ಕೋಕಕೊಲ, ಮೆಕ್ಡೊನಾಲ್ಡ್ಸ್ ನತ್ತ ಎಲಾನ್ ಮಸ್ಕ್ ದೃಷ್ಟಿ? ಅಚ್ಚರಿ ತಂದ ಉದ್ಯಮಿಯ ಟ್ವೀಟ್
ಟ್ವಿಟರ್ ಕಾನೂನು ಅಧಿಕಾರಿ ವಿರುದ್ಧವೂ ಆಕ್ಷೇಪ
Team Udayavani, Apr 28, 2022, 8:10 PM IST
ವಾಷಿಂಗ್ಟನ್ : ಮೈಕ್ರೋಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಅನ್ನು ಖರೀದಿಸಿರುವ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಇದೀಗ ಕೋಕಾ ಕೋಲಾ ಸಂಸ್ಥೆಯತ್ತ ಕಣ್ಣು ಹಾಕಿದ್ದಾರೆಯೇ? ಇದರ ಜತೆಗೆ ಫಾಸ್ಟ್ಫುಡ್ ಕಂಪನಿ ಮೆಕ್ಡೊನಾಲ್ಡ್ಸ್ ಬಗ್ಗೆಯೂ ಆಸಕ್ತಿ ವಹಿಸಿದಂತಿದೆ. ಈ ಚರ್ಚೆಗೆ ಎಡೆ ಮಾಡಿಕೊಟ್ಟದ್ದು ಮಸ್ಕ್ ಅವರ ಟ್ವೀಟ್. “ಕೋಕೈನ್ನನ್ನು ಮತ್ತೆ ತರುವುದಕ್ಕಾಗಿ ನಾನು ಕೋಕಾ ಕೋಲಾ ಸಂಸ್ಥೆಯನ್ನು ಖರೀದಿಸಲಿದ್ದೇನೆ’ ಮತ್ತು “ಮೆಕ್ಡೊನಾಲ್ಡ್ಸ್ ಅನ್ನೂ ಖರೀದಿ ಮಾಡಲಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅವರ ಎರಡು ಟ್ವೀಟ್ಗಳು ಜಾಲತಾಣದಲ್ಲಿ ಭಾರೀ ಚರ್ಚೆಯನ್ನಂತೂ ಹುಟ್ಟುಹಾಕಿದೆ. ಖರೀದಿ ಬಗ್ಗೆ ಮಸ್ಕ್, ಕೋಕಾ ಕೋಲಾ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ್ದಾರೆಯೇ ಎನ್ನುವ ವಿಚಾರ ಇನ್ನೂ ಗೊತ್ತಾಗಿಲ್ಲ. ಆದರೆ, ನೆಟ್ಟಿಗರು ಮಾತ್ರ ಮಸ್ಕ್ ತಮಾಷೆ ಮಾಡುತ್ತಿರಬಹುದೂ ಎಂದ ಹೇಳಿಕೊಂಡಿದ್ದಾರೆ.
ಕಾನೂನು ಅಧಿಕಾರಿ ವಿರುದ್ಧ ಟೀಕೆ:
ಇನ್ನೊಂದೆಡೆ, ಟ್ವಿಟರ್ ಮುಖ್ಯ ಕಾನೂನು ಅಧಿಕಾರಿ, ಭಾರತೀಯ ಮೂಲದ ವಿಜಯ ಗಡ್ಡೆ ವಿರುದ್ಧವೂ ಹರಿಹಾಯ್ದಿದ್ದಾರೆ. “ವಿಜಯ ಗಡ್ಡೆ ಟ್ವಿಟರ್ ಸಂಸ್ಥೆಯನ್ನು ಮಸ್ಕ್ ಖರೀದಿಸಿದ್ದ ಬಗ್ಗೆ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ’ ಎಂದು ಲೇಖಕ ಸಾಗರ್ ಎಂಜೆಟಿ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮಸ್ಕ್, “ಹಂಟರ್ ಬೈಡೆನ್ (ಅಮೆರಿಕ ಅಧ್ಯಕ್ಷರ ಪುತ್ರ) ಬಗ್ಗೆ ಸತ್ಯ ಸುದ್ದಿಯನ್ನು ಬರೆದಿದ್ದ ಮಾಧ್ಯಮ ಸಂಸ್ಥೆ (ದ ನ್ಯೂಯಾರ್ಕ್ ಪೋಸ್ಟ್)ಯ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಿದ್ದು ಸರಿಯಲ್ಲ’ ಎಂದು ಟೀಕಿಸಿದ್ದಾರೆ. ಇದರ ಜತೆಗೆ ಟ್ವಿಟರ್ನಲ್ಲಿ ಡೈರೆಕ್ಟ್ ಮೆಸೇಜ್ ವ್ಯವಸ್ಥೆ ಬಲಪಡಿಸಲು ಎನ್ಕ್ರಿಪ್ಶನ್ಗೆ ಒಳಪಡಿಸಬೇಕು. ಇದರಿಂದಾಗಿ ಅದು ಸುರಕ್ಷಿತವಾಗಿರಲಿದೆ ಎಂದೂ ಬರೆದುಕೊಂಡಿದ್ದಾರೆ ಮಸ್ಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ