
2017ರಲ್ಲೇ ಪತ್ತೆಯಾಗಿತ್ತಾ ಕೊರೊನಾ? ಆದರೆ ಚೀನಾದಲ್ಲಿ ಅಲ್ಲ!
Team Udayavani, May 22, 2021, 7:39 AM IST

ಕೌಲಾಲಂಪುರ: ಮಲೇಷ್ಯಾದಲ್ಲಿ 2017-18ರಲ್ಲಿ ತೀವ್ರ ತೆರನಾದ ನ್ಯುಮೋನಿಯಾ (ಶ್ವಾಸಕೋಶದ ಸೋಂಕು) ಕಾಯಿಲೆಗೆ ತುತ್ತಾದ ವ್ಯಕ್ತಿಗಳಲ್ಲಿ ಕೆನೈನ್ ಕೊರೊನಾ ವೈರಸ್ ಎಂಬ ಜಾತಿಯ ವೈರಾಣು ಪತ್ತೆಯಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ಮಲೇಷ್ಯಾದ ಪೂರ್ವ ಭಾಗದಲ್ಲಿರುವ ಸರವಾಕ್ ರಾಜ್ಯದ ಕೆಲವು ಆಸ್ಪತ್ರೆಗಳಲ್ಲಿ ತೀವ್ರ ನ್ಯುಮೋನಿಯಾದಿಂದ ಸುಮಾರು 301 ರೋಗಿಗಳು ದಾಖಲಾಗಿದ್ದರು. ಅವರಲ್ಲಿ ಹೆಚ್ಚಿನವರು 5 ವರ್ಷ ಪ್ರಾಯದ ಮಕ್ಕಳು. ಈ ಎಲ್ಲರ ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಅವರಲ್ಲಿ ಕೆನೈನ್ ಕೊರೊನಾ ವೈರಸ್ ಪತ್ತೆಯಾಗಿತ್ತು.
ಇದನ್ನೂ ಓದಿ:ಕೋವಿಡ್ ಪೀಡಿತ ಸ್ತ್ರೀಯರಿಗೆ ಸರಕಾರಿ ಸಂಜೀವಿನಿ : 171 ಗರ್ಭಿಣಿಯರಿಗೆ ಕೋವಿಡ್ ಆರೈಕೆ
ಅಸಲಿಗೆ, ಇದು ಪ್ರಾಣಿಗಳಲ್ಲಿ ಕಂಡುಬರುತ್ತಾದ್ದರಿಂದ, ಮನುಷ್ಯರಲ್ಲಿ ಸಿಕ್ಕ ಈ ವೈರಾಣುವಿನ ಮೂಲವನ್ನು ಕೆದಕಿದ್ದ ವಿಜ್ಞಾನಿಗಳಿಗೆ ಅದು ಮಲೇಷ್ಯಾದ ಸಾಕು ನಾಯಿಗಳಿಂದ ಹರಡಿದ್ದು ದೃಢಪಟ್ಟಿತ್ತು. ಆಗ ನಾಯಿಗಳಲ್ಲಿ ಪತ್ತೆಯಾಗಿದ್ದು, ಕೆನೈನ್ ಕೊರೊನಾ ವೈರಾಣುವಿನ 8ನೇ ರೂಪಾಂತರಿ ವೈರಾಣು.
ಈಗ, ಜಗತ್ತಿನಾದ್ಯಂತ ಹರಡಿರುವ ನೊವೆಲ್ ಕೊರೊನಾ ವೈರಸ್‌ಗಳಿಗೂ ಕೆನೈನ್ ಕೊರೊನಾ ವೈರಸ್‌ಗಳ ರೂಪಾಂತರಿ ವೈರಾಣುಗಳೇ ಎಂಬ ಪ್ರಶ್ನೆಯೀಗ ವಿಜ್ಞಾನಿಗಳನ್ನು ಕಾಡಲು ಶುರುವಾಗಿದೆ. ಹಾಗಾಗಿ ಈ ಕುರಿತಂತೆ ಸಂಶೋಧನೆಗಳು ಜರಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿ ಢಿಕ್ಕಿ ಲಕ್ನೋದಲ್ಲಿ ತುರ್ತು ಭೂಸ್ಪರ್ಶ

ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ : ಅಭಿಮಾನಿಗಳ ಭಾವನೆಗಳಿಗೆ ಸಕಾರಾತ್ಮಕ ಸ್ಪಂದನೆ: ಸಿಎಂ

ಪಾಕಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ: ಕಳೆದ 10 ದಿನದಲ್ಲಿ 2ನೇ ಬಾರಿ ಕಂಪಿಸಿದ ಭೂಮಿ

ಕಂದಕಕ್ಕೆ ಉರುಳಿದ ಪ್ರಯಾಣಿಕರ ವಾಹನ: 39 ಮಂದಿ ಸ್ಥಳದಲ್ಲೇ ಸಾವು

ವಿಸ್ತರಿಸಲಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನಷ್ಟು ಭದ್ರತಾ ಸಿಬಂದಿ