ತೀವ್ರಗೊಂಡ ಚೀನದ ಪ್ರಚೋದನೆ; ತೈವಾನ್‌ ಜಲಸಂಧಿಯಲ್ಲಿ ಯುದ್ಧವಿಮಾನ, ನೌಕೆಗಳ ಸಂಚಾರ ಹೆಚ್ಚಳ

Team Udayavani, Aug 7, 2022, 7:05 AM IST

thumb 5 fhdzxh

ಬೀಜಿಂಗ್‌: ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ ವಿರುದ್ಧ ತಿರುಗಿಬಿದ್ದಿರುವ ಚೀನ ಶನಿವಾರ ಮತ್ತೆ ಪ್ರಚೋದನೆಯನ್ನು ಹೆಚ್ಚಿಸಿದೆ.

ಸೇನಾ ಕವಾಯತು ಹೆಸರಿನಲ್ಲಿ ತೈವಾನ್‌ ಜಲಸಂಧಿಯಲ್ಲಿ ಭಾರೀ ಸಂಖ್ಯೆಯ ಚೀನ ವಿಮಾನಗಳು ಮತ್ತು ನೌಕೆಗಳು ಸಂಚರಿಸತೊಡಗಿದ್ದು, ಅಮೆರಿಕವು ನಮ್ಮ ಮೇಲೆ ದಾಳಿ ನಡೆಸಲು ತುದಿಗಾಲಲ್ಲಿ ನಿಂತಿದೆ ಎಂದು ತೈವಾನ್‌ ಆರೋಪಿಸಿದೆ.

ಇದರ ಬೆನ್ನಲ್ಲೇ ತೈವಾನ್‌ ಕೂಡ ಸಶಸ್ತ್ರ ಪಡೆಗಳಿಗೆ ಅಲರ್ಟ್‌ ಜಾರಿ ಮಾಡಿದ್ದು, ದ್ವೀಪದ ಸುತ್ತಲೂ ವೈಮಾನಿಕ ಮತ್ತು ನೌಕಾ ಗಸ್ತು ಆರಂಭಿಸಿದೆ. ತನ್ನಲ್ಲಿರುವ ಕ್ಷಿಪಣಿ ವ್ಯವಸ್ಥೆಯನ್ನೂ ಸಕ್ರಿಯಗೊಳಿಸಿದೆ.

ಇನ್ನೊಂದೆಡೆ, ಶುಕ್ರವಾರ ರಾತ್ರಿ ಕಿನ್‌ಮೆನ್‌ ದ್ವೀಪದ ಸಮೀಪ ಚೀನಾದ್ದು ಎನ್ನಲಾದ ನಾಲ್ಕು ಡ್ರೋನ್‌ಗಳು ಹಾರಾಟ ನಡೆಸಿವೆ. ಇದು ಕಣ್ಣಿಗೆ ಬೀಳುತ್ತಿದ್ದಂತೆ ತೈವಾನ್‌ ಸೇನೆಯು ಗುಂಡಿನ ದಾಳಿ ನಡೆಸಿ, ಎಚ್ಚರಿಕೆ ನೀಡಿದೆ.

“ಪ್ರಜಾಸತ್ತಾತ್ಮಕ ತೈವಾನ್‌ಗೆ ಅಂತಾರಾಷ್ಟ್ರೀಯ ಸಮುದಾಯವು ಬೆಂಬಲ ನೀಡಬೇಕು. ಪ್ರಾದೇಶಿಕ ಭದ್ರತಾ ಪರಿಸ್ಥಿತಿಗೆ ಧಕ್ಕೆ ತರುವಂಥ ಪ್ರಚೋದನಾತ್ಮಕ ಕ್ರಮಗಳಿಗೆ ತಡೆ ತರಬೇಕು’ ಎಂದು ತೈವಾನ್‌ ಅಧ್ಯಕ್ಷರಾದ ಸೈ ಇಂಗ್‌-ವೆನ್‌ ಮನವಿ ಮಾಡಿದ್ದಾರೆ.

ತೈವಾನ್‌ ರಕ್ಷಣಾ ಇಲಾಖೆ ಅಧಿಕಾರಿ ಶವವಾಗಿ ಪತ್ತೆ!
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತೈವಾನ್‌ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪಾಧ್ಯಕ್ಷರಾದ ಔ ಯಾಂಗ್‌ ಲಿ-ಸಿಂಗ್‌ ಅವರು ಹೋಟೆಲ್‌ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತೈವಾನ್‌ನ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಔ ಯಾಂಗ್‌ ಅವರು ಕೆಲಸದ ನಿಮಿತ್ತ ದಕ್ಷಿಣ ತೈವಾನ್‌ಗೆ ಹೋಗಿದ್ದರು. ಶನಿವಾರ ಹೋಟೆಲ್‌ ಕೊಠಡಿಯಲ್ಲಿ ಅವರ ಮೃತದೇಹ ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚೀನ-ತೈವಾನ್‌ ನಡುವೆ ಯುದ್ಧದ ಕಾರ್ಮೋಡ ಹಬ್ಬಿರುವಾಗಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಟಾಪ್ ನ್ಯೂಸ್

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

2022 ಹೊರಳು ನೋಟ

2022 ಹೊರಳು ನೋಟ: ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ, ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ನಿಷೇಧ

ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ನಿಷೇಧ

ಹೊಸ ಪಕ್ಷ ಕಟ್ಟೋದು ರೆಡ್ಡಿ ವಿವೇಚನೆಗೆ ಬಿಟ್ಟದ್ದು: ರಾಮುಲು

ಹೊಸ ಪಕ್ಷ ಕಟ್ಟೋದು ರೆಡ್ಡಿ ವಿವೇಚನೆಗೆ ಬಿಟ್ಟದ್ದು: ರಾಮುಲು

ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ: ಸಿಎಂ

ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ: ಸಿಎಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

TDY-17

21 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಟಿಕ್‌ಟಾಕ್‌ ಸ್ಟಾರ್

thumb-1

‌ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

ಮಸ್ಕ್ ಮೆದುಳಿಗೆ ಚಿಪ್‌ ಅಳವಡಿಕೆ? ಮುಂದಿನ ಆರು ತಿಂಗಳಲ್ಲಿ ಪ್ರಯೋಗ ಪೂರ್ಣ ಸಾಧ್ಯತೆ

ಮಸ್ಕ್ ಮೆದುಳಿಗೆ ಚಿಪ್‌ ಅಳವಡಿಕೆ? ಮುಂದಿನ ಆರು ತಿಂಗಳಲ್ಲಿ ಪ್ರಯೋಗ ಪೂರ್ಣ ಸಾಧ್ಯತೆ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

ಭಾರತಕ್ಕೆ ಪ್ರಜಾಪ್ರಭುತ್ವ ಕುರಿತ ಪಾಠದ ಅಗತ್ಯವಿಲ್ಲ

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

2022 ಹೊರಳು ನೋಟ

2022 ಹೊರಳು ನೋಟ: ಟೆನಿಸ್‌ ದೊರೆ ಫೆಡರರ್‌ ನಿವೃತ್ತಿ, ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ವಿಧಿವಶ

tdy-26

ಮಹಾ ಸಚಿವರ ಮುಂದೆ ಸಿಎಂ ಬಾಲ ಮುದುರಿದ ಬೆಕ್ಕಿನಂತೆ : ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.