ವರದಿಗಾರ್ತಿಯ ಮೈಕ್ ಕಿತ್ತುಕೊಂಡು ಪರಾರಿಯಾದ ನಾಯಿ : ಮುಂದೆ ಏನಾಯ್ತು ನೀವೇ ನೋಡಿ!
Team Udayavani, Apr 3, 2021, 2:46 PM IST
ರಷ್ಯಾ : ಪತ್ರಕರ್ತರೊಬ್ಬರು ಲೈವ್ ಪ್ರೋಗ್ರಾಮ್ ನೀಡುವ ವೇಳೆ ಯಾರಾದರೂ ಅವರ ಮೈಕ್ ಕಿತ್ತುಕೊಂಡು ಪರಾರಿಯಾದರೆ ಹೇಗಿರುತ್ತದೆ ಹೇಳಿ. ಕೇಳಲು ಇಷ್ಟು ಹಾಸ್ಯವಾಗಿದೆ ಅಲ್ವಾ. ಆದ್ರೆ ಇಂತಹ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ. ಮಿರ್ ಟಿವಿಯಲ್ಲಿ ಲೈವ್ ಪ್ರೋಗ್ರಾಮ್ ನೀಡುತ್ತಿದ್ದ ವರದಿಗಾರ್ತಿ ಡೆಜ್ಡಾ ಸೆರೆಜ್ಕಿನಾ ಎಂಬುವವರ ಕೈಯಿಂದ ನಾಯಿಯೊಂದು ಮೈಕ್ ಕಿತ್ತುಕೊಂಡು ಪರಾರಿಯಾಗಿದೆ.
ಸ್ಟುಡಿಯೋದಲ್ಲಿ ನಿರೂಪಕರು ಮತ್ತು ವರದಿಗಾರ್ತಿ ಜೊತೆ ಸುದ್ದಿಯ ಬಗ್ಗೆ ಮಾತುಕತೆ ನಡೆಯುವ ವೇಳೆ ನಾಯಿಯು ಈ ಕೆಲಸ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ನೆಟ್ಟಿಗರು ವಿಡಿಯೋ ನೋಡಿ ತುಂಬಾ ಎಂಜಾಯ್ ಮಾಡುತ್ತಿದ್ದಾರೆ.
A dog in Russia grabbed the reporter’s microphone and ran away during a live broadcast pic.twitter.com/R1T8VZ5Kpt
— Ali Özkök (@Ozkok_A) April 2, 2021
ಇನ್ನು ನಾಯಿ ಮೈಕ್ ಕಿತ್ತುಕೊಂಡು ಓಡುವ ದೃಶ್ಯಗಳು ಕೂಡ ಟಿವಿಯಲ್ಲಿ ಪ್ರಸಾರವಾಗಿವೆ. ಕ್ಯಾಮೆರಾ ಮೆನ್ ಈ ವಿಡಿಯೋವನ್ನೂ ಸೆರೆ ಹಿಡಿದಿದ್ದು, ನೇರ ಪ್ರಸಾರ ಕಾರ್ಯಕ್ರಮವಾದ್ದರಿಂದ ನಾಯಿಯಿಂದೆ ವರದಿಗಾರ್ತಿ ಓಡಿಹೋಗುವ ವಿಡಿಯೋ ಕೂಡ ಪ್ರಸಾರವಾಗಿದೆ.
ಕೆಲವು ದಿನಗಳ ನಂತರ ಈ ರೀತಿ ಅವಾಂತರ ಮಾಡಿದ ನಾಯಿಯ ಬಗ್ಗೆ ಅದೇ ವರದಿಗಾರ್ತಿ ವರದಿಯನ್ನು ಮಾಡಿದ್ದು, ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ.