ಎನ್ಎಸ್ಜಿ ಸದಸ್ಯತ್ವಕ್ಕೆ ಚೀನ ವಿರೋಧ
Team Udayavani, Jun 22, 2019, 5:00 AM IST
ಬೀಜಿಂಗ್: ಉಗ್ರ ಮಸೂದ್ ಅಜರ್ಗೆ ಅಂತಾರಾಷ್ಟ್ರೀಯ ನಿಷೇಧ ಹೇರುವ ಕುರಿತು ಈವರೆಗೆ ಆಕ್ಷೇಪ ಎತ್ತುತ್ತಿದ್ದ ಚೀನ ಈಗ ಭಾರತದ ಪರಮಾಣು ಪೂರೈಕೆ ಗುಂಪಿನ (ಎನ್ಎಸ್ಜಿ) ಸದಸ್ಯತ್ವಕ್ಕೂ ಕ್ಯಾತೆ ತೆಗೆಯುತ್ತಿದೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ತಂಡದ ಹೊರಗಿನ ಸದಸ್ಯರು ಪರಮಾಣು ಪೂರೈಕೆ ಗುಂಪಿಗೆ ಸೇರುವ ಕುರಿತು ಸ್ಪಷ್ಟ ಯೋಜನೆ ರೂಪಿಸದೇ, ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವದ ಕುರಿತು ಚರ್ಚೆ ನಡೆಸಲಾಗದು ಎಂದಿದೆ. ಎನ್ಎಸ್ಜಿಗೆ ಸದಸ್ಯತ್ವ ಕೋರಿ 2016ರಲ್ಲಿಭಾರತ ಅರ್ಜಿ ಸಲ್ಲಿಸಿದಾಗಿ ನಿಂದಲೂ ಚೀನ ಆಕ್ಷೇಪ ಎತ್ತುತ್ತಿದೆ. ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದರೆ ಮಾತ್ರವೇ ಎನ್ಎಸ್ಜಿ ಸದಸ್ಯತ್ವ ನೀಡಬೇಕು ಎಂದು ಚೀನ ಒತ್ತಡ ಹಾಕುತ್ತಿದೆ. ಭಾರತ ಈವರೆಗೂ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಸಹಿ ಹಾಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು