಓದಿ: Exams: ವಿದ್ಯಾರ್ಥಿಗಳೇ ಗಮನಿಸಿ… ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 105ನೇ ಸ್ಥಾನ
Bangladesh; ಮತ್ತೆ ಹಿಂದೂಗಳು ಗುರಿ: 35ಕ್ಕೂ ಹೆಚ್ಚು ಕಡೆ ದುರ್ಗಾ ಪೆಂಡಾಲ್ ಮೇಲೆ ದಾಳಿ
Israel;ಸ್ಫೋಟಗೊಂಡ ಪೇಜರ್ ಖರೀದಿಸಿದ್ದು ಇರಾನ್?: ಅಚ್ಚರಿ ವಿಚಾರ ಬಹಿರಂಗ
ವಿಮಾನ ಚಾಲನೆ ವೇಳೆ ಪೈಲಟ್‌ಗೆ ಅನಾರೋಗ್ಯ: ಪತ್ನಿಯಿಂದ ತುರ್ತು ಭೂಸ್ಪರ್ಶ
Nobel Peace Prize: ಜಪಾನ್‌ನ ಹಿಂಡಾಕ್ಯೋ ಸಂಸ್ಥೆಗೆ ಶಾಂತಿ ನೊಬೆಲ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.