ಮಹಾಮಾರಿ ಕೊರೊನಾ: ಸಾವಿನ ಪ್ರಮಾಣ 1,523ಕ್ಕೆ ಏರಿಕೆ: ವೈದ್ಯರಿಗೂ ತಟ್ಟಿದ ಸೋಂಕು !

Team Udayavani, Feb 15, 2020, 9:20 AM IST

ವುಹಾನ್: ಚೀನಾದಲ್ಲಿ ವ್ಯಾಪಿಸಿರುವ ಕಂಡು ಕೇಳರಿಯದ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಶುಕ್ರವಾರ ಒಂದೇ ದಿನ 143 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ಕೊರೊನಾ ವೈರಸ್ ನ ಮೂಲ ಹುಬೈ ಪ್ರಾಂತ್ಯದಲ್ಲಿ ಮತ್ತೆ 2,420 ಜನರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಮಾತ್ರವಲ್ಲದೆ ಶುಕ್ರವಾರ ಈ ಪ್ರಾಂತ್ಯದಲ್ಲಿ  139 ಜನರು ಮೃತಪಟ್ಟಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಇಂದಿನ ವರದಿಯ ಪ್ರಕಾರ ಒಟ್ಟಾರೆ ಸೋಂಕು ತಗುಲಿದವರ ಪ್ರಮಾಣ 66,000ಕ್ಕೆ ಏರಿಕೆಯಾಗಿದೆ. ಹುಬೈ ಪ್ರಾಂತ್ಯದಲ್ಲಿ 54,406 ಜನರು ಈ ಮಾರಕ ವೈರಾಣುವಿಗೆ ತುತ್ತಾಗಿದ್ದಾರೆ.

ವೈದ್ಯರಿಗೆ ಸೋಂಕು: ದುರಂತವೆಂದರೇ ಕೊರೊನಾ ಪೀಡಿತ ಜನರನ್ನು ರಕ್ಷಿಸಲು ಮುಂದಾದ 1,716 ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದ್ದು ಅದರಲ್ಲಿ  ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅದರಲ್ಲೂ ವುಹಾನ್ ಪ್ರಾಂತ್ಯ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕುವಿಗೆ ತುತ್ತಾಗಿದ್ದಾರೆ,

ಮಾಸ್ಕ್ ಗಳ ಕೊರತೆ: ದಿನೇ ದಿನೇ ಸೋಂಕಿತರ ಪ್ರಮಾಣ  ಏರಿಕೆಯಾಗುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಪೂರೈಸಲಾಗುತ್ತಿಲ್ಲ ಎಂದು ಚೀನಾ ಸರ್ಕಾರ ತಿಳಿಸಿದೆ ಎಮದು ವರದಿಯಾಗಿದೆ. ಇದರಿಮದಲೂ ಸಾವಿನ ಪ್ರಮಾಣ ಏರಿಕೆ ಯಾಗುತ್ತಿದೆ ಎಂಬ ಮಾಹಿತಿ ಆತಂಕ ಮೂಡಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ