ಮಸೂದ್ ಜಾಗತಿಕ ಉಗ್ರನೆಂದು ಘೋಷಿಸಲು ಬೆಂಬಲ ಇಲ್ಲ ಎಂದ ಚೀನಾ!

Team Udayavani, Feb 15, 2019, 9:49 AM IST

ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆಸಿ 42 ಮಂದಿ ಯೋಧರು ಹುತಾತ್ಮರದ ಬಳಿಕವೂ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಬೆಂಬಲ ನೀಡಬೇಕೆಂಬ ಭಾರತದ ಬೇಡಿಕೆಯನ್ನು ಚೀನಾ ಮತ್ತೆ ಸಾರಸಗಟಾಗಿ ತಿರಸ್ಕರಿಸಿದೆ.

ಜಮ್ಮು-ಕಾಶ್ಮೀರದಲ್ಲಿ ನಡೆದ ದಾಳಿಯ ಘಟನೆಯಿಂದ ನಮಗೆ ಆಘಾತವಾಗಿದೆ. ಘಟನೆಯಲ್ಲಿ ಹುತಾತ್ಮರಾದ ಮತ್ತು ಗಾಯಗೊಂಡ ಕುಟುಂಬದವರಿಗೆ ನಮ್ಮ ಸಾಂತ್ವನ ತಿಳಿಸುತ್ತಿದ್ದೇವೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಯಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆಯನ್ನು ಮಟ್ಟ ಹಾಕಲು ಎಲ್ಲಾ ದೇಶಗಳು ಕೈಜೋಡಿಸಲಿದ್ದಾರೆ ಎಂಬ ಆಶಾಭಾವ ನಮ್ಮದು. ಅಷ್ಟೇ ಅಲ್ಲ ಅಜರ್ ಮಸೂದ್ ಕುರಿತ ನಿರ್ಧಾರದ ಬಗ್ಗೆ ಒಂದು ವೇಳೆ ಈ ವರ್ಷ ಮರು ಪರಿಶೀಲಿಸಬೇಕು ಎಂಬುದಾದರೆ ನಮ್ಮ ನಿಲುವು ಬಗ್ಗೆ ಸ್ಪಷ್ಟವಾಗಿದೆ.

ಜೆಇಎಂ ಹಾಗೂ ಅಜರ್ ಮಸೂದ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ವಿಷಯದ ಬಗ್ಗೆ ನಾವು(ಚೀನಾ) ಕೂಡಾ ಜವಾಬ್ದಾರಿಯುತವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಅಸ್ತ್ರ ಪ್ರಯೋಗಿಸುವ ಖಾಯಂ ಸದಸ್ಯ ಚೀನ, ಭಾರತದ ಯತ್ನಕ್ಕೆ ತಡೆ ಒಡ್ಡುವಲ್ಲಿ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ನ ಬೆಂಬಲ ಪಡೆದಿದೆ. ಅಲ್‌ ಕಾಯಿದಾ ನಿಷೇಧ ಸಮಿತಿಯಡಿ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯು  ಜಾಗತಿಕ ಉಗ್ರನೆಂದು ಘೋಷಿಸುವಂತೆ  ಮಾಡುವ ಭಾರತದ ಪ್ರಯತ್ನ ಚೀನದ ನಿರಂತರ ತಡೆಯಿಂದಾಗಿ ಈ ತನಕವೂ ಸಫ‌ಲವಾಗಿಲ್ಲ.  

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ