ಶಸ್ತ್ರಾಸ್ತ್ರಗಳ ಲೆಕ್ಕದಲ್ಲಿ ಚೀನ, ಪಾಕಿಸ್ಥಾನಕ್ಕಿಂತ ನಾವು ಹಿಂದೆ!
Team Udayavani, Jun 16, 2020, 10:01 AM IST
ಸಾಂದರ್ಭಿಕ ಚಿತ್ರ
ಲಂಡನ್: ಭಾರತ, ಕಳೆದ ವರ್ಷ ತನ್ನ ಪರಮಾಣು ಶಸ್ತ್ರಾಸ್ತ್ರ ಭಂಡಾರಕ್ಕೆ 10 ಹೊಸ ಶಸ್ತ್ರಗಳನ್ನು ಸೇರ್ಪಡೆಗೊಳಿಸಿದೆ. ಆದರೆ, ಒಟ್ಟಾರೆ ಶಸ್ತ್ರಾಸ್ತ್ರಗಳ ಲೆಕ್ಕಾಚಾರದಲ್ಲಿ ನೆರೆಯ ಚೀನ, ಪಾಕಿಸ್ಥಾನಕ್ಕಿಂತ ಭಾರತ ಕಡಿಮೆ ಯುದ್ಧ ಸಾಮಗ್ರಿಗಳನ್ನು ಹೊಂದಿದೆ ಎಂದು ಸ್ವೀಡನ್ನ ಚಿಂತಕರ ಚಾವಡಿ “ದ ಸ್ಟಾಕ್ಹೋಂ ಇಂಟರ್ ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಚೀನದ ಬಳಿ 290 ಪರಮಾಣು ಶಸ್ತ್ರಾಸ್ತ್ರಗಳಿದ್ದರೆ, ಪಾಕ್ ಬಳಿ 150ರಿಂದ 160 ಶಸ್ತ್ರಾಸ್ತ್ರಗಳಿವೆ. ಆದರೆ, ಭಾರತದ ಬಳಿ 130-140 ಪರಮಾಣು ಶಸ್ತ್ರಾಸ್ತ್ರಗಳಿವೆ. ಸೇನೆಯ ಆಧುನೀಕರಣದಲ್ಲಿ ದಾಪುಗಾಲಿಟ್ಟಿರುವ ಚೀನ, ಪರಮಾಣು ಶಕ್ತಿ ಮತ್ತಷ್ಟು ಹೆಚ್ಚಿಸಿಕೊಂಡಿದೆ. ನೆಲ-ವಾಯು- ಜಲ ಮಾರ್ಗಗಳ ಮೂಲಕ ದಾಳಿ ಮಾಡಬಲ್ಲ ಪರಮಾಣು ಕ್ಷಿಪಣಿಗಳು, ಹೊತ್ತೂಯ್ಯಬಲ್ಲ ಹೆಲಿಕಾಪ್ಟರ್ಗಳನ್ನು ತಯಾರು ಮಾಡಲಾರಂಭಿಸಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ