ಕೋವಿಡ್ ಹಬ್ಬಿಸಿದ್ದು ನಾವಲ್ಲ: ಚೀನ ಡ್ರಾಮಾ
"ನಮಗೂ ಮೊದಲೇ ಜಗತ್ತಿನ ಬೇರೆ ಭಾಗಗಳಲ್ಲಿ ಕೊರೊನಾ ಇತ್ತು'
Team Udayavani, Oct 10, 2020, 6:17 AM IST
ಸಾಂದರ್ಭಿಕ ಚಿತ್ರ
ಬೀಜಿಂಗ್: ಕೋವಿಡ್ ವೈರಾಣುವನ್ನು ಜಗತ್ತಿನಾದ್ಯಂತ ಹಬ್ಬಿಸಿದ ಚೀನ ಈಗ ಹೊಸ ನಾಟಕ ಆರಂಭಿಸಿದೆ. ಕೊರೊನಾ ಹಂಚಿದ್ದು ನಾವಲ್ಲ. ಚೀನಕ್ಕೂ ಮೊದಲು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕೊರೊನಾ ಹುಟ್ಟಿಕೊಂಡಿತ್ತು ಎಂದು ಹೇಳಿಕೊಂಡಿದೆ.
ಹೌದು! ವುಹಾನ್ ಲ್ಯಾಬ್ನಿಂದ ಕೋವಿಡ್ ವೈರಾಣು ಹರಡಿದೆ ಎಂದು ಇತ್ತೀಚೆಗೆ ಅಮೆರಿಕ ಆರೋಪಿಸಿದ್ದ ಬೆನ್ನಲ್ಲೇ ಚೀನ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿದೆ. “ಕಳೆದ ವರ್ಷದ ಅಂತ್ಯದಲ್ಲಿ ಕೋವಿಡ್ ಜಗತ್ತಿನ ಬೇರೆ ಬೇರೆ ಭಾಗದಲ್ಲಿ ದೃಢವಾಗಿತ್ತು. ಯಾರೂ ಈ ಬಗ್ಗೆ ಮಾತಾಡಿರಲಿಲ್ಲ. ಆದರೆ, ಚೀನ ಕೊರೊನಾ ಪತ್ತೆಹಚ್ಚಿ ಮೊದಲ ಬಾರಿಗೆ ವರದಿ ಮಾಡಿತು. ವೈರಾಣುವಿನ ಜೀನೋಮ್ ಅನುಕ್ರಮವನ್ನು ಜಗತ್ತಿನೊಂದಿಗೆ ಹಂಚಿ ಕೊಂಡಿತ್ತು’ ಎಂದು ಇಲಾಖೆ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ.
“ಕೋವಿಡ್ ಒಂದು ಬಗೆಯ ಹೊಸ ವೈರಾಣು. ಅಮೆರಿಕ ಆಪಾದಿಸಿದಂತೆ ಇದು ವುಹಾನ್ನ ಲ್ಯಾಬ್ನಿಂದಾಗಲೀ, ಕೇಂದ್ರ ಚೀನದ ಮಾಂಸ ಮಾರುಕಟ್ಟೆಯ ಬಾವಲಿ ಅಥವಾ ಪ್ಯಾಂಗೊಲಿನ್ ಸಸ್ತನಿಯಿಂದಾಗಲೀ ಹಬ್ಬಿದ್ದಲ್ಲ’ ಎಂದು ಯುಎಸ್ನ ಆರೋಪವನ್ನು ಅಲ್ಲಗಳೆದಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪ್ಯೂ ಇತ್ತೀಚೆಗಷ್ಟೇ ಟೋಕಿಯೊದ ಕ್ವಾಡ್ ಸಭೆಯಲ್ಲಿ ಚೀನದ ಮೇಲೆ ತೀವ್ರ ವಾಗ್ಧಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ