ದ.ಕೊರಿಯಾಗೂ “ಕೊರೊನಾ’ಘಾತ! ಸೋಂಕಿತರ ಸಂಖ್ಯೆ ಏಕಾಏಕಿ 346ಕ್ಕೇರಿಕೆ

ಹಲವು ದೇಶಗಳಿಗೆ ಹಬ್ಬುತ್ತಿದೆ ಮಾರಣಾಂತಿಕ ಸೋಂಕು

Team Udayavani, Feb 22, 2020, 8:03 PM IST

korea

ಬೀಜಿಂಗ್‌/ನವದೆಹಲಿ: ಚೀನಾವನ್ನು ಇನ್ನಿಲ್ಲದಂತೆ ಹೈರಾಣಗೊಳಿಸಿರುವ ಕೊರೊನಾವೈರಸ್‌ ಹಲವಾರು ದೇಶಗಳಿಗೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಈಗ ದಕ್ಷಿಣ ಕೊರಿಯಾ, ಇರಾನ್‌, ಇಟಲಿ ಮತ್ತಿತರ ದೇಶಗಳಲ್ಲಿ ಭೀತಿ ಹುಟ್ಟಿಸಿದೆ.

ದ.ಕೊರಿಯಾದಲ್ಲಿ ಶನಿವಾರ ಮತ್ತೆ 142 ಕೋವಿಡ್‌-19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 346ಕ್ಕೇರಿದೆ.

ಈಗಾಗಲೇ ಇಲ್ಲಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಐದು ದಿನಗಳ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಸೋಂಕಿತರ ಪೈಕಿ 92 ಮಂದಿ ಚೆಯಾಂಗ್‌ಡೋ ಡೇನಮ್‌ ಮಾನಸಿಕ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಎಂದು ಹೇಳಲಾಗಿದೆ. ಇದೇ ವೇಳೆ, ಇಲ್ಲಿನ ಚರ್ಚ್‌ವೊಂದರ 150 ಸದಸ್ಯರಿಗೂ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಟಲಿ ನಗರ ಲಾಕ್‌ಡೌನ್‌:
ಇಟಲಿಯಲ್ಲೂ ಕೊರೊನಾ ಆತಂಕ ಹೆಚ್ಚಿದ್ದು, ವೈರಸ್‌ಗೆ ಇಲ್ಲಿ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಕೊಡೊಗ್ನೊà ನಗರವನ್ನು ಲಾಕ್‌ಡೌನ್‌ ಮಾಡಲಾಗಿದ್ದು, ಯಾರೂ ಮನೆಗಳಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು, ಇರಾನ್‌ನಲ್ಲಿ 28 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಐವರು ಸಾವಿಗೀಡಾಗಿದ್ದಾರೆ. ಒಟ್ಟಾರೆ ಜಾಗತಿಕವಾಗಿ 77 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಚೀನಾ ಘೋಷಿಸಿದೆ.

ಚೀನಾದಲ್ಲಿ ಮೃತರ ಸಂಖ್ಯೆ ಶನಿವಾರ 2,345ಕ್ಕೇರಿದ್ದು, ಸೋಂಕಿತರ ಸಂಖ್ಯೆ 76,288ಕ್ಕೇರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವೊಂದು ವುಹಾನ್‌ಗೆ ಆಗಮಿಸಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ.

ಅನಗತ್ಯ ಪ್ರಯಾಣ ಬೇಡ:
ಕೊರೊನಾವೈರಸ್‌ ಭೀತಿಯಿಂದಾಗಿ ಕೇಂದ್ರ ಸರ್ಕಾರವು ದೇಶದ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ಹೊರಡಿಸಿದ್ದು, ಸಿಂಗಾಪುರಕ್ಕೆ ಅನಗತ್ಯವಾಗಿ ಭೇಟಿ ನೀಡದಂತೆ ಸೂಚಿಸಿದೆ. ಶನಿವಾರ ಕೇಂದ್ರ ಸಂಪುಟ ಕಾರ್ಯದರ್ಶಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಅಲ್ಲದೆ, ಇನ್ನು ಮುಂದೆ ನೇಪಾಳ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಆಗಮಿಸುವ ವಿಮಾನಗಳ ಪ್ರಯಾಣಿಕರನ್ನೂ ಏರ್‌ಪೋರ್ಟ್‌ನಲ್ಲಿ ತಪಾಸಣೆಗೊಳಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಧಾನಿ ಮೋದಿಗೆ ಪತ್ರ
ಕೊರೊನಾ ಸೋಂಕಿತರಿರುವ ಜಪಾನ್‌ನ ನೌಕೆಯಲ್ಲಿ ಸಿಲುಕಿಕೊಂಡಿರುವ ತಮ್ಮ 24 ವರ್ಷದ ಮಗಳನ್ನು ರಕ್ಷಿಸುವಂತೆ ಕೋರಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. “ನನ್ನ ಮಗಳ ರಕ್ತದ ಪರೀಕ್ಷೆಯಲ್ಲಿ ನೆಗೆಟಿವ್‌ ಎಂಬ ವರದಿ ಬಂದಿದೆ. ಕಳೆದ 15 ದಿನಗಳಿಂದಲೂ ಅವಳನ್ನು ಸಣ್ಣ ಕೊಠಡಿಯೊಂದರಲ್ಲಿ ನಿಗಾದಲ್ಲಿ ಇರಿಸಿದ್ದಾರೆ. ಅವಳನ್ನು ದಯವಿಟ್ಟು ರಕ್ಷಿಸಿ’ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ. ಈ ವ್ಯಕ್ತಿಯ ಪುತ್ರಿಯು ಕ್ರೂಸ್‌ನೌಕೆಯ ಭದ್ರತಾ ದಳದ ಸದಸ್ಯೆ.

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.