China; ರಜೆಯಿಲ್ಲದೆ 104 ದಿನ ಕೆಲಸ ಮಾಡಿದ ವ್ಯಕ್ತಿ ಸಾವು; ಸಿಕ್ಕ ಪರಿಹಾರ ಎಷ್ಟು ಗೊತ್ತಾ?

Team Udayavani, Sep 9, 2024, 6:07 PM IST

China; ರಜೆಯಿಲ್ಲದೆ 104 ದಿನ ಕೆಲಸ ಮಾಡಿದ ವ್ಯಕ್ತಿ ಸಾವು; ಸಿಕ್ಕ ಪರಿಹಾರ ಎಷ್ಟು ಗೊತ್ತಾ?

ಬೀಜಿಂಗ್: ಪ್ರತಿಯೊಂದು ಕಂಪೆನಿಯಲ್ಲಿ ಉದ್ಯೋಗಿಗಳಿಗೆ ವಾರದ ರಜೆ ಇರುತ್ತದೆ. ಕೆಲವು ಕಂಪೆನಿಗಳಲ್ಲಿ ವಾರದಲ್ಲಿ ಎರಡು ದಿನ ರಜೆಯೂ ಸಿಗುತ್ತದೆ. ಆದರೆ ‌ ಯಾವುದೇ ರಜೆ ಪಡೆಯದೆ ಸತತ ಕೆಲಸ ಮಾಡಿದರೆ ಏನಾಗುತ್ತದೆ? 104 ದಿನಗಳ ಕಾಲ ರಜೆ ಪಡೆಯದೆ ಕೆಲಸ ಮಾಡಿದ ಚೀನಾದ ವ್ಯಕ್ತಿಯೊಬ್ಬರು ಅಂಗಾಂಗ ವೈಫಲ್ಯದಿಂದ (Organ Failure) ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

30 ವರ್ಷದ ಚೀನಾದ ವ್ಯಕ್ತಿಯೊಬ್ಬರು ಕೇವಲ ಒಂದು ದಿನದ ರಜೆ ಪಡೆದು ಸತತ 104 ದಿನ ಕೆಲಸ ಮಾಡಿ ಅಂಗಾಂಗ ವೈಫಲ್ಯದಿಂದ ಬಳಲಿ ಸಾವನ್ನಪ್ಪಿದ್ದಾರೆ. ಆತನ ಕೆಲಸದ ಮಾಲೀಕ ಆತನ ಸಾವಿಗೆ 20 ಪ್ರತಿಶತದಷ್ಟು ಹೊಣೆಗಾರ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ವೃತ್ತಿಯಲ್ಲಿ ಪೈಂಟರ್‌ ಆಗಿದ್ದ ಅಬಾವೊ ಎಂಬಾತ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ. ಅಂತಿಮವಾಗಿ ಅದು 2023 ರ ಜೂನ್ ನಲ್ಲಿ ಅವರ ಸಾವಿಗೆ ಕಾರಣವಾಯಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ವರದಿಯ ಪ್ರಕಾರ, ಅಬಾವೊ ಕಳೆದ ವರ್ಷ ಫೆಬ್ರವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಝೆಜಿಯಾಂಗ್ ಪ್ರಾಂತ್ಯದ ಝೌಶಾನ್‌ ನಲ್ಲಿ ಕೆಲಸ ಒಪ್ಪಿಕೊಂಡಿದ್ದರು. ಫೆಬ್ರವರಿಯಿಂದ ಮೇವರೆಗೆ ಅವರು ಪ್ರತಿದಿನ ಕೆಲಸ ಮಾಡಿದ್ದಾರೆ. ಮಧ್ಯದಲ್ಲಿ ಏಪ್ರಿಲ್‌ 6ರಂದು ಒಂದು ದಿನ ಮಾತ್ರ ರಜೆ ಪಡೆದಿದ್ದರು. ಮೇ 25ರಂದು ಅನಾರೋಗ್ಯವೆಂದು ರಜೆ ಮಾಡಿದ್ದರು. ಆದರೆ ಅಲ್ಲಿಂದ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಮೇ 28ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಜೂನ್‌ 1ರಂದು ಅಬಾವೊ ಅಸುನೀಗಿದ್ದರು. ಅವರು ನ್ಯುಮೋಕೊಕಲ್ ಸೋಂಕು ಮತ್ತು ಉಸಿರಾಟದ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಅಬಾವೊ ಸಾವಿನ ಬಳಿಕ ಮಾಲಿಕನ ನಿರ್ಲಕ್ಷ್ಯದ ವಿರುದ್ದ ಅಬಾವೊ ಕುಟುಂಬ ಕಾನೂನು ಸಮರ ಆರಂಭಿಸಿತ್ತು. ಝೌಶನ್ ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ ಅಬಾವೊ ಅವರ ಸಾವಿಗೆ ಕಂಪನಿಯು ಶೇಕಡಾ 20 ರಷ್ಟು ಹೊಣೆಗಾರ ಎಂದು ತೀರ್ಪು ನೀಡಿದೆ. 104 ದಿನಗಳ ಕೆಲಸದ ವಿಸ್ತರಣೆಯು ಚೀನೀ ಕಾರ್ಮಿಕ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿದೆ. ನಿಯಮದ ಪ್ರಕಾರ ಗರಿಷ್ಠ ಎಂಟು ಕೆಲಸದ ಸಮಯವನ್ನು ಮತ್ತು ವಾರಕ್ಕೆ ಸರಾಸರಿ 44 ಗಂಟೆಗಳ ಕಾಲ ಕಡ್ಡಾಯವಾಗಿದೆ.

ವರದಿಯ ಪ್ರಕಾರ, ನ್ಯಾಯಾಲಯವು ಅಬಾವೊ ಅವರ ಕುಟುಂಬಕ್ಕೆ 4,00,000 ಯುವಾನ್ (ಅಂದಾಜು ರೂ 47,46,000) ಪರಿಹಾರವನ್ನು ನೀಡಲು ಸೂಚಿಸಿದೆ. ಜೊತೆಗೆ 10,000 ಯುವಾನ್ (ಅಂದಾಜು ರೂ 1,17,000) ಭಾವನಾತ್ಮಕ ಯಾತನೆಗಾಗಿ ನೀಡಿತು. ಕಂಪನಿಯ ಮೇಲ್ಮನವಿ ವಿಫಲವಾಗಿದೆ.

ಟಾಪ್ ನ್ಯೂಸ್

Road Mishap: ಕಾಪು; ದಂಪತಿಗೆ ಬಸ್‌ ಢಿಕ್ಕಿ: ಪತಿ ಸಾವು

Road Mishap: ಕಾಪು; ದಂಪತಿಗೆ ಬಸ್‌ ಢಿಕ್ಕಿ: ಪತಿ ಸಾವು

Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ವಿಧಿವಶ!

Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ವಿಧಿವಶ!

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

gan-police

Gangavathi: ಬೈಕ್ ವೀಲ್ಹಿಂಗ್ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೇ ಥಳಿಸಿದ ಪುಂಡರ ಗುಂಪು!

Rishab

National Award: ದೈವ, ದೈವ ನರ್ತಕರು, ಜನರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್‌ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isrel netanyahu

Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Israel-Hamas War:ಹಮಾಸ್‌ ದಾಳಿಗೆ 1 ವರ್ಷ-ಇಸ್ರೇಲ್‌ ಮೇಲೆ ಹೆಜ್ಬುಲ್ಲಾ ದಾಳಿ, ಪ್ರತಿದಾಳಿ

Karachi Airport: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Road Mishap: ಕಾಪು; ದಂಪತಿಗೆ ಬಸ್‌ ಢಿಕ್ಕಿ: ಪತಿ ಸಾವು

Road Mishap: ಕಾಪು; ದಂಪತಿಗೆ ಬಸ್‌ ಢಿಕ್ಕಿ: ಪತಿ ಸಾವು

Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ವಿಧಿವಶ!

Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ವಿಧಿವಶ!

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

Newdelhi: 2028ರ ಅಂತ್ಯದವರೆಗೂ ಉಚಿತ ಅಕ್ಕಿ ಪೂರೈಕೆ: ಕೇಂದ್ರ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

ja

BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.