ನನ್ನ ತಂಗಿಯನ್ನು ಕಳೆದುಕೊಂಡಿದ್ದು ನಮ್ಮ ತಪ್ಪಿನಿಂದ: ನೀವು ಹಾಗೆ ಮಾಡಬೇಡಿ, ಎಚ್ಚರದಲ್ಲಿರಿ


Team Udayavani, Mar 30, 2020, 3:15 PM IST

ನನ್ನ ತಂಗಿಯನ್ನು ಕಳೆದುಕೊಂಡಿದ್ದು ನಮ್ಮ ತಪ್ಪಿನಿಂದ: ನೀವು ಹಾಗೆ ಮಾಡಬೇಡಿ, ಎಚ್ಚರದಲ್ಲಿರಿ

ಪ್ಯಾರಿಸ್‌: ಆಕೆ ದುಃಖ್ಖದಲ್ಲಿರುವವರ ಮೊಗದಲ್ಲಿಯೂ ನಗು ಮೂಡಿಸುವ ಉಲ್ಲಾಸದ ಬುಗ್ಗೆ, ಸದಾ ಹಸನ್ಮುಖದಿಂದ ಅರಳು ಹುರಿದಂತೆ ಮಾತನಾಡುತ್ತ ತನ್ನ ಸುತ್ತಮುತ್ತ ಇರುವ ವರನ್ನು ಖುಷಿಗೊಳಿಸುವ ಸಂತೋಷದ ಚಿಲುಮೆ.
ಆದರೆ ಅ ನಗು ಇಂದು ಮಾಯ. ಪಟಪಟ ಮಾತುಗಳೆಲ್ಲಾ ಮೌನಕ್ಕೆ ಜಾರಿವೆ. ಭವಿಷ್ಯದಲ್ಲಿ ಸಾಧನೆಯ ಶಿಖರ ಏರಬೇಕೆಂಬ ಹಂಬಲದ ಆಕೆಯನ್ನು ಕೋವಿಡ್ 19 ಕಸಿದುಕೊಂಡಿದೆ.

ನಾವು ನಮ್ಮ ಸಂತೋಷ, ಖುಷಿ, ಆಸೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಆದರೆ ನಿಮ್ಮ ಬಳಿ ಇನ್ನೂ ಸಮಯ ಇದೆ. ಹಾಗಾಗಿ ದಯಮಾಡಿ ಕೇಳಿಕೊಳ್ಳುತ್ತಿದ್ದೇನೆ. ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ.
ಹೀಗೆ ವಿನಂತಿ ಮಾಡುತ್ತಿರುವುದು ಪ್ಯಾರಿಸ್‌ ನಲ್ಲಿ ತನ್ನ ತಂಗಿಯನ್ನು ಕಳೆದುಕೊಂಡ ಓರ್ವ ಅಕ್ಕ. ಆಕೆ ತನ್ನ ಸಂದೇಶದಲ್ಲಿ ತಿಳಿಸಿ ರುವುದೇನು ಗೊತ್ತೇ?

ಸಣ್ಣ ಶೀತವಷ್ಟೇ…!
ಒಂದು ವಾರದ ಹಿಂದೆ ತಂಗಿ ಜೂಲಿಯಾಗೆ ಸಣ್ಣದಾಗಿ ಶೀತ ಮತ್ತು ಕಫ ಕಾಣಿಸಿಕೊಂಡಿತ್ತು. ನೆಗಡಿ ಆಗಿರಬೇಕು ಎಂದು ಭಾವಿಸಿದೆವು. ಸ್ಟೀಮಿಂಗ್‌ ಹಾಗೂ ಶೀತದ ಔಷಧ ತೆಗೆದುಕೊಂಡು ಆರಾಮಾಗಿ ಮಲಗಿದ್ದಳು. ಮರುದಿನ ಅದೇ ಸಮಸ್ಯೆ ಎದುರಾಯಿತು. ಕೂಡಲೇ ನಾವು ನಮ್ಮ ಸ್ಥಳೀಯ ವೈದ್ಯರನ್ನು ಸಂರ್ಪಕಿಸಿದ್ದೆವು. ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ ಜೂಲಿಯಾಗೆ ಮತ್ತೆ ಉಸಿರಾಟ ಸಮಸ್ಯೆ ಆರಂಭವಾಯಿತು. ಆಕೆಯನ್ನು ತತ್‌ಕ್ಷಣ ಪ್ಯಾರಿಸ್‌ನ ಆಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ನಿಗಾ ಘಟಕಕ್ಕೆ ವರ್ಗಾವಣೆ ಮಾಡಲಾಯಿತು. ಕೇವಲ ಉಸಿರಾಟದ ಸಮಸ್ಯೆಗೆ ಇಷ್ಟೆಲ್ಲಾ ಎಚ್ಚರಿಕೆ ಏಕೆ ಎಂಬ ಭಯ ಆರಂಭವಾಯಿತು.

ಶ್ವಾಸಕೋಶದ ಸಮಸ್ಯೆ; ಹೆದರುವ ಅಗತ್ಯ ಇಲ್ಲ
ತುರ್ತು ಮನೆಯ ವಾಸಿಯಾದವಳಿಗೆ ಎಲ್ಲ ಪರೀಕ್ಷೆಯೂ ನಡೆಯಿತು. ಶ್ವಾಸ ಕೋಶದ ಎಕ್ಸ್‌ರೇ ಕೂಡ ಬಂತು. ಅ ಕುರಿತಾಗಿ ವೈದ್ಯರು ಶ್ವಾಸಕೋಸದಲ್ಲಿ ಕೊಂಚ ಸಮಸ್ಯೆಯಾಗಿದೆ ಹೆದರುವ ಅಗತ್ಯ ಇಲ್ಲ ಎಂದು ಧೈರ್ಯ ತುಂಬಿದರು. ಚಿಕಿತ್ಸೆಗೆ ಸ್ಪಂದಿಸಿದ ಕಾರಣಕ್ಕೋ ಏನೋ ಅಂದೇ ಅವಳನ್ನು ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಿದರು. ನಾವು ಅವಳ ಯೋಗ ಕ್ಷೇಮ ವಿಚಾರಿಸಿ, ನಿಟ್ಟುಸಿರು ಬಿಟ್ಟು ಮನೆಗೆ ತೆರಳಿದೆವು.

ಕೋವಿಡ್ 19ನ  ಕರೆ ರಿಂಗನಿಸಿತು
ಆದರೆ ಅಂದೇ ಪುನಾ ಜೂಲಿಯಾಗೆ ಉಸಿರಾಟದ ಸಮಸ್ಯೆ ಕಾಡತೊಡಗಿತು. ಅವಳನ್ನು ಅಲ್ಲಿಯೇ ಮಕ್ಕಳ ಆಸ್ಪತ್ರೆ ವಿಭಾಗಕ್ಕೆ ವರ್ಗಾಯಿಸಿದರು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಅಷ್ಟರಲ್ಲೇ ಜೂಲಿಯಾ ಮಾತನಾಡಲೂ ಸಹ ಕಷ್ಟಪಡುತ್ತಿದ್ದಳು. ಅವಳಲ್ಲಿ ಆತಂಕ ಮನೆ ಮಾಡಿತ್ತು. ಆದರೂ ವೈದ್ಯರು, ನೀವು ಮನೆಗೆ ಹೊರಡಿ. ನಾವು ನೋಡಿಕೊಳ್ಳುತ್ತೇವೆ ಎಂದರು. ಅಸಹಾಯಕರಾಗಿ ಮನೆಗೆ ತಲುಪಿದೆವು.

ನಾವು ಮನೆ ತಲುಪಿ ಕೆಲವು ಗಂಟೆಗಳಾಗಿರಬಹುದು. ಫೋನ್‌ ರಿಂಗಣಿಸಿತು. ಅತ್ತ ಜೂಲಿಯಾಳ ಕೋವಿಡ್‌-19 ಪರೀಕ್ಷೆಯ ವರದಿ ಸಕಾರಾತ್ಮಕವಾಗಿತ್ತು. ನಾವು ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಮುದ್ದಿನ ತಂಗಿ ನಮ್ಮನ್ನು ಅಗಲಿದ್ದಳು.

ಇಂದಿಗೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ನಮ್ಮ ನಿರ್ಲಕ್ಷéಕ್ಕೆ ನಾವು ಇಂದು ಸಹಿಸಲಾಗದಂತಹ ನಷ್ಟ ಹೊಂದಿದ್ದೇವೆ. ಆದರೆ ನೀವು ಈ ಸರದಿಯಲ್ಲಿ ಬರಬೇಡಿ. ನಿಮ್ಮ, ನಿಮ್ಮವರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟ ಸರಕಾರಗಳ ಆದೇಶವನ್ನು ಪಾಲಿಸಿ, ಎಂದು ಜೂಲಿಯಾಳ ಅಕ್ಕ ಮಾನನ್‌ ಇತರ ರಾಷ್ಟ್ರಗಳಿಗೆ ಸಂದೇಶ ನೀಡಿದ್ದಾಳೆ.

ಈಗಾಗಲೇ ಯುರೋಪ್‌ ಪ್ರಾಂತ್ಯದ ರಾಷ್ಟ್ರಗಳಲ್ಲಿ ಕೋವಿಡ್‌-19 ಮರಣ ಮೃದಂಗ ಮುಂದುವರಿಸಿದೆ. ಸುಮಾರು 14 ಸಾವಿರ ಸೋಂಕಿತರಿದ್ದು, 548 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಜೂಲಿಯಾಳ ಸಾವು ಅಲ್ಲಿನ ಜನರಿಗೆ ಪಾಠವಾಗಿದ್ದು, ಹಿರಿಯ ವಯಸ್ಕರಿಗೆ ಮತ್ತು ವಯೋವೃದ್ಧರಿಗೆ ಮಾತ್ರ ಕೋವಿಡ್‌-19 ಬಲಿಯಾಗುತ್ತಾರೆ ಎಂಬ ಸುದ್ದಿಯನ್ನು ಸುಳ್ಳು ಮಾಡಿದೆ. ಇನ್ನೂ ಜೂಲಿಯಾ (16) ಕೊರೊನಾಕ್ಕೆ ಬಲಿಯಾದ ಅತ್ಯಂತ ಕಿರಿಯಳು.

ಸಕಲಕಲಾ ವಲ್ಲಭೆ
ಆಕೆ ಓರ್ವ ಉತ್ತಮ ಹಾಡುಗಾರ್ತಿ, ನೃತ್ಯಗಾತಿ. ಒಟ್ಟಾರೆಯಾಗಿ ಹೇಳಬೇಕೆಂದರೆ ಸಕಲಕಲಾ ವಲ್ಲಭೆ. ಸದಾ ಎಲ್ಲರನ್ನು ಖುಷಿಯಿಂದ, ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಆದರೆ ಅವಳು ನಮ್ಮೊಟ್ಟಿಗೆ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ.
– ಜೂಲಿಯಾಳ ಸ್ನೇಹಿತೆ

ಸಣ್ಣದಾಗಿ ಕೆಮ್ಮು ಶೀತ ಬಂದಾಗಲೇ ಎಚ್ಚೆತ್ತು ಕೊಳ್ಳಬೇಕಿತ್ತು. ಆದರೆ ಸಿರಪ್‌, ಸ್ಟೀಮ್‌ ತೆಗೆದುಕೊಳ್ಳುವುದರಿಂದ ಗುಣವಾಗುತ್ತದೆ ಎಂದು ಭಾವಿಸಿದ್ದೆವು. ಕೋವಿಡ್‌-19 ಸೋಂಕಿನ ಗುಣ ಲಕ್ಷಣ ಇಲ್ಲ ಎಂಬ ನಿರ್ಲಕ್ಷé ನಮ್ಮನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ನೀವು ಹಾಗೆ ಮಾಡಬೇಡಿ.
– ಸಬೈನ್‌, ಜೂಲಿಯಾಳ ತಾಯಿ

ಟಾಪ್ ನ್ಯೂಸ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.