ಡಿ ಗ್ಯಾಂಗ್ ಪಾತಕಿ ದಾವೂದ್ ಹತ್ಯೆಗೆ ಸ್ಕೆಚ್ ಹಾಕಿದ್ದ ಆಪ್ತ ಫಿನಿಶ್?
Team Udayavani, Jan 15, 2019, 9:21 AM IST
ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಫಾರೂಖ್ ಡೆವ್ಡಿವಾಲಾನನ್ನು ಪಾಕಿಸ್ತಾನದ ಕರಾಚಿಯಲ್ಲಿ ಹತ್ಯೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಡಿ ಕಂಪನಿಯ ಬಾಸ್ ದಾವೂದ್ ಇಬ್ರಾಹಿಂನ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ ಎಂಬುದು!
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕಳೆದ ವರ್ಷ ದುಬೈ ಸರ್ಕಾರ ಫಾರೂಖ್ ನನ್ನು ಬಂಧಿಸಿತ್ತು. ಆದರೆ ಭಾರತಕ್ಕೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿ ಆತನನ್ನು ದೇಶಕ್ಕೆ ಕರೆ ತರಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಕೂಡಾ ವಿಫಲವಾಗಿತ್ತು. ಏತನ್ಮಧ್ಯೆ ಪಾಕಿಸ್ತಾನ ಫಾರೂಖ್ ಬಗ್ಗೆ ನಕಲಿ ಗುರುತು ಪತ್ರ ದಾಖಲೆ, ಪಾಕಿಸ್ತಾನ ಪ್ರಜೆ ಎಂಬ ನಕಲಿ ಪುರಾವೆಯನ್ನು ನೀಡಿ ಗಡಿಪಾರು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಎಂದು ವಿವರಿಸಿದೆ.
ಡೇವ್ಡಿವಾಲಾ ದುಬೈ ಜೈಲಿನಲ್ಲಿದ್ದಾಗ ಭಾರತದ ರಾ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದ ಎಂಬ ಗುಪ್ತ ಮಾಹಿತಿ ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ಗೆ ಗೊತ್ತಾಗಿತ್ತು ಎಂದು ಮೂಲಗಳು ತಿಳಿಸಿವೆ. ತದನಂತರ ಇನ್ನು ಮುಂದೆ ಡೇವ್ಡಿವಾಲನನ್ನು ಹೆಚ್ಚು ಕಾಲ ನಂಬುವಂತಿಲ್ಲ ಎಂದು ಮನಗಂಡ ಶಕೀಲ್ ಮತ್ತು ದಾವೂದ್ ಆತನನ್ನು ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ