ಪಿಎಂ ಮೋದಿ ಆಲಿಂಗಿಸಿದ್ದಕ್ಕೆ ಕಾಂಗ್ರೆಸ್‌ ಪಕ್ಷದಲ್ಲೇ ಆಕ್ಷೇಪ


Team Udayavani, Aug 23, 2018, 3:49 PM IST

rahulgandhi.jpg

ಹ್ಯಾಂಬರ್ಗ್‌: ಇತ್ತೀಚೆಗೆ ಮುಕ್ತಾಯ ವಾಗಿರುವ ಸಂಸತ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಲಿಂಗಿಸಿ ಕೊಂಡದ್ದಕ್ಕೆ ತಮ್ಮ ಪಕ್ಷದಲ್ಲಿಯೇ ಅತೃಪ್ತಿ ಇದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಬುಧವಾರ ಅವರು ಮಾತನಾಡಿದರು. ಪ್ರಪಂಚ ಎನ್ನುವುದು ಕೆಟ್ಟವರು ಇರುವ ಜಾಗವಲ್ಲ. ಅಲ್ಲಿ ಒಳ್ಳೆಯವರೂ ಇರುತ್ತಾರೆ ಎಂಬ ವಿಚಾರವನ್ನು ಪ್ರಧಾನಿಯವರ ಗಮನಕ್ಕೆ ತರುವುದು ತಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ. ಆದರೆ ಅವರನ್ನು ಆಲಿಂಗಿಸಿಕೊಂಡದ್ದು ಕಾಂಗ್ರೆಸ್‌ನಲ್ಲಿಯೇ ಹಲವರಿಗೆ ಮೆಚ್ಚುಗೆಯಾಗಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿನ ತಮ್ಮ ಕ್ರಮ ಪ್ರಧಾನಿಯ ವರಿಗೆ ಇಷ್ಟವಾಗಲಿಲ್ಲ ಎಂದಿದ್ದಾರೆ ರಾಹುಲ್‌. 

ಜನರಿಗೆ 21 ಶತಮಾನ ದೃಷ್ಟಿಕೋನ ನೀಡದೇ ಇದ್ದರೆ ಮತ್ತೂಬ್ಬರು ನೀಡಲು ಮುಂದಾಗಿದ್ದಾರೆ. ಜನರನ್ನು ಸ್ವೀಕರಿಸಿ ಮುಂದುವರಿಯದಿದ್ದರೆ, ಮತ್ತೂಬ್ಬರು ಆ ಕೆಲಸ ಮಾಡಿಕೊಂಡು ಮುಂದುವರಿಯುತ್ತಾರೆ ಎಂದು ಪರೋಕ್ಷವಾಗಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ರಾಹುಲ್‌ ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. 

ಭಾರತದಲ್ಲಿ ಮಹಿಳೆಯರ ವಿರುದ್ಧ ಹಿಂಸಾಚಾರಗಳು ಹೆಚ್ಚುತ್ತಿವೆ. ಭಾರತದಲ್ಲಿನ ಪುರು ಷರು ಮಹಿಳೆಯರ ಬಗ್ಗೆ ನೋಡುವ ದೃಷ್ಟಿ ಕೋನ ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ. ನೋಟು ಅಮಾನ್ಯ ಕ್ರಮದ ಬಗ್ಗೆಯೂ ರಾಹುಲ್‌ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ರಾಜೀವ್‌ ಗಾಂಧಿ ಹತ್ಯೆಗೆ ಕಾರಣನಾದ ಎಲ್‌ಟಿಟಿಇ ನಾಯಕ ವಿ.ಪ್ರಭಾಕರನ್‌ ಅಸುನೀಗಿದ್ದಾಗ ಅದನ್ನು ಇಷ್ಟಪಡಲಿಲ್ಲ ಎಂದಿದ್ದಾರೆ. ಹಿಂಸೆಯಿಂದ ತಾನು ಮತ್ತು ಕುಟುಂಬ ನರಳಿದೆ ಎಂದು ಹೇಳಿಕೊಂಡ ಅವರು ಅಂಥವುಗಳನ್ನು ಮರೆಯಲು ಕ್ಷಮೆಯೇ ಉತ್ತಮ ಪರಿಹಾರ ಎಂದಿದ್ದಾರೆ.  ಅಮೆರಿಕ, ಚೀನಾ ಜತೆ ಭಾರತ ವ್ಯೂಹಾತ್ಮಕ ಬಾಂಧವ್ಯ ಕಾಪಾಡಿಕೊಂಡು ಬರುವುದು ಅಗತ್ಯ ಸಲಹೆ ಮಾಡಿದ್ದಾರೆ. ಗುರುವಾರ ಭಾರತೀಯ ಸಮುದಾ ಯದವರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜರ್ಮನಿ ಅಧ್ಯಕ್ಷೆ ಆ್ಯಂಜೆಲಾ ಮರ್ಕೆಲ್‌ರನ್ನೂ ಭೇಟಿ ಮಾಡಲಿದ್ದಾರೆ. ಜರ್ಮನಿ ಮತ್ತು ಯು.ಕೆ.ಗೆ ಅವರು 4 ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯ

2rain

ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 4

ಶ್ರೀಲಂಕಾ ಏರ್‌ಲೈನ್ಸ್‌ ಮಾರಲು ಹೊರಟ ಪ್ರಧಾನಿ ವಿಕ್ರಮ ಸಿಂಘೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

1aa

ಜಮ್ಮು& ಕಾಶ್ಮೀರದ ಕುರಿತು ಪಾಕ್‌ ನಿಲುವಳಿಗೆ ಭಾರತ ತಿರಸ್ಕಾರ

1-dsada

ಟೆಕ್ಸಾಸ್‌ ಶಾಲೆಯಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ

crime

ಪಾಕ್‌ನಲ್ಲಿ ಇಬ್ಬರ ಸಿಖ್ಖರ ಹತ್ಯೆ: ಎಫ್ಐಆರ್‌ ದಾಖಲು

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

parking

ರಿಕ್ಷಾ, ವಾಹನ ನಿಲುಗಡೆಗೆ ಕಾನೂನುಬದ್ಧ ಸ್ಥಳ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯ

2rain

ನಾವು ಮುಳುಗುತ್ತಿದ್ದೇವೆಂದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

kotian

ಹೆಚ್ಚುವರಿ 1 ಗಂಟೆ ನೀರು ಪೂರೈಕೆಗೆ ನಿರ್ಧಾರ

sunil-kumar

ಹೊಸ ಉಪಕೇಂದ್ರದಿಂದ ಬಂಟ್ವಾ ಳದ 14 ಸಾವಿರ ಗ್ರಾಹಕರಿಗೆ ನಿರಂತರ ವಿದ್ಯುತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.