ವಿಸ್ಕಿ ತೆರಿಗೆಗೆ ಟ್ರಂಪ್‌ ಕಿಡಿ

Team Udayavani, Jan 26, 2019, 12:30 AM IST

ವಾಷಿಂಗ್ಟನ್‌: ಅಮೆರಿಕದ ಸರಕುಗಳಿಗೆ ಅತಿ ಹೆಚ್ಚು ತೆರಿಗೆ ವಿಧಿಸುವ ಭಾರತ ಮತ್ತಿತರ ರಾಷ್ಟ್ರಗಳ ವಿರುದ್ಧ ಟ್ರಂಪ್‌ ಪುನಃ ಕಿಡಿಕಾರಿದ್ದಾರೆ. ವೈಟ್‌ಹೌಸ್‌ನಲ್ಲಿ ಗುರುವಾರ, ತಮ್ಮ ರಿಪಬ್ಲಿಕನ್‌ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ಅವರು, ತಾವು ಜಾರಿಗೊಳಿಸಲು ಉದ್ದೇಶಿಸಿರುವ ರೆಸಿಪ್ರೋಕಲ್‌ ದರಗಳ ಕಾಯ್ದೆಯ ಬಗ್ಗೆ ಚರ್ಚಿಸಿ, ಭಾರತವು ಅಮೆರಿಕದ ವಿಸ್ಕಿ ಮೇಲೆ ಶೇ. 150 ತೆರಿಗೆ ವಿಧಿಸುತ್ತಿರುವುದನ್ನು ಆಕ್ಷೇಪಿಸಿದರು. ಜತೆಗೆ, 2 ನಿಮಿಷಗಳ ಮಾತುಕತೆಯ ಮೂಲಕ ಹಾರ್ಲೆ- ಡೇವಿಡ್‌ಸನ್‌ ಬೈಕ್‌ ಮೇಲೆ ಶೇ. 50ರಷ್ಟು ತೆರಿಗೆ ಇಳಿಸುವಂತೆ ಮಾಡಿದ್ದೇನೆ ಎಂದು ಹೇಳಿದರು. ಆದರೆ, ರೆಸಿಪ್ರೊಕಲ್‌ ತೆರಿಗೆ ಪದ್ಧತಿಗೆ ಟ್ರಂಪ್‌ ಅವರ ಪಕ್ಷದಲ್ಲೇ ಆಕ್ಷೇಪ ಎದ್ದಿದೆ. ಜತೆಗೆ, ಸಂಸತ್ತಿನ ಮೇಲ್ಮನೆಯಲ್ಲಿ ಡೆಮಾಕ್ರಟಿಕ್‌ ಸಂಸದರದ್ದೇ ಪ್ರಾಬಲ್ಯ ಇರುವುದರಿಂದ ಪ್ರಸ್ತಾವನೆಗೆ ಮಾನ್ಯತೆ ಸಿಗುವುದು ಅನುಮಾನ ಎನ್ನಲಾಗಿದೆ.
 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ