ಲಂಚ ಸ್ವೀಕಾರ ಅಪರಾಧ ಒಪ್ಪಿಕೊಂಡ ಚೀನದ ಮಾಜಿ ಇಂಟರ್‌ಪೋಲ್ ಮುಖ್ಯಸ್ಥ
Team Udayavani, Jun 20, 2019, 12:33 PM IST
ಬೀಜಿಂಗ್ : 2.1 ದಶಲಕ್ಷ ಡಾಲರ್ ಲಂಚ ತೆಗೆದುಕೊಂಡ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಚೀನದ ಮಾಜಿ ಇಂಟರ್‌ಪೋಲ್ ಮುಖ್ಯಸ್ಥ ಮೆಂಗ್ ಹೊಂಗ್‌ವೇಯಿ ಇಂದು ಗುರುವಾರ ವಿಚಾರಣೆಯ ವೇಳೆ ತಾನು ಲಂಚ ಸ್ವೀಕರಿಸಿರುವುದನ್ನು ಒಪ್ಪಿಕೊಂಡರು.
ಪೂರ್ವ ಚೀನದ ತಿಯಾಂಜಿನ್ ನಂ.1 ಇಂಟರ್‌ಮೀಡಿಯಟ್ ಪೀಪಲ್ಸ್ ಕೋರ್ಟ್ ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಚೀನದ ಸಾರ್ವಜನಿಕ ಭದ್ರತೆಯ ಮಾಜಿ ಉಪ ಸಚಿವರೂ ಆದ ಮೆಂಗ್, ತಾನು ಎಸಗಿದ ಲಂಚ ಸ್ವೀಕಾರದ ಅಪರಾಧಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದರು ಎಂದು ಚೀನದ ಕಮ್ಯುನಿಸ್ಟ್ ಪಾರ್ಟಿ ಮುಖವಾಣಿ ಪೀಪಲ್ಸ್ ಡೈಲಿ ವರದಿ ಮಾಡಿದೆ.
ಈ ಪ್ರಕರಣದ ತೀರ್ಪನ್ನು ತಾನು ತನ್ನ ಆಯ್ಕೆಯ ದಿನಾಂಕ ಮತ್ತು ಸಮಯದಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು.