ಟ್ರಂಪ್ ಆದೇಶಕ್ಕೆ ತಡೆ
Team Udayavani, Nov 21, 2018, 11:33 AM IST
ವಾಷಿಂಗ್ಟನ್: ಅಕ್ರಮವಾಗಿ ಪ್ರವೇಶಿಸುವ ನಿರಾಶ್ರಿತರಿಗೆ ಅಮೆರಿಕದಲ್ಲಿ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆದೇಶಕ್ಕೆ ಸ್ಯಾನ್ಫ್ರಾನ್ಸಿಸ್ಕೋದ ಜಿಲ್ಲಾ ನ್ಯಾಯಾಧೀಶ ಜೋನ್ ಟಿಗರ್ ತಡೆಯಾಜ್ಞೆ ನೀಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಟ್ರಂಪ್ ಅವರು, ಅಮೆರಿಕದ ಅಧಿಕೃತ ಚೆಕ್ ಪೋಸ್ಟ್ಗಳ ಮೂಲಕ ನಿರ್ದಿಷ್ಟ ಕಾರಣಕ್ಕಾಗಿ ಆಗಮಿಸುವವರಿಗೆ ಪ್ರವೇಶವಿದೆ. ಆದರೆ, ಅಕ್ರಮವಾಗಿ ಅಮೆರಿಕದೊಳಗೆ ಬರುವ ನಿರಾಶ್ರಿತರು ಅಂಥ ಕಾರ್ಯಗಳಿಗೆ ಮುಂದಾಗುವುದನ್ನು ಬಿಟ್ಟು ಆಶ್ರಯಕ್ಕಾಗಿ ಮನವಿ
ಸಲ್ಲಿಸಬೇಕು ಎಂದು ಆದೇಶಿಸಿದ್ದರು. ಈಗ ನ್ಯಾಯಾಧೀಶ ಜೋನ್, ಟ್ರಂಪ್ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ
ನೀಡಿದ್ದಾರೆ. ಅಧ್ಯಕ್ಷರ ಅಧಿಕಾರ ಏನೇ ಇರಬಹುದು. ಆದರೆ ಅವರಿಗೆ ವಲಸೆ ಕಾನೂನನ್ನು ಹೊಸದಾಗಿ ಬರೆಯಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ